ಬಳ್ಳಾರಿ ಸೆ09 : ಕರಕುಶಲ ಕರ್ಮಿಗಳು ಮತ್ತು ನೇಕಾರರಿಗೆ ಶಕ್ತಿ ತುಂಬಿ ಅವರ ಪ್ರಗತಿಯನ್ನು ಉತ್ತೇಜಿಸುವ ಗುರಿಯೊಂದಿಗೆ ಅಮೆಜಾನ್.ಇನ್ ಕರ್ನಾಟಕ ಸರ್ಕಾರದ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ನಿಯಮಿತ(ಕೆ.ಎಸ್.ಎಚ್.ಡಿ.ಸಿ.ಎಲ್) ಅಧೀನ ಸಂಸ್ಥೆಯಾದ ಕಾವೇರಿ ಹ್ಯಾಂಡಿಕ್ರಾಫ್ಟ್ ಎಂಪೋರಿಯ0ನ್ನು ತನ್ನ ಮಾರ್ಕೆಟ್‌ಪ್ಲೇಸ್‌ಗೆ ಸೇರ್ಪಡೆ ಮಾಡಿದೆ.ಕೆ.ಎಸ್.ಎಚ್.ಡಿ.ಸಿ.ಎಲ್‌ನೊಂದಿಗೆ ಸಹಯೋಗ ಹೊಂದಿರುವ ಮೈಸೂರು, ಆನೆಗುಂದಿ, ಸಂಡೂರು, ಬಿಜಾಪುರ, ಹಿರಿಯೂರು, ಚನ್ನಪಟ್ಟಣ ಮತ್ತು ಶಿವಾರಪಟ್ಟಣದ ಕರಕುಶಲ ಕರ್ಮಿಗಳು ಅವರ ಉತ್ಪನ್ನಗಳನ್ನು ಭಾರತದಾದ್ಯಂತ ತಲುಪುವಂತೆ ಮಾಡುವ ಹಾಗೂ ಅವರ ವ್ಯಾಪಾರವನ್ನು ಹೆಚ್ಚಿಸಿಕೊಳ್ಳಲು ಅಮೆಜಾ಼ನ್.ಇನ್ ಕಾರ್ಯಕ್ರಮದ ಭಾಗವಾಗಲು ಉತ್ತೇಜಿಸುತ್ತದೆ. ಈ ಕಾರ್ಯಕ್ರಮದ ಮೂಲಕ ಕಾವೇರಿ ಹ್ಯಾಂಡಿಕ್ರಾಫ್ಟ್ ಎಂಪೋರಿಯ0 ವಿಸ್ತಾರ ಅನುಕೂಲಗಳನ್ನು ಪಡೆಯಲಿದ್ದು ಅದರಲ್ಲಿ ತರಬೇತಿ, ಗ್ರಾಹಕರ ವಿಸಿಬಿಲಿಟಿ ಹೆಚ್ಚಳ ಮತ್ತು ವಿಶೇಷವಾದ ಮಾರ್ಕೆಟಿಂಗ್ ಬೆಂಬಲ ಇತ್ಯಾದಿ ಒಳಗೊಂಡಿರುತ್ತದೆ.
ಹಬ್ಬದ ಸಂದರ್ಭದಲ್ಲಿ ಕಾವೇರಿ ಹ್ಯಾಂಡಿಕ್ರಾಫ್ಟ್ EMPORIUM ಸೇರ್ಪಡೆಯೊಂದಿಗೆ ದೇಶಾದ್ಯಂತ ಅಮೆಜಾ಼ನ್.ಇನ್‌ನ ಲಕ್ಷಾಂತರ ಗ್ರಾಹಕರು ಈಗ ವಿಸ್ತಾರ ಬಗೆಯ ವಿಶಿಷ್ಟ ಭೌಗೋಳಿಕ ಸೂಚಕ(ಜಿಐ) ಉತ್ಪನ್ನಗಳಾದ ಬಿದರಿಕಲೆ, ಚನ್ನಪಟ್ಟಣ ಆಟಿಕೆಗಳು ಮತ್ತು ಗೊಂಬೆಗಳು ಅಲ್ಲದೆ ಇತರೆ ಸ್ಥಳೀಯವಾಗಿ ಉತ್ಪಾದಿಸಲಾದ ಶ್ರೀಗಂಧದ ಉತ್ಪನ್ನಗಳು, ರೋಸ್‌ವುಡ್ ಉತ್ಪನ್ನಗಳು, ಲೋಹದ ಕಲೆಗಳು ಮತ್ತು ಮರದ ಉತ್ಪನ್ನಗಳು ಮತ್ತಿತರೆ ದೊರೆಯುತ್ತವೆ. ಕಾವೇರಿ ಹ್ಯಾಂಡಿಕ್ರಾಫ್ಟ್ ಎಂಪೋರಿಯ0 ಪ್ರಾರಂಭದಲ್ಲಿ ಆಯ್ದ ಸುಮಾರು 1000 ಉತ್ಪನ್ನಗಳ ಮೂಲಕ ಮಾರುಕಟ್ಟೆ ಪ್ರವೇಶಿಸಲಿದೆ ನಂತರ ಹೆಚ್ಚು ಉತ್ಪನ್ನಗಳನ್ನು ಸೇರಿಸಲಾಗುತ್ತದೆ.ಇತ್ತೀಚೆಗೆ ಕರಕುಶಲಿಗರು ಮತ್ತು ನೇಕಾರರ ಉತ್ಪನ್ನಗಳಿಗೆ ಆನ್‌ಲೈನ್ ಬೇಡಿಕೆ ಹೆಚ್ಚಿಸಲು ಅವರಿಗೆ ದುಡಿಯುವ ಬಂಡವಾಳ ಒದಗಿಸಲು ಹಾಗೂ ಇತ್ತೀಚಿನ ಸಂಕಷ್ಟಗಳಿAದ ಪುಟಿದೇಳಲು ಅಮೆಜಾ಼ನ್.ಇನ್‌ಕರಿಗಾರ್ ಮೇಳ ಉಪಕ್ರಮ ಆಯೋಜಿಸಿತ್ತು. ಈ ಉಪಕ್ರಮದ ಭಾಗವಾಗಿ ಕಾವೇರಿ ಹ್ಯಾಂಡಿಕ್ರಾಫ್ಟ್ ಎಂಪೋರಿಯ- ಒಳಗೊಂಡು ಕರಿಗಾರ್ ಮಾರಾಟಗಾರರು ಸೆಪ್ಟೆಂಬರ್ 12, 2021ರವರೆಗೆ ಮಾರಾಟ(ಸೆಲ್ಲಿಂಗ್ ಆನ್ ಅಮೆಜಾ಼ನ್) ಮಾಡುವವರು ಶೇ.100ರಷ್ಟು ಅನುಕೂಲ ಪಡೆಯುತ್ತಾರೆ.ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕಿ ಡಿ.ರೂಪಾ ಮೌದ್ಗಿಲ್, “ಕಾವೇರಿ ಮತ್ತು ಅದರ ವೈಭವವನ್ನು ಹೆಚ್ಚು ಎತ್ತರಕ್ಕೆ ಕೊಂಡೊಯ್ಯುವ ಮತ್ತು ಅದೇ ಸಂದರ್ಭದಲ್ಲಿ ಬಿಕ್ಕಟ್ಟಿನಲ್ಲಿರುವ ಕರಕುಶಲಿಗರು ಮತ್ತು ಕಲಾವಿದರಕಲ್ಯಾಣಕ್ಕೆ ಶ್ರಮಿಸುವ ಗುರಿ ಹೊಂದಿದ್ದು ಈ ನಿಟ್ಟಿನಲ್ಲಿ ಕಾವೇರಿ ಹ್ಯಾಂಡಿಕ್ರಾಫ್ಟ್÷್ಸ ಎಂಪೋರಿಯA ಅಮೆಜಾ಼ನ್.ಇನ್ ಮಾರ್ಕೆಟ್‌ಪ್ಲೇಸ್‌ನಲ್ಲಿ ಪ್ರಾರಂಭವಾಗಿದೆ. ಈ ಪ್ರಾರಂಭವು ಕರ್ನಾಟಕದ ಕರಕುಶಲಿಗರಿಂದ ತಯಾರಿಸಲಾದ ಅಪಾರ ಬಗೆಯ ಕರಕುಶಲ ಉತ್ಪನ್ನಗಳನ್ನು ನಿರೀಕ್ಷಿಸುವವರಿಗೆ ಹೆಚ್ಚಿನ ವಿಸಿಬಿಲಿಟಿ ನೀಡುತ್ತದೆ. ಅಮೆಜಾ಼ನ್‌ನೊಂದಿಗೆ ನಮ್ಮ ಸಹಯೋಗದಲ್ಲಿ ಕಾವೇರಿ ಹ್ಯಾಂಡಿಕ್ರಾಫ್ಟ್÷್ಸ ಎಂಪೋರಿಯA ಉತ್ಪನ್ನಗಳ ಬಿಡುಗಡೆಯು ಕರ್ನಾಟಕದ ಶ್ರೀಮಂತ ಕಲೆಗಳ ಅರಿವನ್ನು ಮೂಡಿಸುವಲ್ಲಿ ಮತ್ತು ಮಾನ್ಯತೆ ತಂದುಕೊಡುವಲ್ಲಿ ನೆರವಾಗಲಿದೆ ಮತ್ತು ಕರಕುಶಲಿಗರಿಗೆ ತಮ್ಮ ವ್ಯಾಪಾರವನ್ನು ದೇಶಾದ್ಯಂತ ಲಕ್ಷಾಂತರ ಅಮೆಜಾ಼ನ್ ಗ್ರಾಹಕರಿಗೆ ತಲುಪಿಸುವ ಮೂಲಕ ಅನಿಯಮಿತ ಅವಕಾಶಗಳನ್ನು ತೆರೆಯಲಿದೆ” ಎಂದರು.“ಕರ್ನಾಟಕ ತನ್ನ ಕರಕುಶಲ ಉದ್ಯಮಕ್ಕೆ ಖ್ಯಾತಿ ಪಡೆದಿದೆ ಮತ್ತು ಅದರ ವಿಶಿಷ್ಟ, ಸಾಂಪ್ರದಾಯಿಕ ಮಾಸ್ಟರ್‌ಪೀಸ್‌ಗಳನ್ನು ವೈವಿಧ್ಯಮಯ ವಸ್ತುಗಳನ್ನು ಬಳಸಿ ಸಿದ್ಧಪಡಿಸಲಾಗಿದ್ದು ಅವುಗಳಲ್ಲಿ ಸೂಕ್ಷö್ಮ ಅಲಂಕರಣಗಳು ಮತ್ತು ಕಾಲನ ಪರೀಕ್ಷೆಗೆ ಒಳಪಟ್ಟ ಹಾಗೂ ಆಧುನಿಕ ತಂತ್ರಗಳಿವೆ. ಕಾವೇರಿ ಹ್ಯಾಂಡಿಕ್ರಾಫ್ಟ್ emporium ಉತ್ಪನ್ನಗಳ ಪ್ರಾರಂಭವು ಉತ್ಪನ್ನ ಆಯ್ಕೆಗೆ ಸ್ಥಳೀಯ ಕಲಾ ಮಾದರಿಗಳನ್ನು ತರುವ ಮೂಲಕ ಕರಕುಶಲಿಗರಿಗೆ ಅನುಕೂಲ ಒದಗಿಸುವ ನಮ್ಮ ಗುರಿ ಸಾಧಿಸುವತ್ತ ಪ್ರಮುಖ ಹೆಜ್ಜೆಯಾಗಿದೆ ಮತ್ತು ಅಮೆಜಾ಼ನ್.ಇನ್ ಮಾರ್ಕೆಟ್‌ಪ್ಲೇಸ್‌ನ್ನು ನೈಜವಾದ ಭಾರತದ ಶ್ರೀಮಂತ ಪರಂಪರೆ ಬಿಂಬಿಸುವ ಪ್ರತಿನಿಧಿಯಾಗಿಸುತ್ತದೆ” ಎಂದು ಅಮೆಜಾ಼ನ್ ಇಂಡಿಯಾದ ಸೆಲ್ಲರ್ ಪಾರ್ಟ್ನರ್ ಸರ್ವೀಸಸ್‌ನ ನಿರ್ದೇಶಕ ಸುಮಿತ್ ಸಹಾಯ್ ಹೇಳಿದರು.

0 Comments