ಅಕ್ಟೋಬರ್ 17, ಬೆಂಗಳೂರು: ಕುಮಾರ್ ಸ್ವಾಮಿ ಸುಳ್ಳು ಹೇಳುವ ವ್ಯಕ್ತಿ.
ಅಧಿಕಾರಕ್ಕಾಗಿ ಯಾವ ಕೀಳು ಮಟ್ಟಕ್ಕು ಬೇಕಾದ್ರೂ ಹೋಗುತ್ತಾರೆ. ಅವರದು ಹಿಟ್ ಅಂಡ್ ರನ್ ಸಂಸ್ಕೃತಿ.
ಅವರು ಅಲ್ಪಸಂಖ್ಯಾತರ ಪರ ಅಂತ ಬಿಂಬಿಸುತ್ತಾರೆ. ಎಲ್ಲಾ ಸುಳ್ಳು. ದೇವೇೌಡರನ್ನು ನಂಬಿದರು ಕುಮಾರ್ ಸ್ವಾಮಿನ ನಂಬೋಕೆ ಆಗೋಲ್ಲ. ಕುಮಾರಸ್ವಾಮಿ ನಿಜವಾಗಿ ನಮ್ಮ ಪರವಾಗಿ ಇದ್ದಿದ್ದರೆ ಚುನಾವಣೆಯಲ್ಲಿ ಜಾಫರ್ ಷರೀಫ್ ಅವರ ಮೊಮ್ಮಗ ಸ್ಪರ್ದೆ ಮಾಡಿದ್ದಾಗ ಯಾಕೆ ಅಜೀಜ್ ಅಹಮದ್ ಅವರನ್ನ ಜೆಡಿಎಸ್ ಪಕ್ಷದಿಂದ ನಿಲ್ಲಿಸಿದ್ದರು.
ಇದರಿಂದ ಆರ್ಥ ಆಗುತ್ತೆ ಜೆಡಿಎಸ್ ಪಕ್ಷ ಬಿಜೆಪಿಯ ಬಿ ಟೀಮ್ ಅಂತ. ಒಂದು ವೇಳೆ ನಿಜವಾಗಿ ಅಲ್ಪಸಂಖ್ಯಾತರ ಪರ ಜೆಡಿಎಸ್ ಪಕ್ಷ ಆಗಿದ್ದೆ ಆದರೆ ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತ ಒಬ್ಬರನ್ನ ಸಿ ಎಂ ಅಭ್ಯರ್ಥಿ ಅಂತ ಘೋಷಿಸಲಿ ನೋಡೋಣ ಎಂದು ಜಮೀರ್ ಹೇಳಿಕೆ.
ಒಟ್ಟಿನಲ್ಲಿ ಕಾಂಗ್ರೆಸ್ಸ್ ಮತ್ತು ಜೆಡಿಎಸ್ ಪಕ್ಷಗಳ ಮುಖಂಡರಗಳ ಜಟಾಪಟಿ ಸದ್ಯಕ್ಕೆ ನಿಲ್ಲುವ ಹಾಗೆ ಕಾಣೋಲ್ಲ.
0 Comments