ಬೆಂಗಳೂರು : ವಿಶ್ವ ಪೋಲಿಯೋ ದಿನಾಚರಣೆ ಅಂಗವಾಗಿ ರೋಟರಿ ಬೆಂಗಳೂರು ಕೋರಮಂಗಲ ಕ್ಲಬ್ಬಿನ ವತಿಯಿಂದ ನಗರದ ಫ್ರೀಡಂ ಪಾರ್ಕಿನಿಂದ ಟೌನ್ ಹಾಲ್, ಇಂದಿರಾನಗರದ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿ ಕೋರಮಂಗಲದವರೆವಿಗೂ ದ್ವಿಚಕ್ರ ವಾಹನಗಳ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.
ರೋಟರಿ ಡಿಸ್ಟ್ರಿಕ್ಟ್ 3190 ಮತ್ತು ಡಿಸ್ಟ್ರಿಕ್ಟ್ 3190 ಪೋಲಿಯೋಪ್ಲಸ್ ಕಮಿಟಿ, ಡಿಸ್ಟ್ರಿಕ್ಟ್ ಗೌರ್ನರ್ ರೊಟೇರಿಯನ್ ಫಜಲ್ ಮಹಮೂದ್ ಹಾಗೂ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಿಸ್ಸಸ್ ಇಂಡಿಯಾ 2017 ರ ವಿಜೇತೆ ಶ್ರೀಮತಿ ತೃಪ್ತಿ ರಾವ್ ರವರುಗಳು "ಎಂಡ್ ಪೋಲಿಯೋ ರೈಡ್ " ಜಾಥಾವನ್ನು ಧ್ವಜ ನಿಶಾನೆ ತೋರುವ ಮೂಲಕ ಫ್ರೀಡಮ್ ಪಾರ್ಕ್ನಿಂದ ಚಾಲನೆ ನೀಡಿದರು. ಟೌನ್ ಹಾಲ್ ಬಳಿ "ಎಂಡ್ ಪೋಲಿಯೋ ನೌವ್" ಸಹಿ ಸಂಗ್ರಹ ಅಭಿಯಾನವನ್ನು ಸಹ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಕೋರಮಂಗಲ ಕ್ಲಬ್ ರೋಟರಿ ಅಧ್ಯಕ್ಷ ರೊ. ಇಕ್ರಂ ಅಹ್ಮದ್ ಖಾನ್, ರೊ. ರಂಗಸ್ವಾಮಿ ಎ.ಜಿ. ರೋಟರಿ ಡಿಸ್ಟ್ರಿಕ್ಟ್ 3190, ಪೋಲಿಯೋ ಸಲಹೆಗಾರರಾದ ರೊ. ಶ್ರೀನಿವಾಸ್ ಮೂರ್ತಿ ಎನ್. ಎಸ್., ಪೋಲಿಯೊ ಚೇರ್ ರೊ. ಸುಧಾಕರ್ ರೆಡ್ಡಿ ಎ., ಪೋಲಿಯೊ ಇವೆಂಟ್ ಚೇರ್ ರೊ. ರುಕ್ಮಾಂಗದ ಬಾಬು ಡಿ., ಪೋಲಿಯೊ ಸೇನಾನಿಗಳಾದ ರೊ. ಅಮರನಾಥ್, ರೊ. ಎಂ.ಎ.ರವಿಕುಮಾರ್, ರೊ. ಶ್ರೀನಿವಾಸ ವಿ., ರೊ. ಮಣಿವಣ್ಣನ್, ರೊ. ಶ್ರೀಕಾಂತ್ ಟೇಕಲ್ ಮುಂತಾದವರು ಎಂಡ್ ಪೋಲಿಯೊ ರೈಡ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
0 Comments