ಮಧುಗಿರಿ : ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿಯವರು ವಿರೋಧ ಪಕ್ಷ ಸ್ಥಾನದ ಬಗ್ಗೆ ಪುಟಗೋಸಿ ಪದ ಬಳಕೆ ಮಾಡಿರುವುದಕ್ಕೆ ಕ್ಷಮಾಪಣೆ ಕೇಳುವ ಅಗತ್ಯವಿಲ್ಲ ಎಂದು ಪರಿಶಿಷ್ಟ ಪಂಗಡದ ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ರವಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು. ಗ್ರಾಮೀಣ ಭಾಗದಲ್ಲಿ ಪುಟಗೋಸಿ ಎಂಬ ಪದ ಆಡುಭಾಷೆ ಯಾಗಿದೆ ಇದಕ್ಕೆ ವಿಶೇಷ ವಾದ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರಿಗೆ ಮೀಸಲಾತಿ ಕಲ್ಪಿಸುವ ಮೂಲಕ ನಿಜವಾದ ಅಹಿಂದ ನಾಯಕರಾಗಿದ್ದಾರೆ. ಆದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ ಪಡೆಯುವ ಉದ್ದೇಶದಿಂದಾಗಿ ಅಹಿಂದ ಎಂಬ ಅಸ್ರ ದೊಂದಿಗೆ ನಾಟಕವಾಡುತ್ತಿದ್ದು ಅಹಿಂದ ಸಮುದಾಯಗಳಿಗೆ ಸಿದ್ದರಾಮಯ್ಯ ಕೊಡುಗೆ ಏನೆಂದು ಪ್ರಶ್ನಿಸಿದರು.
ಯುವ ಜನತಾದಳದ ಜಿಲ್ಲಾ ಉಪಾಧ್ಯಕ್ಷ ರವಿಯಾದವ್ ಮಾತನಾಡಿ, ಪುರಸಭ ಮಾಜಿ ಅಧ್ಯಕ್ಷ ಎನ್.ಗಂಗಣ್ಣ ನವರು ಜೆಡಿಎಸ್ ಪಕ್ಷದಿಂದಲೇ ಪುರಸಭ ಸದಸ್ಯರಾಗಿ ಆಯ್ಕೆಯಾಗಿ ಪುರಸಭ ಅದ್ಯಕ್ಷರಾಗಿದ್ದನ್ನು ಮರೆಯಬಾರದು ಎಂದ ಅವರು, ಎನ್.ಗಂಗಣ್ಣ ಅವರು ಕುಮಾರಸ್ವಾಮಿ ಯವರನ್ನು ಕ್ಷಮಾಪಣ ಕೇಳಬೇಕೆಂದು ಒತ್ತಾಯಿಸುವಷ್ಟು ದೊಡ್ಡ ಮಟ್ಟದ ನಾಯಕರಲ್ಲಾ ಎಂದರು.
ಮುಸ್ಲಿಂ ಮುಖಂಡ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಲ್ಲಾಬಕಾμï ಮಾತನಾಡಿ ಮುಸ್ಲಿಂ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆ ಏನು ಇಲ್ಲ. ದೇವೆಗೌಡರು ಅನೇಕ ಮುಸಲ್ಮಾನರಿಗೆ ಅಧಿಕಾರ ನೀಡಿ ಬೆಳಸಿದ್ದಾರೆ ಎಂದರು
ಹೆಚ್.ಎಂ.ಆರ್.ಹನುಮಂತರಾಯಪ್ಪ ಮಾತನಾಡಿ, ಕಾಂಗ್ರೇಸ್ ನ ಕೆಲವು ನಾಯಕರುಗಳು ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಸಿದ್ದರಾಮಯ್ಯರವರೊಬ್ಬರನ್ನೇ ಅಹಿಂದ ನಾಯಕ ಎಂದು ಬಿಂಬಿಸುತ್ತಿರುವುದು ಸರಿಯಲ್ಲ. ರಾಜ್ಯದಲ್ಲಿ ನಿಜವಾದ ಅಹಿಂದ ನಾಯಕರೆಂದರೆ ಹೆಚ್.ಡಿ.ದೇವೆಗೌಡರು ಹಾಗೂ ಕುಮಾರಸ್ವಾಮಿ ಎಂದರು.
ಜೆಡಿಎಸ್ ಮುಖಂಡರಾದ ಗುಂಡಗಲ್ ಶಿವಣ್ಣ, ರಾಮಚಂದ್ರಪ್ಪ, ಬಾಬಣ್ಣ ರವಿಯಾದವ್, ತಿಮ್ಮಯ್ಯ, ಶಪೀ ಅಹಮದ್, ಜಬೀವುಲ್ಲಾ, ಗೋವಿಂದರಾಜು, ಶಿವ ಕುಮಾರ್, ಗಣೇಶ್, ಜಲೇಂದ್ರಪ್ಪ, ಮಿಲ್ ಚಂದ್ರು, ಸೈಯದ್ ಗೌಸ್, ನಾರಾಯಣಪ್ಪ, ಮಲ್ಲೇಶಯ್ಯ, ಮೋಹನ್, ನರಸಯ್ಯ, ಬಜ್ಜಾ, ಕಂಭತ್ತನಹಳ್ಳಿ ರಘು, ಸಲ್ಮಾನ್ ಬೇಗ್, ಸರ್ದಾರ್, ತಪಾಲ್ ಮಂಜು ಮತ್ತಿತರರು ಇದ್ದರು.
VARTHAJALA, MADHUGIRI
0 Comments