ಅಕ್ಟೋಬರ್ 4, ಮೈಸೂರು: ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯದಲ್ಲಿ ಮುಂದೆ ಎಂದಿಗೂ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರುವುದಿಲ್ಲ ಎಂಬ ನಡುಕ ಹುಟ್ಟಿದೆ. ಅದೇ ಕಾರಣಕ್ಕೆ ಕಾಂಗ್ರೇಸಿಗರು ಇಲ್ಲಸಲ್ಲದ ಕಥೆ ಕಟ್ಟಿ ಮಾತನಾಡುತ್ತಿದ್ದಾರೆ ಎಂದು ಅಶ್ವತ್ಥ ನಾರಾಯಣ ಟೀಕಿಸಿದರು.
ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಒಡೆದು ಚೂರು ಚೂರಾಗುತ್ತಿದೆ. ಯಾರು ನಾಯಕರಾಗುತ್ತಾರೆ ಎಂಬ ಹುಡುಕಾಟ ನಡೆಯುತ್ತಿದೆ. ಈ ನಡುವೆ ನಾನು ಸಿಎಂ ಆಗುತ್ತೇನೆ, ತಾನು ಸಿಎಂ ಆಗುತ್ತೇನೆ ಅಂತ ಕೆಲವರು ಹಗಲುಗನಸು ಕಾಣುತ್ತಿದ್ದಾರೆ ಎಂದು ಸಿದ್ದರಾಮಯ್ಯ ಅವರಿಗೆ ಪರೋಕ್ಷವಾಗಿ ಅಶ್ವತ್ಥ್ ನಾರಾಯಣ ತಿರುಗೇಟು ನೀಡಿದರು.
ರಾಜ್ಯದಲ್ಲಿ ಮೋದಿ ಅಲೆ ಬಗ್ಗೆ ಬಿಎಸ್ವೈ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅಶ್ವತ್ಥ್ ನಾರಾಯಣ್‌ರವರು, ಹಾಸನಕ್ಕೆ ಹೋಗಿ ಕೇಳಿದರೂ ಕೂಡಾ ಶೇ. 65% ಜನ ಮೋದಿ ಪ್ರಧಾನಿ ಆಗಬೇಕು ಅಂತಾರೆ. ಕನಕಪುರಕ್ಕೂ ಹೋಗಿ ಕೇಳಿದ್ರೂ ಮೋದಿ ಹೇಸರೇಳ್ತಾರೆ. ಅಲ್ಲೆಲ್ಲೂ ಸ್ಥಳೀಯ ನಾಯಕರ ಹೆಸರೇಳಲ್ಲ. ನರೇಂದ್ರ ಮೋದಿ ಅಲೆ ಸದಾ ಇದ್ದೇ ಇರುತ್ತೆ ಎಂದು ಹೇಳುವ ಮೂಲಕ, ದಳಪತಿಗಳು ಹಾಗೂ ಡಿಕೆಶಿಗೆ ಅಶ್ವತ್ಥ್ ನಾರಾಯಣ್ ಟಾಂಗ್ ಕೊಟ್ಟರು.

0 Comments