ಬಳ್ಳಾರಿ, ಅ 04: ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ನಗರದ ಹೋಟೆಲ್ ವೈಷ್ಣವಿ ಗ್ರಾಂಡ್‌ನಲ್ಲಿ 4/10/2021ರಂದು ವಿಧಾನಪರಿಷತ್ ಸದಸ್ಯರು ಹಾಗೂ ಮಾಜಿ ಸಂಸದ ಕೆ.ಸಿ ಕೊಂಡಯ್ಯ ನವರು ಪತ್ರಿಕಾಗೋಷ್ಠಿಯನ್ನು ನಡೆಸಿದರು.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳಿಗೆ ಹೆಚ್ಚಿನ ಅಧಿಕಾರವನ್ನು ಕೊಡಸಲಿಕ್ಕೆ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ಎಂದು ಹೇಳಿದರು, ಮತ್ತು ತಮಗೆ ಯಾವ ರೀತಿಯ ಅಧಿಕಾರವಿದೆ ಎಂದು ಸ್ವವಿವರವಾಗಿ ತಿಳಿಸಿದರು. ತದನಂತರ ಹಳೆಕೋಟೆ ಗ್ರಾಮ ಪಂಚಾಯಿತಿ ಮತ್ತು ಶಾನವಾಸಪುರ ಗ್ರಾಮಪಂಚಾಯಿತಿಗಲ್ಲಿ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಚಂದ್ರಶೇಖರಯ್ಯ ಸ್ವಾಮಿಯವರು ಹಾಗೂ ಬಿ.ಎಂ. ನಾಗರಾಜರವರು ಹಾಗೂ ಕಾಂಗ್ರೆಸ್ ಹಿರಿಯ ಮುಖಂಡರುಗಳಾದ ಸಿದ್ದನಗೌಡ, ಮಲ್ಲಿಕಾರ್ಜುನ ಸ್ವಾಮಿ, ಗೋಪಾಲ್ ರೆಡ್ಡಿ, ಸಿದ್ದಲಿಂಗಯ್ಯ ಸ್ವಾಮಿ, ಮಲ್ಲಿಕಾರ್ಜುನ ಬಾಳಪ್ಪ, ಬಿ.ಎಂ. ಸತೀಶ್, ವೆಂಕಟೇಶ್ ಹೆಗಡೆ ಕೆಪಿಸಿಸಿ ಮಾಧ್ಯಮ ವಕ್ತಾರರು, ಬ್ಲಾಕ್ ಅಧ್ಯಕ್ಷರುಗಳಾದ ಎಂ ಕರಿಬಸಪ್ಪ, ಪೊಜಾರಿ ಗಾದೆಪ್ಪ, ಮಹಾನಗರ ಪಾಲಿಕೆ ಸದಸ್ಯರು, ಅಸುಂಡಿ ವನ್ನೂರಪ್ಪ, ಅಯಜ್ ಅಹ್ಮದ್, ವೆಂಕಟರಮಣ ರೆಡ್ಡಿ, ಚಾನಳ್ ಪಾರ್ಥಸಾರಥಿ ರೆಡ್ಡಿ, ನಾಗ ರುದ್ರಗೌಡ ಹಾಗೂ ಮುಖಂಡರುಗಳಾದ ಮುತ್ತಲ ಶೆಟ್ಟಿ, ಚಲಪತಿ, ಹರಿವರ್ಧನ ರೆಡ್ಡಿ, ನಿಟ್ಟೂರು ವೀರನಗೌಡ, ಗೋವಿಂದರೆಡ್ಡಿ, ಮಾರುತಿ ರೆಡ್ಡಿ, ಶ್ರೀನಿವಾಸರೆಡ್ಡಿ, ಬಿಕೆ ರಘು, ಜೆಡಿ ಸ್ವಾಮಿ, ಹಚ್ಚೋಳಿ ಸೀನಪ್ಪ, ಕುಮಾರ ರಾಜೇಗೌಡ ,ಪೂಜಾರಿ ಮಲ್ಲಿಕಾರ್ಜುನ, ಮುಲ್ಲಾ, ರೂಪ, ದಶರಥ ರೆಡ್ಡಿ ಹಾಗೂ ನಗರಸಭೆ ಅಧ್ಯಕ್ಷರಾದ ಡಿ ನಾಗರಾಜ ಮತ್ತು ಎಲ್ಲಾ ನಗರಸಭಾ ಸದಸ್ಯರು ಕಾರ್ಯಕರ್ತರು ಭಾಗವಹಿಸಿದ್ದರು.

0 Comments