Ticker

6/recent/ticker-posts

Ad Code

Responsive Advertisement

ಕನಕ ಮನೆ ಮನೆ ತನಕ' ವಿಶೇಷ ಕೀರ್ತನಾ ಕಾರ್ಯಗಾರ

`ಕನಕ ಮನೆ ಮನೆ ತನಕ' ಎನ್ನುವ ವಿನೂತನ ಕನಕದಾಸರ ಕುರಿತ ವಿಶೇಷ ಕೀರ್ತನಾ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ.

 ರಾಷ್ಟೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಬೆಂಗಳೂರು ಹಾಗೂ ಭಾರತೀಯ ವಿದ್ಯಾ ಭವನ, ಬೆಂಗಳೂರು  ಇವುಗಳ ಜಂಟಿ ಆಶ್ರಯದಲ್ಲಿ  ಡಿಸೆಂಬರ್ 06 ರಿಂದ ಡಿಸೆಂಬರ್ 10 ರವರೆಗೆ 5 ದಿನಗಳ ಕಾಲ `ಕನಕ ಮನೆ ಮನೆ ತನಕ' ಕನಕ ಕೀರ್ತನಾ ಕಾರ್ಯಗಾರ ನಡೆಯಲಿದೆ.
       ಈ ಕನಕ ಕೀರ್ತನಾ ಕಾರ್ಯಗಾರವನ್ನು ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾ ಭವನದಲ್ಲಿ ಆಯೋಜಿಸಲಾಗಿದೆ. ಕನಕದಾಸರ ಅಪೂರ್ವ ಹಾಗೂ ಈವರೆಗೆ ಅಷ್ಟಾಗಿ ಪ್ರಚಾರ ಪಡೆಯದ ಕೆಲವು ಕೀರ್ತನೆಗಳನ್ನು ನುರಿತ ಹಾಗೂ ಹೆಸರಾಂತ ವಿದ್ವಾಂಸರುಗಳಿAದ ತರಬೇತಿ ನೀಡಲಾಗುವುದು.
  ತರಬೇತಿಯಲ್ಲಿ 100 ಜನ ಅಭ್ಯರ್ಥಿಗಳಿಗೆ ಅವಕಾಶವಿದ್ದು ಮೊದಲು ನೊಂದಾಯಿಸಿದವರಿಗೆ ಮೊದಲ ಆದ್ಯತೆ ನೀಡಲಾಗುವುದು. ರಾಜ್ಯದ ಯಾವುದೇ ಭಾಗಗಳಿಂದ ಆಸಕ್ತರು ಅರ್ಜಿಗಳನ್ನು ಸಲ್ಲಿಸಬಹುದು. ಕೀರ್ತನೆಗಳನ್ನು ಕಲಿತು ಮುಂದಿನ ದಿನಗಳಲ್ಲಿ ಪ್ರಚಾರ ಮಾಡುವ ಹಾಗೂ ಕಾರ್ಯಕ್ರಮಗಳನ್ನು ನೀಡುವ ಆಸಕ್ತಿ ಇದ್ದವರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು. ಕಾರ್ಯಾಗಾರದಲ್ಲಿ ಭಾಗವಹಿಸಿದವರಿಗೆ ಊಟದ ವ್ಯವಸ್ಥೆ ಹಾಗೂ ಹೊರಗಿನಿಂದ ಬರುವವರಿಗೆ ವಸತಿ ಸೌಲಭ್ಯವನ್ನು ಕಲ್ಪಿಸಲಾಗುವುದು. ಭಾಗವಹಿಸಿದ ಎಲ್ಲಾ ಶಿಬಿರಾಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಗುವುದು.
20 ರಿಂದ 50 ವರ್ಷ ವಯೋಮಿತಿಯವರು ನವೆಂಬರ್‌:25 ರೊಳಗೆ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಆಸಕ್ತರು ಈ ಕೆಳಗೆ ಕೊಟ್ಟಿರುವ ದೂರವಾಣಿ ಹಾಗೂ ಇಮೇಲ್
ಮುಖಾಂತರ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು.
ಕನಕ ಅಧ್ಯಯನ ಕೇಂದ್ರದ ದೂರವಾಣಿ ಸಂಖ್ಯೆ: 080 : 22113147
ಇಮೇಲ್ :  kanakaresearchcentre@gmail.com
ಭಾರತೀಯ ವಿದ್ಯಾ ಭವನದ ದೂರವಾಣಿ ಸಂಖ್ಯೆ: 080 : 22267421
VARTHAJALA, MALLESWARAM, BENGALURU


Post a Comment

0 Comments

Ad Code

Responsive Advertisement