ಹೆಬ್ಬಾಳ ವಿಧಾನಸಭಾ ಕ್ಷೇತ್ರದ ,ಆರ್.ಟಿ.ನಗರ ಮುಖ್ಯರಸ್ತೆಯಲ್ಲಿ ಮೊಬೈಲ್ ಸ್ಟೂಡಿಯೊ ಷೋರಂ ಉದ್ಘಾಟನೆಯನ್ನು *ಖ್ಯಾತ ಚಲನಚಿತ್ರ ನಟ ದುನಿಯಾ ವಿಜಯ್ ರವರು ,ಶಾಸಕರಾದ ಭೈರತಿ ಸುರೇಶ್ ರವರು ಮಾಜಿ ವಿರೋಧ ಪಕ್ಷದ ನಾಯಕರಾದ ಅಬ್ದುಲ್ ವಾಜಿದ್ ರವರು* ಮತ್ತು ಓಪೋ ಕಂಪನಿಯ ನಿರ್ದೇಶಕಿ ಜೊಯರವರು ಉದ್ಘಾಟನೆ ಮಾಡಿದರು.
*ಚಲನಚಿತ್ರ ನಟ ದುನಿಯಾ ವಿಜಯ್* ರವರಿಗೆ ಮತ್ತು ಶಾಸಕರಾದ *ಭೈರತಿ ಸುರೇಶ್* ರವರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ದುನಿಯಾ ವಿಜಯ್ ರವರು ಮಾತನಾಡಿ ಕಳೆದ 20ತಿಂಗಳಿಂದ ಕೊರೋನ ಸಾಂಕ್ರಮಿಕ ರೋಗದಿಂದ ಚಲನಚಿತ್ರ ರಂಗ ಮತ್ತು ವ್ಯಾಪಾರ ವಹಿವಾಟುಗಳು ಆರ್ಥಿಕ ಸಂಕಷ್ಟ ಮತ್ತು ಜನರಿಗೆ ಉದ್ಯೋಗ ಅವಕಾಶವಿಲ್ಲದಂತೆ ಆಗಿತ್ತು .ಇದೀಗ ಕೊರೋನ ಕಡಿಮೆಯಾಗಿದೆ .
ಎಲ್ಲ ಉದ್ದಿಮೆ ,ವಹಿವಾಟು ಮತ್ತೇ ಚುರುಕು ಕಂಡಿದೆ .
ತಾಯಿ ಚಾಮುಂಡೇಶ್ವರಿ ,ಅಣ್ಣಿಮ್ಮ ದೇವಿಯ ಆಶೀರ್ವಾದ ಕೃಪೆ ನಾಡಿನ ಜನರ ಮೇಲೆ ಇರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
0 Comments