ವಿಜಯನಗರ (ಹೊಸಪೇಟೆ), ಅ 04: ಬಳ್ಳಾರಿ ಜಿಲ್ಲೆಯಿಂದ ಹೊರಹೊಮ್ಮಿ ವಿಜಯನಗರ ಜಿಲ್ಲೆ ಆಗಲೂ ನಾನು ಬಹಳಷ್ಟು ಶ್ರಮ ಪಟ್ಟಿದ್ದೇನೆ. ಆದರೆ ನನ್ನಗಿಂತಲೂ ಹೆಚ್ಚಿಗೆ ಶ್ರಮ ಪಟ್ಟು, ಬೆಂಗಳೂರು, ಡೆಲ್ಲಿಗಳಲ್ಲಿರುವ ಎಲ್ಲಾ ಕಛೇರಿಗಳಿಗೆ ತಿರುಗಿ ನನ್ನಗಿಂತ ಹೆಚ್ಚಿನ ಜಾವಾಬ್ದಾರಿಯನ್ನು ಹೊತ್ತು ವಿಜಯನಗರ ನೂತನ ಜಿಲ್ಲೆಯಾಗಲು ಕಾರಣೀಬೂತರಾದರವರಲ್ಲಿ ನನ್ನ ಆಪ್ತಸಹಾಯಕ ಮುನಿರಾಜು ಎಂದರೆ ತಪ್ಪಾಗುವುದಿಲ್ಲ ಎಂದು ವಿಜಯನಗರ ಜಿಲ್ಲೆ ಸಮಾರೋಪ ಸಮಾರಂಭದ ವಿದ್ಯಾರಣ್ಯ ವೇದಿಕೆಯಲ್ಲಿ ಮುನಿರಾಜ್ ಅವರಿಗೆ ಸಚಿವ ಆನಂದ್‌ಸಿ0ಗ್ ಅವರು ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಿದರು. ನೂತನ ವಿಜಯನಗರ ಜಿಲ್ಲೆ ಆಗಲು ನನ್ನಗಿಂತಲೂ ನನ್ನ ಆಪ್ತಸಹಾಯಕ ಮುನಿರಾಜ್ ಅವರ ಶ್ರಮ ಹೆಚ್ಚಿಗಿದೆ.
ಈಸಂಧರ್ಭದಲ್ಲಿ ಅಲ್ಲಿ ನೆರೆದಿದ್ದ ಜನರು ಆನಂದ್‌ಸಿ0ಗ್ ಅವರ ಸರಳ ಸಜ್ಜನಿಕೆ ವ್ಯಕ್ತಿತ್ವವನ್ನು ನೋಡಿ, ನಿರಾಡಂಭರ ವ್ಯಕ್ತಿ ಎಂದರೇ ಆನಂದ್‌ಸಿ0ಗ್ ಅವರೇ ಎಂದು ಜನರು ಅವರನ್ನು ಶ್ಲಾಘಿಸಿದರು. ಈಸಂಧರ್ಭದಲ್ಲಿ ವೇದಿಕೆಮೇಲೆ ಸಚಿವರುಗಳು ಮತ್ತು ಆಪ್ತರಾದ ಧರ್ಮೇಂದರ್ ಸಿಂಗ್, ಶ್ರೀನಿವಾಸ್, ಮುನ್ನ, ಮತ್ತಿತರರು ಉಪಸ್ಥಿತರಿದ್ದರು.

0 Comments