ಮಧುಗಿರಿ: ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಯುಕ್ತ ಕೌಶಲ್ಯ ತರಬೇತಿ ಕೇಂದ್ರದಿಂದ ಇಂದು ಶಿಕ್ಷಕರ ದಿನಾಚರಣೆ ಪ್ರಯುಕ್ತ ನುಡಿನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ವಿಶೇಷವಾಗಿ ಯುಕ್ತ ಕೌಶಲ್ಯ ತರಬೇತಿ ಕೇಂದ್ರದ ವಿದ್ಯಾರ್ಥಿಗಳೇ ಕಾರ್ಯಕ್ರಮವನ್ನು ಆಯೋಜಿಸಿ ಶಿಕ್ಷಕರುಗಳಿಗೆ ನುಡಿನಮನಗಳನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಸಂವಿಧಾನ ಶಿಲ್ಪಿ ಡಾ ಬಿ.ಆರ್ ಅಂಬೇಡ್ಕರ್ ಭಾವಚಿತ್ರವಿರುವ ನೋಟ್ ಪುಸ್ತಕವನ್ನು ಸಮಾಜಸೇವಕರಾದ ಬಾಲಕೃಷ್ಣ ಐಡಿಹಳ್ಳಿ. ಚಂದ್ರು ಸೋಂಪುರ. ಮೈಲಾರಪ್ಪ ತಿಪ್ಪಾಪುರ. ರವರುಗಳು ವಿತರಿಸಿದರು.
*ವಿದ್ಯಾರ್ಥಿಗಳು ಶಿಕ್ಷಕರುಗಳಾದ ಶಬಾನಾ. ಕಲಾವತಿ. ಅರವಿಂದ್ ಶೆಟ್ಟಿ. ರವರುಗಳಿಗೆ ಸನ್ಮಾನಿಸಿ ಗೌರವಿಸಿದರು.
ಸನ್ಮಾನಿತ ಶಿಕ್ಷಕರುಗಳು ಮಾತನಾಡುತ್ತಾ ಕೌಶಲ್ಯ ತರಬೇತಿ ಕೇಂದ್ರವು ವಿದ್ಯಾರ್ಥಿಗಳಿಗೆ ಅಲ್ಲದೆ ಶಿಕ್ಷಕರಿಗೂ ಕೂಡ ತರಬೇತಿಗಳನ್ನು ನೀಡುತ್ತಿದೆ ಯುಕ್ತ ಕೌಶಲ್ಯ ತರಬೇತಿ ಕೇಂದ್ರದಲ್ಲಿ ಶಿಕ್ಷಣ ನೀಡಲು ನಮಗೆ ಅವಕಾಶ ಮಾಡಿಕೊಟ್ಟಿರುವ ವ್ಯವಸ್ಥಾಪಕರು ಗಳಿಗೆ ಸಿಬ್ಬಂದಿವರ್ಗದವರಿಗೆ ಧನ್ಯವಾದಗಳನ್ನು ತಿಳಿಸಿದರು.
ಯುಕ್ತ ಕೌಶಲ್ಯ ತರಬೇತಿ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕರಾದ ಮಧುಗಿರಿ ದಿಲೀಪ್ ರವರು ಶಿಕ್ಷಕರು ಮಾಡುತ್ತಿರುವ ಸೇವೆಯನ್ನು ಶ್ಲಾಘಿಸಿದರು. ಕಾರ್ಯಕ್ರಮದ ಆಯೋಜನೆಯನ್ನು ವಿದ್ಯಾರ್ಥಿಗಳಾದ ಸುಚಿತ, ಕಾವ್ಯ, ಅರುಂಧತಿ, ಹಾಗು ತಂಡದವರಿಗೆ ಧನ್ಯವಾದವನ್ನು ಕೂಡ ತಿಳಿಸಿದರು.
ಕಾರ್ಯಕ್ರಮದಲ್ಲಿ ಯುಕ್ತ ಕೌಶಲ್ಯ ತರಬೇತಿ ಕೇಂದ್ರದ ಜಿಲ್ಲಾ ಮುಖ್ಯ ಕಾರ್ಯಕ್ರಮ ಆಯೋಜಕರಾದ ದೀಪಿಕಾ ವಿಭಾಗ ಮಟ್ಟದ ಆಯೋಜಕರಾದ ತನುಜಾ, ಭಾಗ್ಯಲಕ್ಷ್ಮಿ , ಧನುರ್, ಜ್ಯೋತಿ, ನರೇಂದ್ರ ಹಾಗೂ ಚೇತನ್, ವನಿತಾ ರವರುಗಳು ಹಾಜರಿದ್ದರು.


0 Comments