Ticker

6/recent/ticker-posts

Ad Code

Responsive Advertisement

ಮಹದೇವಪುರ ಕ್ಷೇತ್ರದ ಬೆಳ್ಳಂದೂರು ವಾರ್ಡ್ ನಲ್ಲಿ ಪ್ರಭಾವಿಗಳಿಂದ ರಾಜಕಾಲುವೆ ಒತ್ತುವರಿ

ನಗರದ ಬೆಳ್ಳಂದೂರು ವಾರ್ಡಿನಲ್ಲಿ  ಪ್ರಭಾವಿಗಳಿಂದ ರಾಜಕಾಲುವೆ ಒತ್ತುವರಿಯಾಗಿ ಜುನ್ನಸಂದ್ರ ಹಾಗೂ ಹಾಲನಯಕನಹಳ್ಳಿ ಜನಗಳು ಕೊಳಚೆ ನೀರಲ್ಲಿ ಬದುಕಬೇಕಾದ ಸಂದರ್ಭ ಬಂದೊದಗಿದೆ.

ಜುನ್ನಸಂದ್ರದ ಗ್ರೀನ್ ವಿಲ್ಲಿ ಲೇಔಟ್ ಕಡೆಗೆ ಹೋಗುವ 40 ಅಡಿ ರಸ್ತೆ ಈಗ ಒಂದು ಕೊಳಚೆ ಈಜುಕೊಳವಾಗಿ ಮಾರ್ಪಟ್ಟಿದೆ. ಈ ಪರಿಸರದ  ಪರಿಸರದ ಕೊಳಚೆ ಹರಿದು ಹೋಗಲು ಒಂದು.  ರಾಜಕಾಲುವೆ ಇದ್ದು  ಮುಖ್ಯ ಕಾಲುವೆಯನ್ನು ಸೇರುತ್ತದೆ.

ಈ ರಾಜಕಾಲುವೆ ರೈನ್ಬೋ ಡ್ರೈವ್ ವಿಲ್ಲೇ ಮೂಲಕ ಹಾದುಹೋಗುತ್ತದೆ. ಈ ವಿಲ್ಲಾದ ಬಿಲ್ಡರ್ ಈ ರಾಜಕಾಲುವೆಯನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ. ಹೀಗಾಗಿ ಈ ನೀರು ಸರಾಗವಾಗಿ ಹೋಗುತ್ತಿಲ್ಲ. ಇದಕ್ಕೆಲ್ಲ ಬಿಬಿಎಂಪಿ ಹಾಗೂ ಮಾನ್ಯ ಶಾಸಕರಾದ ಆರವಿಂದ ಲಿಂಬಾವಳಿಯವರ ನಿರ್ಲಕ್ಷ್ಯವೇ ಕಾರಣ ಎಂದು ಆಮ್ ಆದ್ಮಿ ಪಕ್ಷದ ಮಹಾದೇವಪುರ ಕ್ಷೇತ್ರದ ಅಧ್ಯಕ್ಷರಾದ ಅಶೋಕ್ ಮೃತ್ಯುಂಜಯ ಅವರು ಅಪಾದಿಸದರು.

ಈ ಕಾರಣಕ್ಕೆ ಕಳೆದ ಏಳು ವರ್ಷಳಿಂದ ಮಳೆಗಾಲದಲ್ಲಿ ರಸ್ತೆಗಳಲ್ಲಿ ಕನಿಷ್ಟ 2-3 ಅಡಿ ನೀರು ನಿಲ್ಲುತ್ತಿದೆ. ಈ ಕಾರಣದಿಂದಾಗಿ ಮಕ್ಕಳಿಗೆ ಹೊರಗಡೆ ಆಟವಾಡಲು, ಹಿರಿಯರಿಗೆ ನಡೆದು ಹೋಗಲು ಕಷ್ಟವಾಗುತ್ತಿದೆ. ನೀರು ನಿಂತ ಪರಿಣಾಮ ಡೆಂಗ್ಯೂ, ಮಲೇರಿಯಾ ಹರಡುತ್ತಿದೆ.

ಸ್ಮಶಾನದ ತನಕ ಈ ಕೊಳಚೆ ನೀರು ಬಂದು ಸತ್ತವರಿಗೂ ಮರಣದ ನಂತರ ಕಾಟ ಕೊಡುತ್ತಿದ್ದಾರೆ. ಹಾಲನಯಕನಹಳ್ಳಿ ಸ್ಥಳೀಯ ಸ್ಥಳೀಯರಾದ  ಆಂಬರೀಷ ರೆಡ್ಡಿ ಅವರು ಈ ವಿಷಯದ ಬಗ್ಗೆ, ಏಸಿ, ಡಿಸಿ , ತಹಸೀಲ್ದಾರ ಹಾಗೂ ಮಾನ್ಯ ಶಾಸಕರಾದ ಅರವಿಂದ ಲಿಂಬಾವಳಿ ಅವರನ್ನು ಭೇಟಿ ಆಗಿ ಅವರಿಗೆಲ್ಲ ಒತ್ತುವರಿ ತೆಗುಯುವುದಕ್ಕೆ ಅರ್ಜಿ ಸಲ್ಲಿಸಿದ್ದರು ಏನು  ಪ್ರಯೋಜನವಾಗಿಲ್ಲ ಎಂದು ತಿಳಿಸಿದರು. ಒತ್ತುವರಿ ಮಾಡಿರುವವರು ತುಂಬಾ ಪ್ರಭಾವಿ ವ್ಯಕ್ತಿಗಳು ಅದಕ್ಕಾಗಿ ಯಾವ ಅಧಿಕಾರಿ ಗಳು, ಹಾಗೂ ಶಾಸಕರು ಸರಿಯಾದ ಕ್ರಮ ತೆಗೆಗು ಕೊಳ್ಳುತ್ತಿಲ್ಲ ಅಂದು ಆಪಾಸಿದರು.

ಈ ಸಮಸ್ಯೆಯ ಬಗ್ಗೆ ಜನತೆ ದನಿ ಎತ್ತಿದ್ದಾರೆ. ಶಾಸಕ ಅರವಿಂದ್ ಲಿಂಬಾವಳಿ ಅವರಿಗೆ ದೂರನ್ನೂ ನೀಡಿದ್ದಾರೆ. ಆದರೆ ಈ ಸಮಸ್ಯೆ ಇನ್ನೂ ಪರಿಹಾರವಾಗಿಲ್ಲ.

ಈ ಎಲ್ಲಾ ಸಮಸ್ಯೆಗಳ ಮಧ್ಯೆ ಕಸದ ರಾಶಿ ಕೂಡ ಬೆಳೆದಿದೆ. ಜುನ್ನಸಂದ್ರ ಗ್ರಾಮದ ಜನತೆ ಈ ಸಮಸ್ಯೆಯಿಂದ ಬೇಸತ್ತು ಹೋಗಿದ್ದಾರೆ. ನೆಮ್ಮದಿಯಿಂದ ರಸ್ತೆಯಲ್ಲಿ ನಡೆಯಲು ಸಾದ್ಯವಾಗದೆ ಆಡಳಿತ ವ್ಯವಸ್ಥೆಯ ವಿರುದ್ಧ ಅಸಮಾಧಾನ ಹೊಂದಿದ್ದಾರೆ. ಸ್ಥಳೀಯರು ಡಾಕ್ಟರ್ಸ್, ಇಂಜಿನಿಯರ್ ಗಳು ಈ ಲೇಔಟ್ ನಲ್ಲಿ ವಾಸವಾಗಿದ್ದು ಅವರು ತಮಗೆ ಸಿಗಬೇಕಾದ ಮೂಲ ಭೂತ ಸೌಕರ್ಯಗಳನ್ನು ಕೊಡದೆ ಬಬಮಪ ಹಾಗೂ ಮಾನ್ಯ ಶಾಸಕರು ಅವರಿಗೆ ಅವಮಾನ ಮಾಡುತ್ತಿದ್ದಾರೆ ಎಂದು  ದುಃಖ  ವ್ಯಕ್ತ ಪಡಿಸಿದರು. 

ಶಾಸಕ ಅರವಿಂದ್ ಲಿಂಬಾವಳಿ ಅವರೇ, ನಿಮ್ಮ ಮನೆಯ ಮುಂದೆ ಈ ರೀತಿ ನೀರು, ಕಸ  ನಿಂತರೆ ನೀವು ನಿಮಿಷದ ಒಳಗೆ ಸರಿಪಡಿಸುತ್ತೀರ. ನಿಮ್ಮನ್ನು ಚುನಾಯಿಸಿದ ಜನತೆಗೆ ಸಂಕಷ್ಟವನ್ನು ಕೇಳುವ ಜವಾಬ್ದಾರಿ ನಿಮ್ಮಲ್ಲಿ ಇಲ್ಲವೇ? ನೀವು ಜನತೆಯ ನೋವನ್ನು ಅಲಿಸದೆ ದ್ರೋಹ ಬಗೆಯಬೇಡಿ. ನಿಮ್ಮನ್ನು ಜನತೆ ಯಾವತ್ತೂ ಕ್ಷಮಿಸುವುದಿಲ್ಲ  ಎಂದು ಸ್ಥಳೀಯ ಜನತೆ ಸ್ಥಳೀಯ ಜನತೆ  ಹಿಡಿಶಾಪ ಹಾಕುತ್ತಿದ್ದರು.

ಅಶೋಕ್ ಮೃತ್ಯುಂಜಯ ರವರು ಕೊನೆಯಲ್ಲಿ ಮಾತನಾಡಿ ಇನ್ನೂ 15 ದಿನಗಳಲ್ಲಿ ಜುನ್ನಸಂದ್ರ ಜನಗಳ ಸಮಸ್ಯೆಗೆ ಪರಿಹಾರ ಕೊಡದೆ ಹೋದರೆ ಜುನ್ನಸಂದ್ರ ಗ್ರಾಮದಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಹಾಗೂ ಜುನ್ನಸಂದ್ರ ಗ್ರಾಮದ ಜನರು ಸೇರಿ ಉಗ್ರ ಪ್ರತಿಬಾಟನೆ ಮಾಡುವುದಾಗಿ ತಿಳಿಸದರು.

Post a Comment

0 Comments

Ad Code

Responsive Advertisement