Rainbow launches city's first Paediatric Emergency Services
ನಗರದ ಪ್ರತಿಷ್ಠಿತ ರೇನ್ ಬೋ ಆಸ್ಪತ್ರೆಯು ಭಾನುವಾರ ಬೆಂಗಳೂರು ನಗರದ ಪ್ರಥಮ ಪೀಡಿಯಾಟ್ರಿಕ್ ತುರ್ತು ಸೇವೆಗಳನ್ನು ಆರಂಭಿಸಿದೆ. ಹೆಬ್ಬಾಳ ಮತ್ತು ಬನ್ನೇರುಘಟ್ಟ ರಸ್ತೆಯಲ್ಲಿರುವ ಮಾರತ್ತಹಳ್ಳಿ ರೇನ್ ಬೋ ಆಸ್ಪತ್ರೆಗಳಲ್ಲಿ ಈ ಸೇವೆಯು ಲಭ್ಯವಾಗಲಿದೆ. ದಿನದ 24 ಗಂಟೆಯೂ ತುರ್ತು ಸೇವೆಗಳು ಲಭ್ಯವಿದ್ದು, ವಿಶೇಷ ತಜ್ಞರು ಲಭ್ಯವಿರುವರು. ಅಷ್ಠೆ ಅಲ್ಲ ತುರ್ತುಸೇವೆಗೆ ಕರೆದೊಯ್ಯಲು ಅಂಬ್ಯುಲೆನ್ಸ್ ಸೇವೆ, ರೇಡಿಯಾಲಜಿ ಮತ್ತು ಪೆಥಾಲಜಿ ಲ್ಯಾಬ್ ಗಳು 24*7 ಸೇವೆ ಒದಗಿಸಲಿವೆ. ತುರ್ತುಸೇವೆಗೆ ಸಹಾಯವಾಣಿ 080 424-12345ಗೆ ಕರೆ ಮಾಡಿ ಅಂಬ್ಯುಲೆನ್ಸ್ ಸೇವೆ ಪಡೆಯ ಬಹುದಾಗಿದೆ.
ಕೋವಿಡ್ ಸಂಕಷ್ಠ ಕಾಲದಲ್ಲಿ ಮಕ್ಕಳಿಗಾಗಿ ಹಾಸಿಗೆಗಳನ್ನು ಮೀಸಲಿರಿಸಿದ ಬೆಂಗಳೂರಿನ ಏಕೈಕ ಖಾಸಗಿ ಆಸ್ಪತ್ರೆ ರೇನ್ ಬೋ ಆಗಿತ್ತು. ಈಗ ಮಕ್ಕಳಿಗಾಗಿ 24*7 ತುರ್ತು ಸೇವೆಗಳನ್ನು ಆರಂಭಿಸುತ್ತಿರುವುದು ಶ್ಲಾಘನೀಯ ಎಂದು ಹಿರಿಯ ಐಪಿಎಸ್ ಅಧಿಕಾರಿ ಹಾಗೂ ರಾಜ್ಯ ಕರ ಕುಶಲ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ರೂಪಾ ಮೌದ್ಗಿಲ್ ಹೇಳಿದ್ದಾರೆ.
ಬೆಂಗಳೂರು ನಗರದ ತಾಜ್ ಹೋಟೆಲ ನಲ್ಲಿ ರೇನ್ ಬೋ ಆಸ್ಪತ್ರೆಯ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ರೂಪಾ ಮೌದ್ಗಿಲ್ ಅವರು ರೇನ್ ಬೋ ಆಸ್ಪತ್ರೆಯ ಪೀಡಿಯಾಟ್ರಿಕ್ ತುರ್ತು ಸೇವೆಗಳಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸ್ವತ: ಎರಡು ಮಕ್ಕಳ ತಾಯಿಯಾಗಿ , ಮಕ್ಕಳ ಆರೋಗ್ಯ ತೊಂದರೆಗೆ ಒಳಗಾದಾಗ ಕಠಿಣ ಸಂದರ್ಭಗಳನ್ನು ಎದುರಿಸಿದ್ದೇನೆ. ತಡರಾತ್ರಿ ಸಂದರ್ಭಗಳಲ್ಲಿ ನನ್ನ ಸ್ನೇಹಿತರ ಮಕ್ಕಳ ಆರೋಗ್ಯ ಹದಗೆಟ್ಟಾಗ ಚಿಕಿತ್ಸೆಗಾಗಿ ಆತಂಕ ಪಟ್ಟಿದ್ದನ್ನು ಕಂಡಿದ್ದೇನೆ. ರಾತ್ರಿ ವೇಳೆಗಳಲ್ಲಿ ಮಕ್ಕಳಿಗೆ ಅನಾರೋಗ್ಯ ಉಂಟಾದಾಗ ಮಕ್ಕಳ ವಿಶೇಷ ತಜ್ಞರ ಲಭ್ಯತೆ ಇರುವುದಿಲ್ಲ. ಎಷ್ಟೋ ವೇಳೆ ಮಕ್ಕಳನ್ನು ತುರ್ತು ಚಿಕಿತ್ಸೆಗೆ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಅನುಭವಿ ತಜ್ಞ ವೈದ್ಯರು ಲಭ್ಯರಿರುವುದಿಲ್ಲ , ಜನರಲ್ ಡಾಕ್ಟರ್ ಗಳು ಅಥವ ಜೂನಿಯರ್ ವೈದ್ಯರುಗಳು ಇರುತ್ತಾರೆ. ಇಂತಹ ಸಂದರ್ಭಗಳ ಕೊರತೆಯನ್ನು ನೀಗಲು ರೇನ್ ಬೋ ಆಸ್ಪತ್ರೆ ಅಗತ್ಯ ಕ್ರಮವಹಿಸಿ 24*7 ತುರ್ತು ಸೇವೆಗಳನ್ನು ಆರಂಭಿಸಿರುವುದು ಶ್ಲಾಘನೀಯ ಎಂದು ರೂಪಾ ಮೌದ್ಗಿಲ್ ಹೇಳಿದರು. ತುರ್ತು ಸೇವೆಗಳ ಲಭ್ಯತೆ ಅನೇಕ ಮಕ್ಕಳ ಪೋಷಕರ ಆತಂಕವನ್ನು ಕಡಿಮೆ ಮಾಡಲಿದೆ. ಈ ನಿಟ್ಟಿನಲ್ಲಿ ರೇನ್ ಬೋ ಆಸ್ಪತ್ರೆಯ ವೈದ್ಯರು, ತಜ್ಞರು ಮತ್ತು ಸಿಬ್ಬಂದಿಗಳ ಪರಿಶ್ರಮ ಅಭಿನಂದನೀಯವಾಗಿದೆ. ನಗರದ ವಿವಿದೆಡೆ ಇಂತಹ ಸೇವೆ ಆರಂಭವಾಗಿರುವುದನ್ನು ಪೋಷಕರು ಸದ್ಭಳಕೆ ಮಾಡಿಕೊಳ್ಳ ಬೇಕು ಎಂದು ರೂಪಾ ಮೌದ್ಗಿಲ್ ನುಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಚಲನಚಿತ್ರ ನಟಿ ಶ್ವೇತಾ ಶ್ರೀವಾತ್ಸವ್ ಮಾತನಾಡಿ “ ನಾನು ನನ್ನ ಮಗಳನ್ನು ತುಂಬಾ ಪ್ರೀತಿಸುತ್ತೇನೆ ಮತ್ತು ಮಕ್ಕಳಿಗೆ ಚಿಕಿತ್ಸೆ ನೀಡಲು ನನಗೆ ಸುರಕ್ಷಿತ ಚಿಕಿತ್ಸಾ ಸೇವೆಗಳು ಬೇಕು ಎಂಬುದನ್ನು ಅರಿತು ಕೊಂಡಿದ್ದೇನೆ. ಈ ನಿಟ್ಟಿನಲ್ಲಿ ರೇನ್ ಬೋ ಆಸ್ಪತ್ರೆ ಕಾಳಜಿಯೊಂದಿಗೆ ಅಗತ್ಯವಿರುವ ಪರಿಣತಿಯೊಂದಿಗೆ , ಸುರಕ್ಷಿತವಾದ ತುರ್ತು ಸೇವೆಗಳನ್ನು 24*7 ಆರಂಭಿಸಿದೆ. ನನ್ನಂತಹ ತಾಯಂದಿರಿಗೆ ಮಕ್ಕಳ ಕಾಳಜಿ ವಹಿಸುವ ವೈದ್ಯರ ತಂಡದ ಶ್ರೀರಕ್ಷೆ ಅಗತ್ಯ. ಅಂತಹ ತಂಡದೊಂದಿಗೆ ತುರ್ತು ಸೇವೆಗಳನ್ನು ರೇನ್ ಬೋ ಆಸ್ಪತ್ರೆ ಆರಂಭಿಸಿರುವುದು ಪ್ರಶಂಸನೀಯ ಎಂದರು.
ಈ ಸಂದರ್ಭದಲ್ಲಿ ರೇನ್ ಬೋ ಮಕ್ಕಳ ಆಸ್ಪತ್ರೆಯ ಉಪಾಧ್ಯಕ್ಷ ಅಕ್ಷಯ್ ಒಲೇಟಿ ಮಾತನಾಡಿ , ಬೆಂಗಳೂರು ನಗರದಲ್ಲಿ ಇದೇ ಪ್ರಥಮ ಭಾರಿಗೆ ಮಕ್ಕಳ ತುರ್ತು ಚಿಕಿತ್ಸೆಗೆ ರೇನ್ ಬೋ ಆಸ್ಪತ್ರೆಯು ತುರ್ತು ಸೇವೆ ಹಾಗೂ ಅಂಬ್ಯುಲೆನ್ಸ್ ಸೇವೆಯನ್ನು ಆರಂಭಿಸಲು ಹರ್ಷಿಸುತ್ತಿದೆ. ನಗರದಲ್ಲಿ ಇದು ಪ್ರಥಮ ಪ್ರಯತ್ನವಾಗಿದೆ, ಬೆಂಗಳೂರಿಗರಿಗೆ ಮತ್ತು ರಾಜ್ಯದ ವಿವಿಧ ಪ್ರದೇಶಗಳ ಮಕ್ಕಳ ಚಿಕಿತ್ಸೆಗೆ ಸಹಕಾರಿಯಾಗಿದೆ. ಮಕ್ಕಳು ಅನಾರೋಗ್ಯಕ್ಕೀಡಾದಾಗ ಪೋಷಕರು ತುರ್ತು ವೈಧ್ಯಕೀಯ ಸೇವೆಗಳಿಗೆ ಪರದಾಡುವ ಸ್ಥಿತಿ ಇದೆ. ಇಂತಹ ಸಂದಿಗ್ಧ ಪರಿಸ್ಥಿತಿಗಳನ್ನು ಎದುರಿಸಲು ರೇನ್ ಬೋ ಆಸ್ಪತ್ರೆಯು ಪೀಡಿಯಾಟ್ರಿಕ್ ತುರ್ತು ಸೇವೆಗಳನ್ನು ಆರಂಭಿಸಿದೆ ಹಾಗೂ ರೇನ್ ಬೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಒಂದೇ ಸಹಾಯವಾಣಿ ಸಂಪರ್ಕ ಸಂಖ್ಯೆಯನ್ನು ಒದಗಿಸಲಾಗುತ್ತಿದೆ ಎಂದರು. ಅಗತ್ಯ ತುರ್ತು ಸೇವೆಗಳನ್ನು ಪಡೆಯಲು ಪೋಷಕರು ಈ ಸಂಖ್ಯೆಗಳಿಗೆ ಕರೆ ಮಾಡಬಹುದು. ಸಕಾಲಕ್ಕೆ ಅಂಬ್ಯುಲೆನ್ಸ್ ಮತ್ತು ಆರೋಗ್ಯ ಸೇವೆಗಳನ್ನು ಪಡೆಯಲು ಪೋಷಕರು ಈ ಸಂಖ್ಯೆಯನ್ನು ಅಗತ್ಯವಾಗಿ ತಮ್ಮ ಸೇವೆಗಳ ಸಂಪರ್ಕ ಪಟ್ಟಿಯಲ್ಲಿ ಸೇರಿಸ ಬಹುದು ಎಂದರು.
“ ಸಾಮಾನ್ಯವಾಗಿ, ಆಸ್ಪತ್ರೆಗಳು ವಯಸ್ಕರು ಮತ್ತು ಮಕ್ಕಳಿಗಾಗಿ ವೈದ್ಯಕೀಯ ಸೇವೆ ಒದಗಿಸಲು ಒಂದೇ ಸಂಖ್ಯೆಯನ್ನು ಹೊಂದಿರುತ್ತವೆ. ಅಲ್ಲಿ ವಯಸ್ಕರನ್ನು ನಿರ್ವಹಿಸಲು ಪ್ರಾಥಮಿಕವಾಗಿ ತರಬೇತಿ ಪಡೆದ ತುರ್ತು ಸಿಬ್ಬಂದಿಯಿಂದ ಮಕ್ಕಳಿಗೆ ಸರಿಯಾದ ಚಿಕಿತ್ಸೆ ಮತ್ತು ಆರೈಕೆ ಸಿಗುವುದಿಲ್ಲ. ಈ ನಿಟ್ಟಿನಲ್ಲಿ ಮಕ್ಕಳಿಗಾಗಿ ತುರ್ತು ವೈಧ್ಯಕೀಯ ಸೇವೆಯ ಸಹಾಯ ವಾಣಿ ಸಂಖ್ಯೆ ಬೇಕಿದೆ. ಮಕ್ಕಳ ತುರ್ತು ಚಿಕಿತ್ಸೆಗಾಗಿ ಡೆಡಿಕೇಟ್ ಆಗಿರುವ ತುರ್ತು ಸಂಖ್ಯೆ ಇಲ್ಲ. ಅಂತಹ ಕೊರತೆಯನ್ನು ರೇನ್ ಬೋ ಆಸ್ಪತ್ರೆ ನೀಗಿದೆ. ತುರ್ತು ಸೇವೆಗೆ ಅಗತ್ಯವಾದ ವೈಧ್ಯಕೀಯ ಉಪಕರಣಗಳು ಮತ್ತು ತಜ್ಞರು , ಸಿ ಬ್ಬಂದಿ, ಸುಸಜ್ಜಿತವಾದ ಪ್ರಯೋಗ ಶಾಲೆಗಳನ್ನು ರೇನ್ ಬೋ ಆಸ್ಪತ್ರೆಗಳಲ್ಲಿ ಸನ್ನದ್ದ ಸ್ಥಿತಿಯಲ್ಲಿರಿಸಲಾಗಿದೆ. ತೀವ್ರ ನಿಗಾ ಘಟಕಗಳು 24*7 ತೆರೆದಿರುತ್ತವೆ. ಜ್ವರದಿಂದ ಬಳಲುವ ಮಕ್ಕಳು, ಅಕಸ್ಮಿಕ ಅಪಘಾತಗಳಿಗೆ ತುತ್ತಾಗುವ ಮಕ್ಕಳು ಮತ್ತು ನಾಣ್ಯವನ್ನು ನುಂಗಿ ತೊಂದರೆಗೀಡಾಗುವ ಮಕ್ಕಳಿಗೆ ತುರ್ತು ಚಿಕಿತ್ಸೆಯ ಅಗತ್ಯವಿರುತ್ತದೆ. ಅಂತಹ ಸಂದರ್ಭಗಳಲ್ಲಿ ರೇನ್ ಬೋ ಆಸ್ಪತ್ರೆ ಆರಂಭಿಸಿರುವ ತುರ್ತು ಸೇವೆಗಳ ಸಹಾಯವಾಣಿ 080 424-12345ಗೆ ಕರೆ ಮಾಡಿ ಚಿಕಿತ್ಸೆ ಪಡೆಯ ಬಹುದಾಗಿದೆ ಎಂದು ಅಕ್ಷಯ್ ಒಲೇಟಿ ಹೇಳಿದರು.
0 Comments