ವಿಜಯನಗರ (ಹೊಸಪೇಟೆ), ಅ 04. ವಿಜಯನಗರ ಜಿಲ್ಲಾ ಉದ್ಘಾಟನಾ ಸಮಾರಂಭ ಎರಡು ದಿನಗಳ ಕಾಲ ನಡಯಿತು. ಎರಡನೆಯ ದಿನ ಕಾರ್ಯಕ್ರಮ ಸಮಾರೋಪ ಸಮಾರಂಭದಲ್ಲಿ ಹಂಪಿಯ ಮಾತಂಗ ಮಹಾ ಋಷಿ ಆಶ್ರಮದ ಪೂರ್ಣಾನಂದ ಭಾರತಿ ಸ್ವಾಮಿಯವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ವಿಜಯನಗರ ಜಿಲ್ಲೆ ಅಗಿದ್ದು ಸಂತೋಷದ ಸಂಗತಿ ಆಗಿದೆ. ಮುಂದಿನ ದಿನಗಳಲ್ಲಿ ಆನಂದ್‌ಸಿ0ಗ್ ರಾಜ್ಯದ ಮುಖ್ಯಮಂತ್ರಿಗಳು ಆಗಬೇಕು ಎಂದು ಹಲವಾರು ಸಚಿವರು ಉಪಸ್ಥಿತಿ ಇರುವ ವೇದಿಕೆಯಲ್ಲಿ ಭವಿಷ್ಯ ನುಡಿದು ಆಶೀರ್ವಾದ ನೀಡಿದರು. ಆನಂದ್‌ಸಿ0ಗ್ ಅವರು ನಗುನಗುತ್ತಲೆ ಮೌನಮುರಿದರು. ಬಿ.ಸಿ.ಪಾಟೀಲ್, ಸೋಮಶೇಖರ್, ಶಿವರಾಂ ಹೆಬ್ಬಾರ್ ಚಪ್ಪಾಳೆ ತಟ್ಟಿದ್ದು ಅಲ್ಲಿನ ಸಹಸ್ರಾರು ಜನರು ಜೈ..ಜೈ..ಎಂದು ಧ್ವನಿ ಗೂಡಿಸಿದರು. ಈಗಾಗಲೇ ಸಿಎಂ ಬೊಮ್ಮಾಯಿರವರು ಬಿಎಸ್ ವೈ. ಕೈಗೊಂಬೆ ಅಗಿದ್ದಾರೆ ಅನ್ನುವ ಮಾತುಗಳು ಕೂಡಾ ಅಲ್ಲಿ ನೆರೆದಿದ್ದ ಜನರಬಾಯಲ್ಲಿ ಕೇಳಿಬಂತು. ಮುಂದಿನ ರಾಜಕೀಯ ವಿದ್ಯಮಾನಗಳು ನೋಡಿದರೆ ಸ್ವಾಮಿ ಭವಿಷ್ಯ ಸತ್ಯ ಅಗುಬಹುದೇನೋ ಕಾದು ನೋಡಬೇಕಿದೆ.!!. ಸ್ವಾಮಿಗಳ ಆಶಿರ್ವಾದ, ಭವಿಷ್ಯಕ್ಕೆ, ಸ್ಥಳಿಯ ನಾಗರೀಕರು ಸಂತೋಷದಿ0ದ ತಬ್ಬುಬ್ಬಿಹೋದರು.

0 Comments