Ticker

6/recent/ticker-posts

Ad Code

Responsive Advertisement

ಲಾಕ್ ಡೌನ್ ಪರಿಹಾರ ಧನ ಸಮಸ್ಯೆ ಪರಿಹಾರಕ್ಕಾಗಿ ಆಗ್ರಹಿಸಿ ಪ್ರತಿಭಟನೆ

ಬಳ್ಳಾರಿ ಸೆ 03. ಕಾರ್ಮಿಕ ಇಲಾಖೆ ಮುಂದೆ ಪ್ರತಿಭಟನೆ ನಡೆಸಿ ಕಾರ್ಮಿಕ ಅಧಿಕಾರಿಗಳ ಮೂಲಕ ಮಾನ್ಯ ಕಾರ್ಮಿಕ ಸಚಿವರಿಗೆ ಮನವಿ ಪತ್ರ ಸಲ್ಲಿಸಲಾಯಿತು.ನಂತರ ಪ್ರತಿಭಟನೆ ಉದ್ದೇಶಿಸಿ ರಾಜ್ಯ ಅಧ್ಯಕ್ಷರಾದ ಕೆ.ಸೋಮಶೇಖರ್ ರವರು ಮಾತಾನಾಡುತ್ತಾ ಕೊರೋನಾ ಮಹಾಮಾರಿಯನ್ನು ಹೋಗಲಾಡಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಲಾಕಡೌನ್ ಜಾರಿಯಿಂದಾಗಿ ಹೆಚ್ಚು ಬಾಧೆಗೆ ಒಳಗಾಗಿರುವವರು ಕಟ್ಟಡ ಕಾರ್ಮಿಕರು. ಕೆಲಸಕ್ಕೆ ಒಂದೇ ನೆಲೆಯೆನ್ನದೇ ಅಲೆಮಾರಿಗಳಾಗಿ,ವಲಸೆ ಕಾರ್ಮಿಕರಾಗಿರುವ ಇವರು ಬದುಕಿನ ಪರಿಸ್ಥಿತಿ ಬಿಗಡಾಯಿಸುತ್ತಲೇ ಇದೇ. ಲಾಕಡೌನ್ ಅವಧಿಯ ನಂತರದಿAದ ಇವತ್ತಿನವರೆಗೂ ಕಾರ್ಮಿಕರು, ಜನಸಾಮನ್ಯರು ಮತ್ತೆ ಸಹಜ ಸ್ಥಿತಿಗೆ ಮರಳುವುದಕ್ಕೆ ಕಷ್ಟಪಡುತ್ತಿದ್ದಾರೆ. ಇಂದಿನ ಬೆಲೆಯೇರಿಕೆಯ ದಿನಗಳಲ್ಲಿ ಜೀವನ ನಡೆಸುವುದು ದುರ್ಬರವಾಗುತ್ತಿದೆ. 

ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯು ಕಳೆದ ಮೊದಲನೆಯ ಅಲೆಯಲ್ಲಿ ಘೋಷಣೆ ಮಾಡಿದ 5000 ರೂ ಬಹುತೆಕ ಕಾರ್ಮಿಕರಿಗೆ ತಲುಪಿಲ್ಲಾ ಮತ್ತೆ ಎರಡನೇಯ ಬಾರಿ ಲಾಕಡೌನ ಹಿನ್ನಲೆಯ ನಂತರ ರಾಜ್ಯ ಸರ್ಕಾರವು ಮತ್ತೆ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ರೂ. 3000 ಪರಿಹಾರಧನ ಎಂದು ಘೋಷಣೆ ಮಾಡಿದ್ದು ಅಲ್ಪ ಮಟ್ಟಿಗೆ ಕಾರ್ಮಿಕರಿಗೆ ಸಹಕಾರಿಯಾಗಿದೆ.ಆದರೆ ದುರಂತವೆAದರೆ ಕಳೆದ ಬಾರಿ ಸಮಾರು ಒಂದು ಲಕ್ಷ ಕಾರ್ಮಿಕರಿಗೆ ಸಿಗಲೇಯಿಲ್ಲ. ಇದೀಗ 2ನೇ ಬಾರಿ ಘೋಷಿಸಿದ ಹಣ ದೊರೆಯದ ಕಟ್ಟಡ ಕಾರ್ಮಿಕರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಈ ಹಣ ಬೌನ್ಸ್ ಆದವರ ಪಟ್ಟಿಯನ್ನು ಮಂಡಳಿಯು ಅಂತರ್ಜಾಲದಲ್ಲಿ ಬಿಟ್ಟಿದ್ದು,ಅದರಲ್ಲೂ ಕೂಡ ದೊಡ್ಡ ಸಂಖ್ಯೆಯ ಕಾರ್ಮಿಕರ ಹೆಸರುಗಳೇ ಬಿಟ್ಟು ಹೋಗಿವೆ. ಆದ್ದರಿಂದ ನೋಂದಾಯಿತ ಕಾರ್ಮಿಕರಿಗೆ ಸರ್ಕಾರದ ಪರಿಹಾರದ ಘೋಷಣೆಯ ಪ್ರತಿಫಲ ಖಾತ್ರಿಯಾಗಲು ತೀವ್ರತರ ಕ್ರಮಗಳ ಅವಶ್ಯಕತೆಯಿದೆ.ನಮ್ಮ ರಾಜ್ಯದಲ್ಲಿ ಈ ಕಲ್ಯಾಣ ಮಂಡಳಿಗೆ ಸೆಸ್ ಮೂಲಕ ಸಂಗ್ರಹವಾದ ಹಣ ಒಂಬತ್ತು ಸಾವಿರ ಕೋಟಿಗೂ ಹೆಚ್ಚು ಜೊತೆಗೆ ಪ್ರತಿ ವರ್ಷವು ಮಂಡಳಿಗೆ ಬಡ್ಡಿ ಮೂಲಕ ಸಂಗ್ರಹವಾಗುವ ಹಣ 500ಕೋಟಿಗೂ ಹೆಚ್ಚು, ಆದರೆ ಉದ್ದೇಶಿತ ಸೌಲಭ್ಯಗಳನ್ನು ಪಡೆದುಕೊಳ್ಳಲು ಕಾರ್ಮಿಕರು ಹರಸಾಹಸ ಪಡುವ ಪರಿಸ್ಥಿತಿ ಇದೆ. ಸರಿಯಾದ ಸಮಯಕ್ಕೆ ಹಣ ದೊರಕದಿರುವುದು, ಕಾರ್ಮಿಕರಿಗೆ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಂದಾಜಿನ ಪ್ರಕಾರ ಕಾರ್ಮಿಕರ ಕಲ್ಯಾಣಕ್ಕಾಗಿ ಮಾಡಿದ ಖರ್ಚು ತುಂಬಾನೆ ಕಡಿಮೆ. ಆದರೆ ಕಲ್ಯಾಣ ಮಂಡಳಿಯ ಅಧಿಕಾರಿಗಳ ವೇತನ, ಇತರೆ ಭತ್ಯೆ, ಕಛೇರಿ ವೆಚ್ಚ, ಸಾಫ್ಟ್ವೇರ್ ಅಭಿವೃದ್ಧಿಪಡಿಸುವ ಹೆಸರಿನಲ್ಲಿ ಖರ್ಚಾಗುತ್ತಿರುವ ಹಣ ಹೆಚ್ಚಾಗುತ್ತಿದೆ.

ಅಷ್ಟೇ ಅಲ್ಲದೇ ಕಟ್ಟಡ ಕಾರ್ಮಿಕರಿಗೆ ಲಸಿಕೆ ನೀಡಲು ಮಂಡಳಿಯಿAದ, ಖಾಸಗಿ ಆಸ್ಪತ್ರೆಗಳಿಗೆ ಪ್ರತಿ ಲಸಿಕೆ ರೂ 780. ರಂತೆ 40 ಲಕ್ಷ ಕಾರ್ಮಿಕರಿಗೆ 312 ಕೋಟಿ ಧಾರೆ ಎರೆಯಲು ನಿರ್ಧರಿಸಲಾಗಿದೆ, ಎಂಬ ವಿಷಯ ಇದೀಗ ಗಮನಕ್ಕೆ ಬಂದಿದೆ. ಇದು ಸೆಪ್ಟೆಂಬರ್ 2 ರಿಂದ ಆರಂಭಗೊಳ್ಳಲಿದೆ ಎಂದು ಮಂಡಳಿಯು ಘೋಷಿಸಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟದೆ. ಈಗಾಗಲೇ ಎಲ್ಲೆಡೆ ಸಾರ್ವರ್ತಿಕ ಲಸಿಕಾ ಅಭಿಯಾನ ನಡೆಯುತ್ತಿದ್ದು, ಖಾಸಗೀಯವರಿಗೆ ಲಾಭ ಮಾಡಿಕೊಡಲು ಮಂಡಳಿಯು ಮುಂದಾಗಿದೆಯೇAಬ ಅನುಮಾನಗಳು ಮೂಡುತ್ತಿವೆ. ಖಾಸಗಿ ಆಸ್ಪತ್ರೆಗಳಿಗೆ ಕಲ್ಯಾಣ ಮಂಡಳಿ ಹಣವೇಕೆ?ಎಂಬ ಪ್ರಶ್ನೆ ಕಾಡುತ್ತಿದೆ.ಈ ರೀತಿಯಾಗಿ ಹಲವಾರು ಬಾರಿ, ಮಂಡಳಿಯಲ್ಲಿರುವ ಕಾರ್ಮಿಕರ ಹಣವನ್ನು ಮಂಡಳಿಯು ಇತರೆ ಕಾರ್ಯಕ್ರಮಗಳಿಗೆ ಮತ್ತು ಕಾರ್ಮಿಕರ ಹೆಸರಿನಲ್ಲಿ ಕಟ್ಟಡ ನಿರ್ಮಾಣಗಳಿಗೆ ಬಳಸಲು ಪ್ರಯತ್ನಗಳು ನಡೆದಿದ್ದು, ನಮ್ಮ ಕೇಂದ್ರ ಕಾರ್ಮಿಕ ಸಂಘಟನೆ ಂIUಖಿUಅ ಸೇರಿದಂತೆ ಇತರೆ ಕಾರ್ಮಿಕ ಸಂಘಟನೆಗಳ ವ್ಯಾಪಕ ವಿರೋಧದಿಂದ ಇಂತಹ ಕೃತ್ಯಗಳನ್ನು ತಡೆಗಟ್ಟಲಾಗಿದೆ. ಮಂಡಳಿಯಲ್ಲಿರುವ ಹಣವು ಕಾರ್ಮಿಕರದ್ದೇ ವಿನಃ ಸರ್ಕಾರದಲ್ಲ. ಅದನ್ನು ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿಯೇ ಬಳಸುವುದನ್ನು ಖಾತ್ರಿಪಡಿಸಬೇಕಾಗಿದೆ ಎಂದು ಹೇಳಿದರು.

ನಂತರ ಪ್ರತಿಭಟನೆ ಉದ್ದೇಶಿಸಿ ರಾಜ್ಯ ಉಪಾಧ್ಯಕ್ಷರಾದ ಎ.ದೇವದಾಸ್ ರವರು ಮಾತಾನಾಡುತ್ತಾ ಕಳೆದ ವರ್ಷ ಘೋಷಿಸಲಾದ ಕೋವಿಡ್ ರೂ. 5000 ಮತ್ತು ಈ ಬಾರಿಯ 3000ರೂ ಪರಿಹಾರ ಹಣ ಬಾರದೇಯಿರುವ ಕಟ್ಟಡ ಕಾರ್ಮಿಕರಿಗೆ ಕೂಡಲೇ ಹಣ ವರ್ಗಾವಣೆ ಮಾಡಬೇಕು. ಕೋವಿಡ್-19ರ ಸೋಂಕಿನಿAದ ಮೃತಪಟ್ಟ ಕಟ್ಟಡ ಕಾರ್ಮಿಕನÀ ಕುಟುಂಬದ ಸದಸ್ಯರಿಗೆ ಕನಿಷ್ಟ 10 ಲಕ್ಷ ರೂ.ಗಳ ವಿಶೇಷ ಪರಿಹಾರ ಧನವನ್ನು ಪ್ರಕಟಿಸಬೇಕು. ಕೋವಿಡ್ ಸೋಂಕಿಗೊಳಗಾಗಿ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುವ ಕಟ್ಟಡ ಕಾರ್ಮಿಕರ ಮತ್ತು ಅವರ ಕುಟುಂಬದ ಸದಸ್ಯರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಮಂಡಳಿಯೇ ಭರಿಸಬೇಕು ಮತ್ತು ಅಸಂಘಟಿತ ಗೃಹ ಕಾರ್ಮಿಕರಿಗೆ ಮತ್ತು ಹಮಾಲರಿಗೆ ಲಾಕ್ ಡೌನ್ ಪರಿಹಾರ ಧನ 2,000ರೂ. ಕೂಡಲೇ ಪಾವತಿಸಬೇಕು. ಈ ಹಿನ್ನೆಲೆಯಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಯಾದ ಂIUಖಿUಅಗೆ ಸಂಯೋಜಿತವಾಗಿರುವ “ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘ(ರಿ)” ವು ನಿರಂತರವಾಗಿ ಕಟ್ಟಡ ಕಾರ್ಮಿಕರನ್ನು ಸಂಘಟಿಸುತ್ತಿದ್ದು,  ದಿನಾಂಕ 03-09-2021ರ ಶುಕ್ರವಾರ ರಾಜ್ಯವ್ಯಾಪಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವ ಮೂಲಕ ಈ ಕೆಳಗಿನ ಬೇಡಿಕೆಗಳನ್ನು  ತುರ್ತಾಗಿ ಈಡೇರಿಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಯರಾಜ್, ನೀಲಪ್ಪ, ವಿಜಯ್ ಕುಮಾರ್, ಚಂದ್ರಶೇಖರ್, ಶೇಖರ್, ಜಯಂತಿ, ರವಿಕುಮಾರ್ ಇನ್ನಿತರರು ಭಾಗವಹಿಸಿದ್ದರು.


Post a Comment

0 Comments

Ad Code

Responsive Advertisement