ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ವಿದ್ಯಾರ್ಥಿಗಳಿಂದ ಹಾಗೂ ಸಿಬ್ಬಂದಿಗಳಿAದ ಸ್ವಚ್ಚತಾ ಕಾರ್ಯಕ್ರಮ
ಬಳ್ಳಾರಿ ಸೆ 03. ನಗರದ ಪ್ರತಿಷ್ಠಿತ "ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ "ಸ್ವಚ್ಛ ಭಾರತ ಅಭಿಯಾನ " ದಡಿಯಲ್ಲಿ ವಿದ್ಯಾರ್ಥಿಗಳಿಂದ ಹಾಗೂ ಸಿಬ್ಬಂದಿಗಳಿAದ ಸ್ವಚ್ಚತಾ ಕಾರ್ಯಕ್ರಮವು ಬೆಳಿಗ್ಗೆ 10.00 ಗಂಟೆಗೆÀ ಪ್ರಾರಂಭವಾಯಿತು.
ಸ್ವಚ್ಚ ಭಾರತ್ ಮಿಷನ್ ಬಳ್ಳಾರಿ ಜಿಲ್ಲಾಪಂಚಾಯತ್ ನೋಡಲ್-ಆಫೀಸರ್ ಡಿ.ಜಾನಕೀರಾಮ್, ಹಾಗೂ ನಮ್ಮ ಕಾಲೇಜಿನ ಪ್ರಾಂಶುಪಾಲರು ಡಾ|| ಟಿ. ಹನುಮಂತರೆಡ್ಡಿ, ಆರ್.ವೈ.ಎಂ.ಈ.ಸಿ-ಸ್ವಚ್ಛ ಭಾರತ ಅಭಿಯಾನ ಸೆಲ್‌ನ ಮುಖ್ಯ ಸಂಯೋಜರು-ಶ್ರೀಮತಿ ಅನುಸೂಯಪಾಟೀಲ್ ಮತ್ತು ಸಂತೋಷ್, ಸದಸ್ಯರು- ಶ್ರೀಮತಿ ವಾಣಿ.ಹೆಚ್, ಶ್ರೀಮತಿ ವಿನುತಾಪ್ರಶಾಂತ್, ಶ್ರೀ ಸುದರ್ಶನ್, ಶ್ರೀಮಹೇಂದ್ರ ಕೆ.ಸಿ, ಶ್ರೀಶಿವಪ್ರಸಾದ್, ಶ್ರೀನವೀನ್, ಬಳ್ಳಾರಿ ಜಿಲ್ಲಾಪಂಚಾಯತ್ ಆಫೀಸರ್‌ಗಳು ಮಹಾಂತೇಷ್, ಮರಿಸ್ವಾಮಿ, ಕಿರಣ್ , ಅಲ್ಲದೇ ಎಲ್ಲಾ ವಿಭಾಗದ ಮುಖ್ಯಸ್ಥರುಗಳು ವಿದ್ಯಾರ್ಥಿವೃಂದದವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಎಲ್ಲಾ ವಿದ್ಯಾರ್ಥಿಗಳು ಅತೀ ಉತ್ಸಾಹಕರಾಗಿ ಪಾಲ್ಗೊಂಡರು. ಈ ಒಂದು ಸ್ವಚ್ಛತಾ ಅಭಿಯಾನದಿಂದ ಮಹಾವಿದ್ಯಾಲಯದ ಸುತ್ತ ಮುತ್ತಲಿನ ಸ್ಥಳಗಳು ಸುಂದರವಾಗಿ ಮಾರ್ಪಟ್ಟವು.
ಇದೇ ಸಂದರ್ಭದಲ್ಲಿ ಪ್ರಾಂಶುಪಾಲರಾದ ಡಾ|| ಟಿ. ಹನುಮಂತರೆಡ್ಡಿ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, “ಮಹಾತ್ಮ ಗಾಂಧಿಜೀಯವರ ಹಾಗೂ ಪ್ರಧಾನ ಮಂತ್ರಿಗಳ ಕನಸು ನನಸಾಗಿ ಸಾಕಾರಗೊಳ್ಳುವುದರಲ್ಲಿ ಸಂದೇಹವಿಲ್ಲ. ನಮ್ಮ ನಮ್ಮ ಸುತ್ತಲಿನ ಸ್ವಚ್ಛತೆಯನ್ನು ನಾವು ಕಾಪಾಡಿಕೊಂಡಲ್ಲಿ ಇಡೀ ಭಾರತವು, ಅಭಿವೃಧ್ಧಿ ಹೊಂದಿದ ಅನ್ಯ ವಿದೇಶಿ ದೇಶಗಳಿಗಿಂತ ಕಡಿಮೆ ಇಲ್ಲದಂತಾಗುತ್ತದೆ ಎಂದರು. ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟು ಕೊಂಡಲ್ಲಿ ನೋಡಲು ಚಂದ ಅಲ್ಲದೇ ಅನೇಕ ಸಾಂಕ್ರಮಿಕ ರೋಗಗಳಿಂದ ಮುಕ್ತರಾಗಿರುತ್ತೇವೆಂದರು. ಈ ಸ್ವಚ್ಛತಾ ಅಭಿಯಾನವು ಇಂದಿಗೆ ಮಾತ್ರ ಸೀಮಿತವಾಗಿರದೇ ಮುಂದಿನ ತಲತಲಾಂತರ ಪೀಳಿಗೆಗಳಲ್ಲಿ ಈ ಒಂದು ಮನೋಭಾವನೆ ಮೂಡಬೇಕು. ಆಗ ನಮ್ಮ ದೇಶವು ಯಾವುದೇ ರೋಗಗಳಿಂದ ಮುಕ್ತವಾಗುವಲ್ಲಿ ಖಂಡಿತವೆ0ದರು”.
ಸ್ವಚ್ಚ ಭಾರತ್ ಮಿಷನ್ ಬಳ್ಳಾರಿ ಜಿಲ್ಲಾಪಂಚಾಯತ್ ನೋಡಲ್-ಆಫೀಸರ್ ಡಿ.ಜಾನಕೀರಾಮ್, ಮಾತನಾಡುತ್ತಾ, “2018ಸಾಲಿನಿಂದ ಪ್ರತಿಯೊಂದು ಮನೆಯಲ್ಲಿ ಸೌಚಾಲಯ,ಕರ್ನಾಟಕ ರಾಜ್ಯಾದ್ಯಂತ ಪ್ರತಿಯೊಂದು ಗ್ರಾಮೀಣದಲ್ಲಿ,ಅಂಗನವಾಡಿ,ಶಾಲ ಮಕ್ಕಳಿಗೆ ಮೊದಲನೆಯ,ಎರಡನೇಯ ಹಂತಗಳಲ್ಲಿ, ಸೌಚಾಲಯಗಳು ಎರ್ಪಾಟು ಮಾಡಲಾಯಿತು, ಫೇಜ್-1 ನಲ್ಲಿ 200, ಫೇಜ್-2 ನಲ್ಲಿ 216 ಗ್ರಾಮಪಂಚಾಯಿತಿಗಳಲ್ಲಿ ನರೇಗಾ ಮುಖಾಂತರ, 76 ಸ್ವಚ್ಚಸಂಕೀರ್ಣಗಳು ಶಾಲ, ಶಾಲ ವಸತಿ ಸ್ಥಳಗಳಲ್ಲಿ ಮಾಡಲಾಯಿತು, ಅಲ್ಲದೇ ಪ್ರಭಂದ ಸ್ಪರ್ಧೆ,ಬೀದಿನಾಟಕಗಳು ಮುಂತಾದುವುರ ಮೂಲಕ ಗ್ರಾಮೀಣಭಾಗಗಳಲ್ಲಿ ಅರಿವುಮೂಡಿಸಲಾಯಿತು..”ಎಂದು ವಿವರಿಸಿದರು.
ಕಾಲೇಜಿನ ಅಧ್ಯಕ್ಷರಾದ ಅಲ್ಲಂ ಚನ್ನಪ್ಪ ಇವರು ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರೆಲ್ಲರಿಗೂ ಅಭಿನಂದಿಸಿದರು. ವೀ.ವಿ.ಸಂಘದ ಅಧ್ಯಕ್ಷರಾದ ಗುರುಸಿದ್ದಸ್ವಾಮಿ, ಉಪಾಧ್ಯಕ್ಷರಾದ ಅಲ್ಲಂ ಚನ್ನಪ್ಪ, ಕಾರ್ಯದರ್ಶಿ ಬಿ.ವಿ. ಬಸವರಾಜ್, ಸಹಕಾರ್ಯದರ್ಶಿ ಜೆ. ಶಾಂತವೀರನ ಗೌಡರು, ಕೋಶಾಧಿಕಾರಿ ಗೋನಾಳ್ ರಾಜಶೇಖರ್ ಗೌಡರು. ಮತ್ತು ಮಹಾವಿದ್ಯಾಲಯದ ಅಧ್ಯಕ್ಷರಾದ ಅಲ್ಲಂ ಚನ್ನಪ್ಪ, ಉಪಪ್ರಾಂಶುಪಾಲರಾದ ಡಾ|| ಸವಿತಾ ಸೊನೋಳಿ, ಡೀನ್-ಅಕಾಡಮಿಕ್ ಡಾ|| ಹೆಚ್.ಗಿರೀಶ , ಡೀನ್-ಪರೀಕ್ಷಾ ಡಾ|| ಬಿ.ಶ್ರೀಪತಿ , ಶುಭಹಾರೈಸಿದರು.


0 Comments