ರಾಯಚೂರು ನಗರದ ಪ್ರತಿಷ್ಠಿತ ಉಪ್ಪಾರವಾಡಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದ 50ನೇ ವರ್ಷದ ಸುವರ್ಣ ಮಹೋತ್ಸವದ ಅಂಗವಾಗಿ. ನವರಾತ್ರಿ ಉತ್ಸವವು ವಿಜೃಂಭಣೆಯಿAದ ನೆರವೇರಿಸಲು ಉದ್ದೇಶಿಸಿದೆ.
ಗುರುವಾರ ದಿನಾಂಕ 07-10-2021 ರಂದು ಬೆಳಿಗ್ಗೆ 5-00 ಗಂಟೆಗೆ ಸುಪ್ರಭಾತ, 7-00 ಗಂಟೆಗೆ ಕಳಸ ಪೂಜೆ ಹಾಗೂ ಧ್ವಜಾರೋಹಣ, ಪಂಚಾಮೃತ ಅಲಂಕಾರ ನಂತರ ಮಹಾಮಂಗಳಾರತಿ ಆದನಂತರ ಬೆಳಿಗ್ಗೆ 9-00 ಗಂಟೆಯಿAದ ಹೊಸದಾಗಿ ಪಂಚಲೋಹದಿAದ ನಿರ್ಮಿಸಿದ 9 (ಒಂಬತ್ತು) ವಾಹನಗಳನ್ನು ಶೋಭಯಾತ್ರೆಯ (ಮೆರವಣಿಗೆ) ಮೂಲಕ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಿಂದ ಆರಂಭವಾಗಿ ಪಟೇಲ್ ರಸ್ತೆ, ಶೆಟ್ಟಿಬೌಡಿ ಚೌಕ್, ಸರಾಫ್ ಬಜಾರ್, ಕಿರಾಣ ಬಜಾರ್, ಬಟ್ಟೆ ಬಜಾರ್, ಮಹಾವೀಚೌಕ್, ಹರಿಹರ ರಸ್ತೆ, ಶ್ರೀ ಚಂದ್ರಮೌಳೇಶ್ವರ ವೃತ್ತದಿಂದ ಸಿಟಿ ಟಾಕೀಜ್ ಸರ್ಕಲ್ ದಿಂದ ದೇವಸ್ಥಾನಕ್ಕೆ ಮರಳುವುದು.
ಈ ಶೋಭಾಯಾತ್ರೆಯಲ್ಲಿ ಮಹಿಳೆಯ ರಿಂದ ಕಳಸಗಳ ಸಂಗಡ ಹಾಗೂ ವಿವಿಧ ಭಜನಾ ಮಂಡಳಿಯವ ರಿಂದ ಮತ್ತು ಕೇರಳಮಾದರಿಯ ಚಂಡಿಮೇಳ ವಾದ್ಯ, ಡೊಳ್ಳು ಕುಣಿತ, ಪ್ರತಿ ವರ್ಷ ಪದ್ಧತಿಯಂತೆ ಮೇಳದವ ರಿಂದ ಮೇಳ ವಾದ್ಯಗಳೊಂದಿಗೆ ಒಂಬತ್ತು (9) ವಾಹನಗಳನ್ನು ಮೆರವಣಿಗೆ ಮಾಡಲಾಗುವುದು.
ಗುರುವಾರ 07-10-2021 ರಂದು ಸೂರ್ಯ ವಾಹನ
ಶುಕ್ರವಾರ 08-10-2021 ರಂದು ಆದಿಶೇಷ ವಾಹನ
ಶನಿವಾರ 09-10-2021 ರಂದು ಆಂಜನೇಯ ವಾಹನ
ರವಿವಾರ 10-10-2021 ರಂದು ಕಾಮಧೇನು ಕಲ್ಪವೃಕ್ಷ ವಾಹನ ಕಳಸಗಳೊಂದಿಗೆ ದೀರ್ಘ ಸಾಷ್ಟಾಂಗ ನಮಸ್ಕಾರಗಳು
ಸೋಮವಾರ 11-10-2021 ರಂದು ಗರುಡ ವಾಹನ
ಮಂಗಳವಾರ 12-10-2021 ರಂದು ಚಂದ್ರ ವಾಹನ
ಬುಧÀವಾರ 13-10-2021 ರಂದು ಸಿಂಹ ವಾಹನ ದುರ್ಗಾಷ್ಠಾಮಿ ಉಚ್ಚಾಯ ಉತ್ಸವ ಇರುತ್ತದೆ.
ಗುರುವಾರ 14-10-2021 ರಂದು ಅಶ್ವ ವಾಹನ ಮತ್ತು ಗಜ ವಾಹನ
ಆಯುಧ ಪೂಜೆ ಮತ್ತು ರಥೋತ್ಸವ ಕಾರ್ಯಕ್ರಮಗಳು ಇರುತ್ತವೆ.
ಶುಕ್ರವಾರ ದಿನಾಂಕ 15-10-2021 ರಂದು ಬೆಳಿಗ್ಗೆ 10-00 ಗಂಟೆಗೆ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮವು ಜರುಗುವುದು ಮತ್ತು ಸಾಯಂಕಾಲ ಬನ್ನಿ ಮುಡಿಸುವುದರ ಮುಖಾಂತರ ದಸರಾ ಹಬ್ಬವನ್ನು ಆಚರಿಸಲಾಗುವುದು ಎಂದು ಉಪ್ಪಾರವಾಡಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷರು ಬಲಚೇಡ್ ವೆಂಕೋಬ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 Comments