ಬಳ್ಳಾರಿ ಮಹಾನಗರ ಪಾಲಿಕೆಯು 2021-22ನೇ ಸಾಲಿನ ತೆರಿಗೆ ವಿಷಯದಲ್ಲಿ ಬಳ್ಳಾರಿ ನಿವಾಸಿಗಳಿಗೆ ಅನ್ಯಾಯವಾಗುತ್ತಿದೆ-ಮೇಕಲ ಈಶ್ವರರೆಡ್ಡಿ
ಬಳ್ಳಾರಿ ಸೆ 03.ಕೇಂದ್ರ ಸರ್ಕಾರದ ಆದೇಶದಂತೆ ಎಲ್ಲಾ ರಾಜ್ಯ ಸರ್ಕಾರಗಳು ಅದರಲ್ಲಿ ನಮ್ಮ ಕರ್ನಾಟಕ ರಾಜ್ಯ ಸರ್ಕಾರವು ಆಸ್ತಿ ತೆರಿಗೆ ವಿಷಯದಲ್ಲಿ ತೆರಿಗೆ ಧರಗಳನ್ನು ಮರುನಿರ್ಧರಿಸಬೇಕೆಂದು ದಿನಾಂಕ: 19.02.2021ರ ಸರ್ಕಾರಿ ಆದೇಶ ಸಂಖ್ಯೆ: 292724 DMA/DEV/Tax/3/2020 ಈ ಆದೇಶವು ನಗರಸಭೆ, ಪುರಸಭೆ ಮತ್ತು ಮಹಾನಗರ ಪಾಲಿಕೆಗಳಿಗೆ ಅನ್ವಯಿಸುವಂತೆ ಜಾರಿಗೊಳಿಸಿದೆ. ಅದರಲ್ಲಿ ನಮ್ಮ ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಸರ್ಕಾರದ ಆದೇಶಗಳನ್ನು ಪಾಲನೆ ಮಾಡದೇ ಸಾರ್ವಜನಿಕರಿಗೆ ಅನ್ಯಾಯವಾಗುತ್ತಿದೆ.
ನಮ್ಮ ಬಳ್ಳಾರಿ ಮಹಾನಗರ ಪಾಲಿಕೆಯು ರಾಜ್ಯ ಸರ್ಕಾರದ ಆದೇಶದಂತೆ ನಾವು ಪಾಲನೆ ಮಾಡುತ್ತೇವೆಂದು ದಿನಾಂಕ: 08.03.2021 ರಂದು ಮಹಾನಗರ ಪಾಲಿಕೆ ಆಯುಕ್ತರು, ಬಳ್ಳಾರಿ, ಮಾನ್ಯ ಜಿಲ್ಲಾಧಿಕಾರಿಗಳು, ಬಳ್ಳಾರಿ ಮತ್ತು ಆಡಳಿತ ಅಧಿಕಾರಿಗಳು ಬಳ್ಳಾರಿ ಇವರ ಅಧ್ಯಕ್ಷತೆಯಲ್ಲಿ ತೀರ್ಮಾನ ಕೈಗೊಂಡು ಸರ್ಕಾರಕ್ಕೆ ಪ್ರತ್ಯುತ್ತರವನ್ನು ಬರೆದರು.ಪ್ರತ್ಯುತ್ತರದಲ್ಲಿ ಬರೆದ ಅಂಶಗಳೇನೆAದರೆ, ಖಾಲಿಸ್ಥಳಗಳಿಗೆ, ನಿವಾಸಿ ಕಟ್ಟಡಗಳಿಗೆ, ವಾಣಿಜ್ಯ ಕಟ್ಟಡಗಳಿಗೆ ಮತ್ತು ಕೈಗಾರಿಕಾ ಕಟ್ಟಡಗಳಿಗೆ ಮೌಲ್ಯವನ್ನು ಕರ್ನಾಟಕ ಸ್ಟಾö್ಯಂಪ್‌ಗಳ ಅಧಿನಿಯಮ 1957 ಸೆಕ್ಷನ್ 45ಬಿ ಕರ್ನಾಟಕ ಸ್ಟಾö್ಯಂಪ್ ಆಕ್ಟ್ ಪ್ರಕಟಿಸಲಾದ ಚಾಲ್ತಿ ಸಾಲಿನ ಮಾರ್ಗಸೂಚಿ ಧರಗಳನ್ವಯ ರಸ್ತೆಗಳ ಪ್ರಕಾರ ಆಸ್ತಿ ತೆರಿಗೆ ಧರಗಳನ್ನು ನಿಗಧಿಪಡಿಸುವುದು 2021-22ನೇ ಸಾಲಿನ ಹೊಸ ನಿಯಮವಾಗಿರುತ್ತದೆ.ಬಳ್ಳಾರಿ ಉಪನೋಂದಣಾಧಿಕಾರಿಗಳ ಕಛೇರಿಯಲ್ಲಿ ಆಸ್ತಿಯ ಮೌಲ್ಯದ ಬಗ್ಗೆ ಮುದ್ರಣ ಮಾಡಿರುವ ಪ್ರತಿಯನ್ನು ಪಾಲಿಕೆಯವರು ನೋಂದಣಿ ಕಛೇರಿಯಿಂದ ಆಸ್ತಿ ಧರಗಳನ್ನು ಪಡೆಯದೆ, ಸ್ವತಃ ತಾವೇ ಒಂದು ಆಸ್ತಿಯ ಮೌಲ್ಯದ ಪುಸ್ತಕ ಮುದ್ರಣ ಮಾಡಿ ಆಸ್ತಿ ಮೌಲ್ಯಕ್ಕಿಂತ ಎರಡರಷ್ಟು ಮೌಲ್ಯವನ್ನು ನಿಗಧಿಪಡಿಸಿ ತೆರಿಗೆಯನ್ನು ಸಾರ್ವಜನಿಕರಿಂದ ಸಂಗ್ರಹಿಸುತ್ತಿದ್ದಾರೆ. ಈ ವಿಷಯದ ಬಗ್ಗೆ ಸ್ಪಷ್ಟೀಕರಣ ನೀಡಬೇಕಾಗಿದೆ.ಮಹಾನಗರ ಪಾಲಿಕೆಯಲ್ಲಿ ಸಾರ್ವಜನಿಕರಿಗಾಗಿ ಬಳಸುತ್ತಿರುವ software ಅದರ ಹೆಸರು Property Tax Calculator ಇದರಲ್ಲಿ ತಪ್ಪು ಮಾಹಿತಿಯನ್ನು ಕೊಟ್ಟು ಸೆಕ್ಷನ್ 109 ಕರ್ನಾಟಕ ಮುನಿಸಿಪಲ್ ಕೌನ್ಸಲಿಂಗ್ ಆಕ್ಟ್ನಲ್ಲಿ ಇದ್ದಂತ ಬೆಲೆಗೆ ಎರಡು ಪಟ್ಟುರಷ್ಟು ಮಹಾನಗರ ಪಾಲಿಕೆಯಲ್ಲಿ ತೋರಿಸುತ್ತಾ ಬಳ್ಳಾರಿ ನಗರದ ಆಸ್ತಿಯ ಮಾಲೀಕರಿಂದ ತೆರಿಗೆ ಹಣ ಹೆಚ್ಚಿಗೆ ವಸೂಲು ಮಾಡುತ್ತಿರುವುದರಿಂದ ನಾಗರೀಕರಿಗೆ ಅನ್ಯಾಯವಾಗುತ್ತಿರುವ ಬಗ್ಗೆ ಕೂಡ ಸ್ಪಷ್ಟೀಕರಣ ನೀಡಬೇಕು.
ಆಸ್ತಿ ತೆರಿಗೆ ವಿಷಯದ ಬಗ್ಗೆ ಬಳ್ಳಾರಿಗೆ ಸಂಬ0ಧಪಟ್ಟ ಆಡಳಿತ ನಾಯಕರು, ವಿರೋಧ ಪಕ್ಷ ನಾಯಕರು, ಸಂಘ-ಸAಸ್ಥೆಗಳು, ಮೇಧಾವಿಗಳು, ಕಾನೂನು ಸಲಹೆಗಾರರು ಇವರೆಲ್ಲರೂ ಒಂದು ಸಭೆಯನ್ನು ಕರೆದು ಎಲ್ಲರ ಮುಂದೆ ಸಂಶಯಗಳನ್ನು ಸ್ಪಷ್ಟಪಡಿಸುವ ಜವಾಬ್ದಾರಿ ಮಹಾನಗರ ಪಾಲಿಕೆಯವರದ್ದಾಗಿದೆ ಎಂದರು.
ಕೇAದ್ರ ಮತ್ತು ರಾಜ್ಯ ಸರ್ಕಾರದ ಆದೇಶದಂತೆ ಸೆಕ್ಷನ್ 45ಬಿ ಕರ್ನಾಟಕ ಸ್ಟಾö್ಯಂಪ್ ಆಕ್ಟ್ ಪ್ರಕಾರ ನಿರ್ಧಿಷ್ಟ ಧರವನ್ನು ನಿಗಧಿಪಡಿಸಿದರೆ ಜೀವನಪರ್ಯಂತ ಅದೇ ಧರ ಇರುತ್ತದೆ. ಇಲ್ಲದಿದ್ದಲ್ಲಿ ಮಹಾನಗರ ಪಾಲಿಕೆ ಇಷ್ಟಬಂದAತೆ ಧರ ನಿಗಧಿಪಡಿಸಿದರೆ ಅದೇ ಧರವನ್ನು ನಾವು ಜೀವನ ಪರ್ಯಂತ ಪಾವತಿಸಬೇಕಾಗಿದೆ. ಈ ಮೇಲಿನ ಎಲ್ಲಾ ಸಂದೇಹಗಳೆಲ್ಲಾ ಸ್ಪಷ್ಟೀಕರಣ ನೀಡುವುದು ಮಹಾನಗರ ಪಾಲಿಕೆ ಮುಖ್ಯ ಕರ್ತವ್ಯವಾಗಿದೆ. ಈ ವಿಷಯದ ಆದಷ್ಟು ಶೀಘ್ರದಲ್ಲಿ ಸಂಬAಧಪಟ್ಟ ಅಧಿಕಾರಿಗಳಿಂದ ಸಭೆ ನಡೆಸಿ, ಆಸ್ತಿ ತೆರಿಗೆ ವಿಷಯವಾಗಿ ಬಳ್ಳಾರಿ ನಾಗರೀಕರಿಗೆ ಸೂಕ್ತ ನ್ಯಾಯ ಒದಗಿಸಿಕೊಡಬೇಕೆಂದು ಈ ಮೂಲಕ ಬಳ್ಳಾರಿ ನಾಗರೀಕರ ಪರವಾಗಿ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ. ಇಲ್ಲದ ಪಕ್ಷದಲ್ಲಿ ನಾವು ನ್ಯಾಯಬದ್ಧ ಹೋರಾಟ ಮಾಡುತ್ತೇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಸಮಾಜಸೇವಕರು ಮೇಕಲ ಈಶ್ವರರೆಡ್ಡಿಯವರು ತಿಳಿಸಿದ್ದಾರೆ. ಹಾಗು ಪಾಲಿಕೆಯ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

0 Comments