4ದಿನಗಳ ಬೃಹತ್ ಆಭರಣ ಮೇಳ @ ಪ್ಯಾಲೆಸ್ ಗ್ರೌಂಡ್ ತ್ರಿಪುರವಾಸಿನಿ ಯಲ್ಲಿ
ಬೆಂಗಳೂರು, ಅ, 15; ಭಾರತದ ಅತ್ಯಂತ ಪುರಾತನ, ಅತಿ ದೊಡ್ಡ ಮತ್ತು ಅತ್ಯುತ್ತಮ ಚಿನ್ನಾಭರಣ ಮೇಳ ಅ. 15 ರಿಂದ 18 ರ ವರೆಗೆ 4ದಿನಗಳ ಕಾಲ ನಡೆಯುವ ಜುವೆಲ್ಸ್ ಆಫ್ ಇಂಡಿಯಾದ ಮಾರಾಟ ಮತ್ತು ಪ್ರದರ್ಶನ ಮೇಳವನ್ನು ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿಂದು ನಟಿ ಪ್ರಿಯಾಂಕ ಉಪೇಂದ್ರ ಚಾಲನೆ ನೀಡಿದರು. .4ದಿನಗಳ ಬೃಹತ್ ಆಭರಣ ಮೇಳ @ ಪ್ಯಾಲೆಸ್ ಗ್ರೌಂಡ್ ತ್ರಿಪುರವಾಸಿನಿ ಯಲ್ಲಿ ಭಾರತದ ಪಾರಂಪರಿಕ ಹಾಗೂ 5D&3D ವಿನ್ಯಾಸವಿರುವ *ಭಾರತದ 150 ಕ್ಕೂ ಹೆಚ್ಚು ಆಭರಣ* ಪ್ರದರ್ಶಕರು ಒಂದೇ ಸೂರಿನಡಿ ಸಾವಿರಾರು ಡಿಸೈನ್ ಆಭರಣಗಳು ಪ್ರದರ್ಶನ. ದೇಶಾದ್ಯಂತ 100ಕ್ಕೂ ಹೆಚ್ಚು ಖ್ಯಾತ ಆಭರಣ ಮಾರಾಟಗಾರರು ಮೇಳದಲ್ಲಿ ಪಾಲ್ಗೊಂಡಿದ್ದು, ಇದೇ ಮೊದಲ ಬಾರಿಗೆ ಶೇಕಡ 20ರಷ್ಟು ಹೊಸ ಮತ್ತು ಅತ್ಯಾಧುನಿಕ ಮಾದರಿಗಳ ಆಭರಣ ಮಾರಾಟಗಾರರು ಈ ಮೇಳದ ವಿಶೇಷವಾಗಿದೆ. ಆಧುನಿಕ ಮತ್ತು ವೈವಿದ್ಯಮಯ ವಿನ್ಯಾಸಗಳ ಆಭರಣಗಳನ್ನು ತೊಟ್ಟು ಕಂಗೊಳಿಸುತ್ತಿವೆ.ವಿಶಿಷ್ಟ, ವಿನೂತನ ಹಾಗೂ ಆಕರ್ಷಕ ಆಭರಣ ಮೇಳದಲ್ಲಿ ಬೆಂಗಳೂರಿನ ಮಹಿಳೆಯರಷ್ಟೇ ಅಲ್ಲದೆ, ರಾಜ್ಯದಾದ್ಯಂತ ಎಲ್ಲರೂ ಪಾಲ್ಗೊಳ್ಳಬೇಕು. ಈ ಮೇಳ ಬದುಕಿಗೆ ಹೊಸ ಮೆರಗು ಮತ್ತು ಘನತೆ ತಂದುಕೊಡುತ್ತದೆ ಎಂದು ಮಾತನಾಡಿದ ಪ್ರಿಯಾಂಕ ಉಪೇಂದ್ರ, ದಸರಾ ಹಬ್ಬದ ಸಂದರ್ಭದಲ್ಲಿ ದೇಶದ ಎಲ್ಲ ಅತ್ಯುತ್ತಮ ಆಭರಣಗಳು ಒಂದೇ ಸೂರಿನಡಿ ಪ್ರದರ್ಶನವಾಗುತ್ತಿದೆ. ಈ ಮೇಳ ಚಿನ್ನಾಭರಣ ಖರೀದಿಗೆ ಅತ್ಯುತ್ತಮ ಸಮಯ ಎಂದರು.
ಮೇಳದ ಸಂಚಾಲಕ ಸಂದೀಪ್ ಬೇಕಲ್ ಮಾತನಾಡಿ, ಎಲ್ಲಾ ಅಭಿರುಚಿಯ, ಎಲ್ಲರ ದರಗಳಿಗೆ ಹೊಂದಿಕೊಳ್ಳುವ ಆಭರಣಗಳನ್ನು ಮೇಳದಲ್ಲಿ ಪ್ರದರ್ಶಿಸಲಾಗುತ್ತಿದೆ. ಅಂಬೂಷಣ್, ಶ್ರೀ ಗಣೇಶ್ ಡೈಮಂಡ್ಸ್ ಅಂಡ್ ಜ್ಯುವೆಲ್ಸ್, ಪಂಚ್ ಕೇಸರಿ ಬಡೇರಾ ಜ್ಯುವೆಲ್ಸ್, ಎಂ.ಪಿ. ಸ್ವರ್ಣಮಹಲ್, ಕ್ರಿಯೇಷನ್ಸ್ ಜ್ಯುವೆರಿ, ಪಿ.ಎಂ.ಜೆ. ಜ್ಯುವೆಲ್ಸ್ ಹೀಗೆ ಹತ್ತು-ಹಲವು ಆಭರಣ ಹೀಗೆ ಹತ್ತು-ಹಲವು ಆಭರಣ ಮಾರಾಟಗಾರರು ಮೇಳದಲ್ಲಿ ಪಾಲ್ಗೊಂಡಿದ್ದರು. ಮೈಮನ, ಕಣ್ಮನ ಸೆಳೆಯುವಂತಹ ಒ
ಡವೆಗಳನ್ನು ತಮ್ಮದಾಗಿಸಿಕೊಳ್ಳಲು ಆಭರಣ ಪ್ರಿಯರಿಗೆ ಇದೊಂದು ಉತ್ತಮ ಅವಕಾಶವಾಗಿದೆ ಎಂದರು. ಈ ಮೇಳದಲ್ಲಿ ಜ್ಯುವೆಲ್ಸ್ ಆಫ್ ಇಂಡಿಯಾ ಆಯೋಜಕ ಸಂದೀಪ್ ಬೇಕಲ್ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು
ಡವೆಗಳನ್ನು ತಮ್ಮದಾಗಿಸಿಕೊಳ್ಳಲು ಆಭರಣ ಪ್ರಿಯರಿಗೆ ಇದೊಂದು ಉತ್ತಮ ಅವಕಾಶವಾಗಿದೆ ಎಂದರು. ಈ ಮೇಳದಲ್ಲಿ ಜ್ಯುವೆಲ್ಸ್ ಆಫ್ ಇಂಡಿಯಾ ಆಯೋಜಕ ಸಂದೀಪ್ ಬೇಕಲ್ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು
ಅರಮನೆ ಮೈದಾನದಲ್ಲಿಂದು 4ದಿನಗಳ ಕಾಲ ನಡೆಯುವ ಜುವೆಲ್ಸ್ ಆಫ್ ಇಂಡಿಯಾದ ಚಿನ್ನಾಭರಣ ಮಾರಾಟ ಮತ್ತು ಪ್ರದರ್ಶನ ಮೇಳಕ್ಕೆ ನಟಿ ಪ್ರಿಯಾಂಕ ಉಪೇಂದ್ರ ಚಾಲನೆ ನೀಡಿದರು. ಜ್ಯುವೆಲ್ಸ್ ಆಫ್ ಇಂಡಿಯಾ ಆಯೋಜಕ ಸಂದೀಪ್ ಬೇಕಲ್, ದಿನೇಶ್ ಗುರೂಜಿ ಪಾಲ್ಗೊಂಡಿದ್ದರು.
0 Comments