ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಪುಲಗಲ್ ಪಂಚಾಯಿತಿಗೆ ಸೇರಿದ ಒಂದು ಪುಟ್ಟ ಹಳ್ಳಿಯಾದ ಶ್ರೀನಿವಾಸಪುರ (ಮಿದ್ಧಿಲು) ಎಂಬ ಹಳ್ಳಿಯಲ್ಲಿ ಬಿ,ಕಾಂ, ಪದವೀಧರರಾದ ವಿದ್ಯಾವಂತರಾದರೂ ಯುವಕರಾದ ಶಶಿಕುಮಾರ್ ಇವರು ಸರ್ಕಾರಿ ಕೆಲಸ ಸಿಗದೆ ತನ್ನ ಗದ್ದೆಯಲ್ಲಿ ಬದನೆಕಾಯಿ ಬೆಳೆ ಬೆಳೆದಿರುತ್ತಾರೆ ಆದರೆ ಇದಕ್ಕೆ ತಗಲುವ ಖರ್ಚು ಒಂದು ಲಕ್ಷ ರೂಗಳ ಆಗಿರುತ್ತದೆ ಆದರೆ ಈಗ ಬೆಳೆ ನಾಶವಾಗಿ ಅಂದರೆ ಎಡೆಬಿಡದ ಮಳೆಯಿಂದ ತತ್ತರಿಸಿ ರುವ ರೈತರು ಇರುವ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲು ಆಗದೆ ಕೂಲಿಯಾಳುಗಳು ಸಿಗದೆ ತುಂಬಾ ಪರಿತಪಿಸುತ್ತಿದ್ದಾರೆ.
ಈ ಬದನೆಕಾಯಿ ಮಾರುಕಟ್ಟೆಗೆ ಕೊಂಡೊಯ್ಯಲು ತುಂಬ ದೂರ ಇರುವುದರಿಂದ ಸಾಗಾಣಿಕೆ ವೆಚ್ಚ ತುಂಬಾ ಇದ್ಧು ಒಂದು ಖಾಲಿ ಚೀಲ 5 ರೂ ಗಳಾದರೆ ಬದನೆಕಾಯಿ ತುಂಬಿರುವ ಚೀಲ 50 ರೂಗಳಿಗೆ ವ್ಯಾಪಾರಸ್ಥರು ಕೇಳುತ್ತಾರೆ ಮತ್ತು ಕೂಲಿಯಾಳುಗಳಿಗೆ ದಿನನಿತ್ಯ 300ರಿಂದ 400 ರೋಗಳು ಖರ್ಚ್ ಆಗುವುದರಿಂದ ರೈತರಿಗೆ ತುಂಬಾ ನಷ್ಟವಾಗುತ್ತಿದೆ ಆದ್ದರಿಂದ ಈ ಭಾಗದ ರೈತರಿಗೆ ತುಂಬಾ ನಷ್ಟವಾಗುತ್ತಿರುವ ದರಿಂದ ಸರ್ಕಾರಗಳು ರೈತರ ಹಿತ ಕಾಪಾಡಬೇಕಾಗುತ್ತದೆ ಮತ್ತು ಇದಕ್ಕೆ ಬೆಂಬಲ ಬೆಲೆ ಘೋಷಿಸಿದರೆ ರೈತರಿಗೆ ಸಹಾಯವಾಗುತ್ತದೆ ಮತ್ತು ಶಾಸಕರ ಗಮನಕ್ಕೆ ತರುವುದೇನೆಂದರೆ ನಮ್ಮ ಚೇಳೂರಿನಲ್ಲಿ ತರಕಾರಿ ಮಾರುಕಟ್ಟೆ ತೆರೆಯಬೇಕೆಂದು ನಮ್ಮ ರೈತರ ಕೂಗಾಗಿದೆ ಎಂದು ಪತ್ರಿಕಾ ಹೇಳಿಕೆ ನೀಡಿರುತ್ತಾರೆ.
ಬಿ. ಆರ್. ನಾಗರಾಜ್, ವಾರ್ತಾ ಜಾಲ, ಚೀಕ್ಕ ಬಳ್ಳಾಪುರ
0 Comments