ಬಳ್ಳಾರಿ ಅ 20. ಪರಿಶಿಷ್ಟ ಜಾತಿ (ಎಸ್.ಸಿ), ಪರಿಶಿಷ್ಟ ಪಂಗಡ (ಎಸ್.ಟಿ) ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸುವ ಉದ್ದೇಶಕ್ಕಾಗಿ ರಾಜ್ಯ ಸರ್ಕಾರದಿಂದ ರಚನೆಗೊಂಡ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್‌ದಾಸ್ ಆಯೋಗದ ವರದಿಯನ್ನು ತಕ್ಷಣ ಬಹಿರಂಗ ಪಡಿಸಿ, ಅಂಗೀಕರಿಸಿ, ಜಾರಿಗೊಳಿಸಬೇಕು ಮತ್ತು ಇತರೆ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಅಕ್ಟೋಬರ್-20ರಂದು ಬೆಳಿಗ್ಗೆ: 11.00ಗಂಟೆಗೆ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗದಲ್ಲಿ ಎಸ್.ಟಿ.ಮೀಸಲಾತಿ ಹೆಚ್ಚಿಸಲು ಒತ್ತಾಯಿಸಿ ಯುವ ಮುಖಂಡರಾದ ಬಿ.ಆರ್.ಎಲ್.ಶ್ರೀನಿವಾಸ ಹಾಗೂ ಗಡ್ಡಂ ತಿಮ್ಮಪ್ಪ ರವರಿಂದ ಆಮರಣಾಂತರ ಸತ್ಯಾಗ್ರಹ ಆರಂಭಿಸಿದ್ದಾರೆ. ವರ್ಣಾಶ್ರಮ ವ್ಯವಸ್ಥೆಯ ಅತ್ಯಂತ ಹೀನ, ಮೇಲು-ಕೀಳು ಎಂಬ ಜಾತಿ ಪದ್ದತಿಯ ಕಾರಣದಿಂದಾಗಿ, ಸಾವಿರಾರು ವರ್ಷಗಳಿಂದ ಜಾತಿ, ದೌರ್ಜನ್ಯಕ್ಕೆ ಬಲಿಯಾದ ಶೂದ್ರರು, ಅಸ್ಟçಶ್ಯರು, ದಲಿತರು, ಬುಡಕಟ್ಟು, ಅಲೆಮಾರಿಗಳು ಮುಂತಾದ ಪರಿಶಿಷ್ಟ ಪಂಗಡ (ಎಸ್.ಟಿ), ಪರಿಶಿಷ್ಟ ಜಾತಿ (ಎಸ್.ಸಿ) ಸಮುದಾಯಗಳ ಜನರು ಈ ದೇಶದಲ್ಲಿ ವಸತಿ, ಆಹಾರ, ಆರೋಗ್ಯದಂತಹ ಮೂಲಭೂತ ಸೌಕರ್ಯಗಳು ಸಿಗದಂತೆ, ಅಂದಿನ ಮೇಲ್‌ಜಾತಿ, ಮೇಲ್ ವರ್ಗಗಳು ದೇವರು ಧರ್ಮದ ಹೆಸರಿನಲ್ಲಿ ಕಾನೂನು ಮಾಡಿ ವಂಚನೆ ಮಾಡಿದ್ದರು.
ದೇಶವು ಸ್ವಾತಂತ್ರö್ಯ ಪಡೆದು 75 ವರ್ಷಗಳು ಕಳೆಯುತ್ತಿರುವ ಈ ಸಂದರ್ಭದಲ್ಲಿಯೂ ಸಹ ಈ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಲ್ಲಿ ಭಾರಿ ಬದಲಾವಣೆಗಳು ಇವರ ಬದುಕಿನಲ್ಲಿ ಕಾಣದಿರುವುದು ವಾಸ್ತವ ಸಂಗತಿಯಾಗಿದೆ. ಈಗಲೂ ಭಾರತದ ಸಂವಿಧಾನ ನೀಡಿದ ಬದುಕುವ ಸೌಲಭ್ಯಗಳು ಇಂದಿಗೂ ದಲಿತ ಸಮುದಾಯಗಳಿಗೆ ದೊರೆಯದಿರುವುದರಿಂದ ಮತ್ತೆ ಮತ್ತೆ ಅಳುವ ಸರ್ಕಾರಗಳ ಮುಂದೆ ಕೈಚಾಚಿ ಬೇಡುವಂತಾಗಿದೆ. ಕನಿಷ್ಟ ಶಿಕ್ಷಣ, ಉದ್ಯೋಗ, ಭೂಮಿ, ಆರೋಗ್ಯ ವಸತಿ ಸೌಲಭ್ಯಗಳೂ ಸಂಪೂರ್ಣವಾಗಿ ದಲಿತರಿಗೆ ಇನ್ನೂ ಸಿಕ್ಕಿಲ್ಲವೆಂದರೆ ಸಂವಿಧಾನದ ಮೂಲ ತತ್ವಗಳನ್ನೇ ಆಳುವ ಸರ್ಕಾರಗಳು ಮೂಲೆಗೆ ತಳ್ಳಿವೆ ಎಂದೇ ಅರ್ಥ. ಕರ್ನಾಟಕ ರಾಜ್ಯದಲ್ಲಿ ಸಹ ಕಳೆದ 35 ವರ್ಷಗಳಿಂದ ಜನಸಂಖ್ಯೆಗೆ ಅನುಗುಣವಾಗಿ ಎಸ್.ಟಿ. ಮೀಸಲಾತಿಯನ್ನು ಶೇಖಡ 7.5ಕ್ಕೆ, ಎಸ್.ಸಿ ಮೀಸಲಾತಿಯನ್ನು 18ಕ್ಕೆ ಹೆಚ್ಚಿಸಬೇಕೆಂಬ ಹೋರಾಟದ ಬೇಡಿಕೆಗಳು ಇನ್ನೂ ಈಡೇರಿಸಿಲ್ಲ. ಎಸ್.ಸಿ., ಎಸ್.ಟಿ., ಮೀಸಲಾತಿ ಹೆಚ್ಚುವ ಕುರಿತು ರಾಜ್ಯ ಸರ್ಕಾರ ಕಾನೂನಾತ್ಮಕವಾಗಿ ರಚನೆ ಮಾಡಿದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನದಾಸ್ ಇವರ ನೇತೃತ್ವದ ಆಯೋಗವು ಈಗಾಗಲೇ ತನ್ನ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿ ಒಂದು ವರ್ಷವಾದರೂ ಸಹ ವರದಿಯನ್ನು ಅಂಗೀಕರಿಸಿ, ಜಾರಿ ಮಾಡುವ ಪ್ರಯತ್ನ ಇಂದಿಗೂ ಅಗಿಲ್ಲದಿರುವುದು, ವಿಳಂಬ ಆಗುತ್ತಿರುವುದಕ್ಕೆ ಕಾರಣವೇನು? ಎಸ್.ಸಿ., ಎಸ್.ಟಿ., ಸಮುದಾಯಗಳ ನ್ಯಾಯಬದ್ಧ ಹಕ್ಕುಗಳನ್ನು ಜಾರಿ ಮಾಡುವುದಕ್ಕೆ ತಮ್ಮ ಸರ್ಕಾರ ನಿರ್ಲಕ್ಷ ಮಾಡಬಾರದೆಂಬುದೇ ನಮ್ಮ ಅಪೇಕ್ಷೆ.ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಅಧಿಕಾರ ಇದ್ದ ಸಂದರ್ಭದಲ್ಲಿ ತಮ್ಮ ಬಿ.ಜೆ.ಪಿ.ಪಕ್ಷವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕೇವಲ 24 ಗಂಟೆಗಳಲ್ಲಿ ಎಸ್.ಟಿ. ಮೀಸಲಾತಿಯನ್ನು ಶೇಕಡ 3 ರಿಂದ 7.5ಕ್ಕೆ ಹೆಚ್ಚಿಸುವುದಾಗಿ ತಮ್ಮ ಪಕ್ಷದ ಹಿರಿಯ ಮುಖಂಡರು ಭರವಸೆ ನೀಡಿದ್ದರು. ಹಾಗೆಯೇ ಕೆಲವರು ರಕ್ತದಲ್ಲಿ ಬರೆದುಕೊಡುವುದಾಗಿಯೂ, ಮತ್ತೆ ಕೆಲವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಪಕ್ಷದಿಂದಲೇ ಹೊರಬರುವುದಾಗಿ ಹೇಳಿದ್ದರೆಂಬುದನ್ನು ಈ ಮಾತುಗಳನ್ನು ಈ ರಾಜ್ಯದ ಜನ ಸಂಪೂರ್ಣವಾಗಿ ನಂಬಿದ್ದರೆAಬುದನ್ನು ತಮಗೆ ನೆನಪಿಸುತ್ತೇವೆ. ಹಾಗೆಯೇ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್‌ದಾಸ್ ಆಯೋಗದ ವರದಿ ಸರ್ಕಾರಕ್ಕೆ ಸಲ್ಲಿಸಿದ ಒಂದೇ ವಾರದಲ್ಲಿ ಜಾರಿ ಮಾಡುವುದಾಗಿ ತಮ್ಮ ಪಕ್ಷ ಭರವಸೆ ನೀಡಿತ್ತು ಎಂಬುದನ್ನು ಸಹ ತಮಗೆ ಈ ಮೂಲಕ ನೆನಪು ಮಾಡುತ್ತಿದ್ದೇವೆ. ಈಗಲಾದರೂ ತಾವು ತಮ್ಮ ಪಕ್ಷದ ಭರವಸೆಗೆ ಎರಡು ವರ್ಷ ತುಂಬಿದೆ ಎಂಬುದನ್ನು ಗ್ರಹಿಸಬೇಕಾಗಿ ಕೋರುತ್ತಾ, ಈ ಕೆಳಗಿನ ನಮ್ಮ ಬೇಡಿಕೆಗಳನ್ನು ಈಡೇರಿಸುವ ಮೂಲಕ ತಮ್ಮ ಪಕ್ಷದ ದಲಿತ ವಿರೋಧಿ ಎಂಬ ಕಳಂಕದಿ0ದ ಹೊರ ಬರುತ್ತಿರೆಂದು ಮತ್ತೊಮ್ಮೆ ನಂಬುತ್ತಾ ಈ ಮನವಿಯನ್ನು ಸಲ್ಲಿಸುತ್ತಿದ್ದೇವೆ ಎಂದು ಬಿ.ಆರ್.ಎಲ್.ಶ್ರೀನಿವಾಸ ಅವರು ತಿಳಿಸಿದ್ದಾರೆ.
0 Comments