Ticker

6/recent/ticker-posts

Ad Code

Responsive Advertisement

ಚಾಮರಾಜನಗರ : ದಸರಾ ಸಂಭ್ರಮಕ್ಕೆ ಕ್ಷಣಗಣನೆ ಆರಂಭ

ಚಾಮರಾಜನಗರ: ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಜಿಲ್ಲೆಯಲ್ಲೂ ಹಮ್ಮಿಕೊಂಡಿರುವ ನಾಲ್ಕು ದಿನದ ದಸರಾ ಮಹೋತ್ಸವಕ್ಕೆ ಗುರುವಾರ (ಅ.7) ಚಾಲನೆ ಸಿಗಲಿದೆ. ಅಂತೆಯೇ, 2019ರಲ್ಲಿ ಜಿಲ್ಲಾ ದಸರಾವನ್ನು ವಿಜೃಂಭಣೆಯಿAದ ಆಯೋಜಿಸಲಾಗಿತ್ತು. ಕೋವಿಡ್  ಅಲೆಯ ಕಾರಣಕ್ಕೆ ಜಿಲ್ಲಾ ಮಟ್ಟದ ದಸರಾ ನಡೆದಿರಲಿಲ್ಲ. ಸರಳ ಆಚರಣೆಗೆ ಸೀಮಿತವಾಗಿತ್ತು. ಚಾಮರಾಜೇಶ್ವರ ದೇವಾಲಯದ ಒಳ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕನಿಷ್ಠ ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಿ, ಕೇಬಲ್ ಟಿವಿ, ಫೇಸ್‌ಬುಕ್‌ಗಳಲ್ಲಿ ಮಾತ್ರವೇ ಕಾರ್ಯಕ್ರಮ ನೇರಪ್ರಸಾರ ಮಾಡಲಾಗಿತ್ತು. 


ಈ ಬಾರಿ ಕೋವಿಡ್ ಪರಿಸ್ಥಿತಿ ನಿಯಂತ್ರಣದಲ್ಲಿರುವುದರಿAದ ಕೋವಿಡ್ ನಿಯಮಗಳ ಪಾಲನೆಗೆ ಒಳಪಟ್ಟು ದಸರಾ ಆಚರಿಸಲು ಸರ್ಕಾರ ಅನುಮತಿ ನೀಡಿದ್ದು, ಅ.7ರಿಂದ 10ರವರೆಗೆ ನಡೆಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. 

ವಿದ್ಯುತ್ ಅಲಂಕಾರ, ಉದ್ಘಾಟನಾ ಸಮಾರಂಭ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಈ ಬಾರಿಯ ದಸರಾ ಸೀಮಿತವಾಗಿದೆ. ಈ ಹಿಂದೆ ನಾಲ್ಕು ದಿನವೂ ಕಲಾ ತಂಡಗಳ ಮೆರವಣಿಗೆ, ಮಹಿಳಾ ದಸರಾ, ರೈತ ದಸರಾ, ಕ್ರೀಡಾ ದಸರಾ, ಆಹಾರ ದಸರಾ... ಮುಂತಾದ ಒಂದಿಲ್ಲೊAದು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಲಾಗುತ್ತಿತ್ತು. ದಸರಾ ಅಂಗವಾಗಿ ಆಕರ್ಷಕ ಫಲಪುಷ್ಪ ಪ್ರದರ್ಶನಗಳನ್ನೂ ಏರ್ಪಡಿಸಲಾಗುತ್ತಿತ್ತು. ಕೋವಿಡ್ ಹಾವಳಿ ಇದಕ್ಕೆಲ್ಲವೂ ತಡೆಯೊಡ್ಡಿದೆ.

ಗುರುವಾರ ಬೆಳಿಗ್ಗೆ 10.15ಕ್ಕೆ ಚಾಮರಾಜೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯದೊAದಿಗೆ ಜಿಲ್ಲಾ ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ ಸಿಗಲಿದೆ. ಬಳಿಕ ದೇವಾಲಯದ ಆವರಣದಲ್ಲಿ ಕಲಾ ತಂಡಗಳ ಪ್ರದರ್ಶನವೂ ನಡೆಯಲಿದೆ. 11 ಗಂಟೆಗೆ ಚಿತ್ರ ಕಲಾ ಪ್ರದರ್ಶನವನ್ನೂ ಹಮ್ಮಿಕೊಳ್ಳಲಾಗಿದೆ. 

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಲೋಕಸಭಾ ಸದಸ್ಯ ವಿ.ಶ್ರೀನಿವಾಸ ಪ್ರಸಾದ್, ಶಾಸಕ ಆರ್.ನರೇಂದ್ರ, ಎನ್.ಮಹೇಶ್, ಸಿ.ಎಸ್. ನಿರಂಜನ್‌ಕುಮಾರ್, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷರಾದ ಎಂ.ರಾಮಚAದ್ರ, ನಗರಸಭಾ ಅಧ್ಯಕ್ಷೆ ಸಿ.ಎಂ.ಆಶಾ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿ.ಬಿ.ಶಾಂತಮೂರ್ತಿ ಕುಲಗಾಣ, ನಗರಸಭಾ ಉಪಾಧ್ಯಕ್ಷೆ ಪಿ.ಸುಧಾ ಸಮಾರಂಭದಲ್ಲಿ ಉಪಸ್ಥಿತರಿರುವರು.

ಸಾಂಸ್ಕೃತಿಕ ವೈವಿಧ್ಯ : ದಸರಾ ಪ್ರಯುಕ್ತ ನಾಲ್ಕು ದಿನವೂ ಚಾಮರಾಜೇಶ್ವರ ದೇವಾಲಯದ ಆವರಣದ ಬಳಿ ನಿರ್ಮಿಸಲಾಗಿರುವ ಮುಖ್ಯ ವೇದಿಕೆಯಲ್ಲಿ ಸಂಜೆ 4ರಿಂದ ರಾತ್ರಿ 9.45ರವರೆಗೆ ಹಾಗೂ ಜಿಲ್ಲಾಡಳಿತ ಭವನದಲ್ಲಿರುವ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಮಧ್ಯಾಹ್ನ 2ರಿಂದ ರಾತ್ರಿ 9.50ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. 

ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ.

ರಿಯಾಲಿಟಿ ಶೋ ಮಜಾ ಭಾರತ ಖ್ಯಾತಿಯ ಜಗಪ್ಪ ತಂಡದ ಹಾಸ್ಯೋತ್ಸವ, ಉಮ್ಮತ್ತೂರು ಬಸವರಾಜು, ಮಿಮಿಕ್ರಿ ಗೋಪಿ ತಂಡದ ಹಾಸ್ಯ ಸಂಜೆ, ಬಸವಟ್ಟಿ ಲೋಕೇಶ್ ಮತ್ತು ತಂಡದ ನೃತ್ಯ ಪ್ರದರ್ಶನ ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿಯಲ್ಲಿರುವುದು ವಿಶೇಷವೇ ಸರಿ. 




Post a Comment

0 Comments

Ad Code

Responsive Advertisement