ಅಕ್ಟೋಬರ್ 4, ಮುಂಬಯಿ: ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನದ ನಂತರ ಸಲ್ಮಾನ್ ಖಾನ್ ಸಹೋದರಿ ಅಲ್ವಿರಾ ಖಾನ್ ಶಾರುಖ್ ಮನೆಗೆ ಭೇಟಿ ನೀಡಿದರು.
ಸಲ್ಮಾನ್ ಖಾನ್ ನಂತರ, ಅವರ ಸಹೋದರಿ ಅಲ್ವಿರಾ ಖಾನ್ ಅಗ್ನಿಹೋತ್ರಿ ತಮ್ಮ ಬೆಂಬಲವನ್ನು ತೋರಿಸಲು ಶಾರುಖ್ ಖಾನ್ ಅವರ ಮುಂಬೈ ಮನೆಗೆ ಭೇಟಿ ನೀಡಿದರು. ಮಾದಕ ದ್ರವ್ಯ ಸಂಬಧಿ0ತ ಪ್ರಕರಣದಲ್ಲಿ ಶಾರುಖ್ ಪುತ್ರ ಆರ್ಯನ್ ಖಾನ್‌ನನ್ನು ಮಾದಕದ್ರವ್ಯ ನಿಯಂತ್ರಣ ಬ್ಯೂರೋ (ಎನ್‌ಸಿಬಿ) ಶನಿವಾರ ರಾತ್ರಿ ಬಂಧಿಸಿದೆ. ಶಾರುಖ್ ಮತ್ತು ಅವರ ಕುಟುಂಬವು ಉದ್ಯಮದಲ್ಲಿ ಇತರರ ಬೆಂಬಲವನ್ನು ಪಡೆದಿದೆ. ಸುನೀಲ್ ಶೆಟ್ಟಿ, ಪೂಜಾ ಭಟ್, ಸುಚಿತ್ರಾ ಕೃಷ್ಣಮೂರ್ತಿ ಮತ್ತು ಹಂಸಲ್ ಮೆಹ್ತಾ ಅವರಂತಹ ಖ್ಯಾತನಾಮರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.

0 Comments