ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಚಿಲಕಲನೇರ್ಪು ಪಂಚಾಯಿತಿಯ ಹಿರಿಯ ಕಾಂಗ್ರೆಸ್ ಮುಖಂಡ 84 ವರ್ಷದ P.ಬಯಣ್ಣ ರವರು ಹದಿನೈದು ದಿವಸದ ಹಿಂದೆ ಇವರ ಅಣ್ಣ ಚೌಡಪ್ಪ ಅವರ ನಿಧನದಿಂದ ವಿಚಲಿತರಾದ ಇವರು ಅವರ ಯೋಚನೆಯಲ್ಲೇ ಮುಳುಗಿ ಆರೋಗ್ಯ ಹದಗೆಟ್ಟು Low BP ಯಾಗಿ ಬೆಂಗಳೂರಿನ ವಿಕ್ಟೋರಿಯಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇತ್ತೀಚಿಗೆ ಆರೋಗ್ಯ ಸುಧಾರಿಸಿಕೊಂಡು ನಾಳೆ ವಿಕ್ಟೋರಿಯಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬರಬೇಕಾಗಿತ್ತು
ಆದರೆ ಇಂದು ಹೃದಯಾಘಾತದಿಂದ ಬೆಳಗಿನ ಜಾವ 4.45 ಕ್ಕೆ ದೈವಾಧೀನ ರಾಗಿರುತ್ತಾರೆ. ಶ್ರೀಯುತರು ನಾಲ್ಕು ಜನ ಮಕ್ಕಳಾದ B. ಆನಂದ್ ನ್ಯಾಯವಾದಿಗಳು B. ಶೇಖರ್ ಗುತ್ತಿಗೆದಾರರು B. ಲಲಿತ B. ಸುನಂದ ಹಾಗೂ ಅಳಿಯ R.T.O. ನಾಗಿ ರೆಡ್ಡಿ ರವರನ್ನು ಆಗಲಿರುತ್ತಾರೆ. ಶ್ರೀಯುತರು ರಾಜಕೀಯ ಕ್ಷಾಣ ಕ್ಷರು ಸುಮಾರು ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ ಕೀರ್ತಿ ಅಪಾರ ನಿರ್ದೇಶಕರಾಗಿ ಕರ್ನಾಟಕ ವಸತಿ ಒಕ್ಕೊಟ ಬೆಂಗಳೂರು DCC ಬ್ಯಾಂಕ್ ಅಧ್ಯಕ್ಷರಾಗಿ ತಾಲೂಕು ಕೃಷಿಕ ಸಮಾಜ ಅಧ್ಯಕ್ಷರಾಗಿ ಮತ್ತು ಸಂಸ್ಥಾಪಕರಾಗಿ ಹಾಗೂ ಹಾಲಿ ಅಧ್ಯಕ್ಷರಾಗಿ ಚಿಲಕಲನೇರ್ಪು ಹಾಲು ಉತ್ಪದಕ ಸಹಕಾರಿ ಸಂಘ,SLN ಪ್ರೌಢ ಶಾಲೆ ಯಲ್ಲಿ ಕಾರ್ಯದರ್ಶಿಗಳಾಗಿ ಅನೇಕ ಇಲಾಖೆ ಗಳಲ್ಲಿಅಪಾರ ಸೇವೆ ಸಲ್ಲಿಸಿ ಅಪಾರ ಅಭಿಮಾನಿಗಳನ್ನು ಹೊಂದಿದ್ದರು ಇವರ ಕುಟುಂಬವರ್ಗಕ್ಕೆ ಅವರ ಅಭಿಮಾನಿಗಳಿಗೆ ದುಃಖ ತಡೆಯುವ ಶಕ್ತಿ ಕೊಡಲಿ ಎಂದು ಆ ದೇವರಲ್ಲಿ ಬೇಡುವ ಜನ ರಕ್ಷಕ ಪತ್ರಿಕೆಯ ಸಂಪಾದಕರಾದ B.R.ನಾಗರಾಜ್ ದೇವನಹಳ್ಳಿ ಎಕ್ಸ್ ಪ್ರೆಸ್ ಸಂಪಾದಕರಾದ ಮಧುಕುಮಾರ್. ಈ ದಿನ ಸಾಯಂಕಾಲ 6.00 ಗಂಟೆಗೆ ಅವರ ಸ್ವಗೃಹಕ್ಕೆ ತಂದು ನಾಳೆ ಅಂದರೆ 11/09/2021 ರಂದು ಬೆಳಗ್ಗೆ 10.00 ಗಂಟೆಯವರೆಗೂ ಅಭಿಮಾನಿಗಳ ದರ್ಶನಕ್ಕೆ ಅನುಕೂಲ ಮಾಡಲಾಗಿರುತ್ತದೆ ಮತ್ತು 11ಗಂಟೆಗೆ ಅಂತ್ಯಕ್ರಿಯೆ ನಡೆಸಲಾಗುವುದು.

0 Comments