Ticker

6/recent/ticker-posts

Ad Code

Responsive Advertisement

ಭಾರತೀಯ ಹರಿದಾಸ ವಿದ್ಯಾಲಯ ವತಿಯಿಂದ ಆಧ್ಯಾತ್ಮಿಕ ಪುಸ್ತಕಗಳ ಲೋಕಾರ್ಪಣೆ

ಭಾರತೀಯ ಹರಿದಾಸ ವಿದ್ಯಾಲಯ, ರಾಜರಾಜೇಶ್ವರಿ ನಗರ, ಬೆಂಗಳೂರು ಇದರ ಜ್ಞಾನ ಭಾರತಿ ಘಟಕದ ವತಿಯಿಂದ ದಿನಾಂಕ 5.9.2021ರಂದು ನಾಗರಬಾವಿಯಲ್ಲಿನ ಪಾಪರೆಡ್ಡಿಪಾಳ್ಯದಲ್ಲಿರುವ ‘ಹಿಂದೂ ಧಾರ್ಮಿಕ ಭವನದ ಸಭಾಂಗಣ’ ದಲ್ಲಿ ಅತ್ಯಂತ ವರ್ಣರಂಜಿತವಾಗಿ ಐದು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮವು ಜರುಗಿತು.















ಡಾ| ಶ್ರೀಮತಿ ಎ. ರಮಾ ರಾಜಗೋಪಾಲ್‌ರವರ ಕಾರ್ಯಕ್ರಮ ನಿರೂಪಣೆಯಲ್ಲಿ, ಶ್ರೀಮತಿ ವಾಣಿ ಫಣಿಕುಮಾರ್‌ರವರ ಸುಮಧುರ ಕಂಠದಲ್ಲಿ ಗಣಪತಿಯ ಕೀರ್ತನೆಯ ಪ್ರಾರ್ಥನೆಯೊಂದಿಗೆ ಸುಂದರ ಸಂಜೆಯ ಸಭಾ ಕಾರ್ಯಕ್ರಮ ಪ್ರಾರಂಭವಾಯಿತು.

ಶ್ರೀ ಟಿ.ಎ.ಶ್ರೀನಿವಾಸರಾವ್‌ರವರು ಸಭೆಗೆ ಆಗಮಿಸಿದ್ದ ಸರ್ವರನ್ನು ಸ್ವಾಗತಿಸುತ್ತಾ, ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ವಿದ್ವಾಂಸರಾದ ಡಾ| ಎ.ಬಿ.ಶ್ಯಾಮಾಚಾರ್, ‘ಹರಿದಾಸ ತರಂಗ’ ಮಾಸಪತ್ರಿಕೆಯ ಸಂಪಾದಕರು, ದ್ವೆöÊತ ವೇದಾಂತ ಪರಿಷತ್, ಬೆಂಗಳೂರು, ಇದರ ಗೌರವ ಕಾರ್ಯದರ್ಶಿಗಳೂ ಆದ ಇವರನ್ನೂ, ಮತ್ತು ಭಾರತೀಯ ಹರಿದಾಸ ಸಾಹಿತ್ಯ ವಿದ್ಯಾಲಯ, ಬೆಂಗಳೂರು ಇದರ ಸಂಸ್ಥಾಪಕರೂ, ನಿರ್ದೇಶಕರೂ ಆದ ಡಾ| ಶ್ರೀ ಪರಶುರಾಮ್ ಬೆಟಗೇರಿ, ಇವರ ಧರ್ಮಪತ್ನಿ ಹಾಗೂ ಇದೇ ಸಂಸ್ಥೆಯ ಸಂಚಾಲಕರೂ ಆದ ಡಾ| ಶ್ರೀಮತಿ ಪರಿಮಳ ಬೆಟಗೇರಿ ಮತ್ತು ರಾಷ್ಟಿçಯ ಸ್ವಯಂ ಸೇವಕ ಸಂಘದ ಪ್ರತಿನಿಧಿಯಾದ ಶ್ರೀ ರವಿ ದೇಶಪಾಂಡೆ ಈ ನಾಲ್ವರು ಅತಿಥಿಗಳನ್ನು ಸಭೆಗೆ ಸುಸ್ವಾಗತಿಸಿ, ಅವರ ಪರಿಚಯ ಮಾಡಿಕೊಟ್ಟರು.

ಸಭೆಗೆ ಆಗಮಿಸಿದ್ದ ಮುಖ್ಯ ಅತಿಥಿಗಳು ಜ್ಯೋತಿ ಬೆಳಗುವುದರ ಮೂಲಕ ಸಭೆಗೆ ವಿದ್ಯುಕ್ತ ಚಾಲನೆ ನೀಡಿದರು.

ಸಭೆಯ ಪ್ರಾರಂಭದಲ್ಲಿ ಡಾ| ಶ್ರೀಮತಿ ಪರಿಮಳ ಬೆಟಗೇರಿಯವರ ಮಾರ್ಗದರ್ಶನದಲ್ಲಿ ಸಾಮೂಹಿಕ ಭಜನಾ ಕಾರ್ಯಕ್ರಮವು ನಡೆಯಿತು. ಸಭೆಗೆ ಆಗಮಿಸಿದ್ದ ಮಹಿಳೆಯರೆಲ್ಲರೂ ಈ ಭಜನೆಯಲ್ಲಿ ಅತ್ಯಂತ ಶ್ರದ್ಧಾ-ಭಕ್ತಿಯಿಂದ ಭಾಗವಹಿಸಿದ್ದರು.

ತರುವಾಯ ಡಾ| ಶ್ರೀ ಬಿ.ಎಸ್.ರಾಜಗೋಪಾಲ್ ರವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಕಾರ್ಯಕ್ರಮದ ಉದ್ದೇಶ. ಅದರ ಹಿನ್ನೆಲೆಯನ್ನು ಎಳೆಎಳೆಯಾಗಿ ಪ್ರಸ್ತಾಪಿಸಿದರು. ವೇದಿಕೆಯಲ್ಲಿ ಆಸೀನರಾಗಿದ್ದ ಮುಖ್ಯ ಅತಿಥಿಗಳ ಅಮೃತಹಸ್ತದಿಂದ ಈ ಕೆಳಕಂಡ 5 ಆಧ್ಯಾತ್ಮಿಕ ಕೃತಿಗಳನ್ನು ಲೋಕಾರ್ಪಣೆ ಮಾಡಿದರು.

1) ಕೃತಿ :- “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” - ಲೇಖಕರು : ಡಾ| ಶ್ರೀಮತಿ ಎ.ರಮಾ ರಾಜಗೋಪಾಲ್

ಲೋಕಾರ್ಪಣೆ ಮಾಡಿದ ಅತಿಥಿಗಳು :-

ಶ್ರೀಯುತ ಡಾ| ಶ್ರೀ ಬಿ.ಎಸ್. ರಾಜಗೋಪಾಲ್

ಲೋಕಾರ್ಪಣೆ ಮಾಡಿದ ಅತಿಥಿಗಳು

ಡಾ| ಶ್ರೀ ಪರಶುರಾಮ್ ಬೆಟಗೇರಿ

3) ಸಂಕಲ್ಪ ಭಾಗ - 2 ಮತ್ತು 4) ಹರಿಕಥಾಮೃತಸಾರ ಸಾರಾಂಶ (1 ರಿಂದ 16ನೇ ಸಂಧಿಯವರೆಗೆ)

ಸAಗ್ರಹ ಮತ್ತು ಸಂಪಾದಕರು

ಡಾ| ಶ್ರೀ ಬಿ.ಎಸ್.ರಾಜಗೋಪಾಲ್ 

ಲೋಕಾರ್ಪಣೆ ಮಾಡಿದ ಅತಿಥಿಗಳು

ಡಾ| ಪರಶುರಾಮ್ ಬೆಟಗೇರಿ ದಂಪತಿಗಳು

5) ಭಾರತೀಯ ಹರಿದಾಸ ಸಾಹಿತ್ಯ ವಿದ್ಯಾಲಯದ ಕೃತಿ :

“ಹರಿದಾಸ ಸಾಹಿತ್ಯ ಸ್ವರೂಪ ಹಾಗೂ ವೈಭವ’

ಲೇಖಕರು : ಡಾ| ಶ್ರೀ ಎ.ಬಿ.ಶ್ಯಾಮಾಚಾರ್ಯರು

ಈ ಎಲ್ಲ 5 ಕೃತಿಗಳೂ ಏಕಕಾಲದಲ್ಲಿ ‘ಹರಿದಾಸ ಬಂಧು’ ಗಳ ಸಮ್ಮುಖದಲ್ಲಿ ಲೋಕಾರ್ಪಣೆಗೊಂಡಿತು.

ಸಭೆಯ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದಂತಹ ಡಾ| ಶ್ರೀ ಎ.ಬಿ.ಶ್ಯಾಮಾಚಾರ್ಯರು ಮಾತನಾಡುತ್ತಾ, ಎರಡೂ ಸಂಶೋಧನ ಕೃತಿಗಳ ಹಿಂದೆ ಇರುವ ಶ್ರದ್ಧೆ-ಶ್ರಮ-ಗ್ರಂಥಗಳ ಅಧ್ಯಯನದ ಬಗ್ಗೆ ಅಡಕವಾಗಿರುವ ಮಹತ್ವ ಸಂಗತಿಗಳ ಕುರಿತು ಸಭೆಗೆ ತಿಳಿಸಿಕೊಟ್ಟರು.

ಭಾರತೀಯ ಹರಿದಾಸ ಸಾಹಿತ್ಯ ವಿದ್ಯಾಲಯದ ಸಂಸ್ಥಾಪಕರೂ ಹಾಗೂ ಸಂಸ್ಥೆಯ ನಿರ್ದೇಶಕರೂ ಆದ ಡಾ| ಶ್ರೀ ಪರಶುರಾಮ್ ಬೆಟಗೇರಿಯವರು ತಮ್ಮ ವಿದ್ಯಾಲಯವು ಕಳೆದ 25 ವರ್ಷಗಳಿಂದ ನಡೆದು ಬಂದ ದಾರಿಯನ್ನು ವಿವರಿಸುತ್ತಾ “ಕೆರೆಯ ನೀರನ್ನು ಕೆರೆಗೆ ಚೆಲ್ಲಿ” ಎಂಬAತೆ ಸೇವಾ ಮನೋಭಾವದಿಂದ ಹರಿದಾಸರ ಚರಿತ್ರೆಯನ್ನು ಮತ್ತು ‘ಹರಿದಾಸ ಸಾಹಿತ್ಯ’ ವನ್ನು ಮನೆ-ಮನೆಗೆ ತಲುಪಿಸುತ್ತಿರುವ ರೀತಿಯನ್ನು ವಿವರಿಸಿದರು. ಅಲ್ಲದೆ ಜ್ಞಾನ ಭಾರತಿ ಘಟಕದವರ ಶ್ರದ್ಧೆ-ಆಸಕ್ತಿಯನ್ನು ಶ್ಲಾಘಿಸಿದರು. ಇದೊಂದು ಅಭೂತಪೂರ್ವ ಘಟನೆಗೆ ಸಾಕ್ಷಿ ಎಂದು ತಿಳಿಸಿದರು. ಡಾ| ಶ್ರೀಮತಿ ಪರಶುರಾಮ್ ಬೆಟಗೇರಿಯವರು ಹಾಡನ್ನು ಹೇಳುತ್ತಾ ಸಭಿಕರನ್ನು ಆಕರ್ಷಿಸಿದರು.

ಕಾರ್ಯಕ್ರಮದ ಮುಖ್ಯ ಅಂಗವಾಗಿ ‘ಹರಿಕಥಾಮೃತಸಾರ’ ಮತ್ತು ‘ಭಾಗವತ’ ಪರೀಕ್ಷೆಗಳನ್ನು ಅತ್ಯಂತ ಯಶಸ್ವಿಯಾಗಿ ಬರೆದು 

ತೇರ್ಗಡೆಯಾಗಿದ್ದ ಒಟ್ಟು 13 ವಿದ್ಯಾರ್ಥಿಗಳಿಗೆ ವಿದ್ಯಾಲಯದವತಿಯಿಂದ ಅವರೆಲ್ಲರನ್ನು ಸತ್ಕರಿಸಿ ‘ತೇರ್ಗಡೆ ಪ್ರಮಾಣ ಪತ್ರ’ ವನ್ನು ನೀಡಲಾಯಿತು.

ಶಿಕ್ಷಕ ದಿನಾಚರಣೆಯ ಅಂಗವಾಗಿ ವಿದ್ಯಾಲಯದ ಸ್ವಯಂಸೇವಕರಾದ ಡಾ| ಶೀ ಬಿ.ಎಸ್.ರಾಜಗೋಪಾಲ್ ಮತ್ತು ಡಾ| ಶ್ರೀಮತಿ ರಮಾ ರಾಜಗೋಪಾಲ್‌ರವನ್ನು ವಿದ್ಯಾಲಯವತಿಯಿಂದ ಸಂದರ್ಭೋಚಿತವಾಗಿ ಮತ್ತು ಅರ್ಥಪೂರ್ಣವಾಗಿ ಸನ್ಮಾನಿಸಲಾಯಿತು.

ಶ್ರೀಮತಿ ಲಕ್ಷಿ. ಎನ್. ರಾವ್‌ರವರು ಸಭೆಗೆ ಆಗಮಿಸಿದ್ದ ಸರ್ವರನ್ನೂ ಕ್ರಮಬದ್ಧವಾಗಿ ವಂದಿಸಿದರು.

ಸುಮಾರು 3 ಗಂಟೆಗಳ ಕಾಲ ನಡೆದ ಈ ಆಧ್ಯಾತ್ಮಿಕ ಸಮಾರಂಭವು ಅತ್ಯಂತ ವ್ಯವಸ್ಥಿತವಾಗಿ ಕ್ರಮಬದ್ಧವಾಗಿ ಶಿಸ್ತುಬದ್ಧವಾಗಿ ನಡೆದಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.


Post a Comment

0 Comments

Ad Code

Responsive Advertisement