Ticker

6/recent/ticker-posts

Ad Code

Responsive Advertisement

ರೈತರು ಬೆಳೆದ ತರಕಾರಿ ತಂದರೇ ವಾಹನಗಳ ನಿಲುಗಡೆ ಸುಂಕ ವಸೂಲಿ-ರೈತರ ಆಕ್ರೋಶ

ಬಳ್ಳಾರಿ ಸೆ 01. ಭಾರತ ದೇಶದಲ್ಲಿ ರೈತರಿಗೆ ಉಳಿಗಾಲ ಇಲ್ಲ,ಸರ್ಕಾರದ ನಿರ್ಣಯಗಳು ಅನ್ನದಾತನಿಗೆ ಮಾರಕವಾಗಿ ಪರಿಣಮಿಸುತ್ತಿವೆ.ಇನ್ನುಮುಂದೆ ತರಕಾರಿಗಳನ್ನು, ಕೃಷಿ ಉತ್ಪನ್ನಗಳನ್ನು ವಾಹನಗಳಲ್ಲಿ ರವಾನೆ ಮಾಡುವಂತಾ ಪರಿಸ್ಥಿತಿ  ಇಲ್ಲ!!?,ಏತ್ತಿನಗಾಡಿ,ಕತ್ತೆ,ಕುದುರೆ,ಒಂಟೆ,ಗಳನ್ನು ಬಳಸಬೇಕು.!! ಎಂದು ರೈತರು ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ. 

ನಾವು ಬೆಳೆದ ತರಕಾರಿಯನ್ನು ವಾಹನಗಳಲ್ಲಿ ತಂದರೇ ಅದಕ್ಕೆ ನಿಲುಗಡೆ ಸುಂಕ ಎಂದು 50,100,150 ಸುಂಕಗಳನ್ನು( ವಾಹನ ನಿಲುಗಡೆ ಸುಂಕ) ಎಂದು ವಿಧಿಸಲು ನಿರ್ಣಯ ಕೈಗೊಂಡಿದ್ದಾರೆ ಎಪಿಎಂಸಿ ಅಧೀಕಾರಿಗಳು ಎಂದು ರೈತರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಲಾರಿಗೆ150/-ಮೀನಿ ಲಗೇಜ್ ವಾಹನಕ್ಕೆ100/-ಆಟೋ ರಿಕ್ಷಾಗೆ 50/- ಕಟ್ಟಬೇಕು ಎಂದು ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನಿರ್ಣಯ ಮಾಡಿದೆ. ಉದಾಹರಣೆಗೆ ಒಬ್ಬ ರೈತನು 10 ಟಮೋಟಾ ಬಾಕ್ಸುಗಳನ್ನು ಮಾರುಕಟ್ಟೆಗೆ ತಂದರೇ ಆಟೋ ಬಾಡಿಗೆ 80-100 ರೂ ನೀಡಿರುತ್ತಾನೆ. 

ಈ ಆಟೋ ಮಾರುಕಟ್ಟೆಗೆ ಬಂದಾಗ 50 ರೂ ಶುಲ್ಕ ಕೇಳಿದರೇ ಅವನು ಎಲ್ಲಿಂದ ಕಟ್ಟುತ್ತಾನೆ ಎಂದು, ಮತ್ತು 50ಞg, ಕೃಷಿ ಉತ್ಪನ್ನ ಗಳನ್ನು ಖರೀದಿ ಮಾಡಿ ಆಟೋ ರಿಕ್ಷಾ ಬಳಕೆ ಮಾಡಿದರೆ ಶುಲ್ಕ ಕಟ್ಟಬೇಕು ,ರೈತರು ಬೆಳೆಸಿದ ದಿನಸಿಗಳನ್ನು ವಾಹನಗಳ ಮೂಲಕ ಮಾರುಕಟ್ಟೆಗೆ ತಂದರೆ,ವಾಹನಗಳ ಶುಲ್ಕ ಕಟ್ಟಬೇಕು, ಇಲ್ಲದಿದ್ದರೆ ಮಾರುಕಟ್ಟೆ ಹೊಳಗಡೆ  ಬರುವಂತಿಲ್ಲ. 

ಒಟ್ಟಾರೆ ಯಾವುದೇ ಸರಕಾರ ಬರಲಿ ಅನ್ನದಾತನಿಗೆ ಉಳಿಗಾಲ ಇಲ್ಲ ಎಂದು ರೈತರು ಬೇಸರವನ್ನು ವ್ಯಕ್ತಪಡಿಸಿ , ಕೃ.ಉ.ಮಾ.ಸ  ಮೇಲೇ ,ಅಧಿಕಾರಿಗಳ ಮೇಲೆ ಆಗ್ರಹವನ್ನು ವ್ಯಕ್ತಪಡಿಸಿದ್ದಾರೆ.ಬಳ್ಳಾರಿ ನಲ್ಲಿ ಶಾಸಕರು ಅಗಲಿ ಸಂಸದರು ಅಗಲಿ,ಇತ್ತ ಗಮನಹರಿಸುವ ಪ್ರಯತ್ನ ಎಂದು ಮಾಡಿಲ್ಲ,ಸಾರಿಗೆ ಸಚಿವ ಶ್ರೀರಾಮುಲು ಸಂಬAದಿಗಳು ಅಧ್ಯಕ್ಷರು ಆಗಿದ್ದಾರೆ, ಅವರು ಏನಾದರೂ ಸಚಿವರ ಜೊತೆ ಚರ್ಚೆ ಮಾಡಿರಬಹುದಾ,?? ಇಲ್ಲವೇ ಗೊತ್ತಿಲ್ಲ ಶಾಸಕ ಸೋಮಶೇಖರ್ ರೆಡ್ಡಿ ಗೆ ತಿಳಿಸಿದ್ದಿವಿ ಎಂದು,ಅಭಿವೃದ್ಧಿ ವಿಚಾರದಲ್ಲಿ ಶುಲ್ಕವನ್ನು ವಸೂಲಿ ಮಾಡಿ ಎಂದು, ಹೇಳಿದ್ದಾರೆ ಎಂದು ಅಧ್ಯಕ್ಷ ಉಮೇಶ್ ತಿಳಿಸಿದ್ದಾರೆ. 


ವಾಹನಗಳ ಶುಲ್ಕವನ್ನು ವಸೂಲಿಗೆ ಅಧ್ಯಕ್ಷ, ಡಿಡಿ,ಶಾಸಕರು ಅನುಮತಿ ನೀಡಿದ್ದು, ರೈತರು ಸಾರ್ವಜನಿಕರು,ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ವಿರುದ್ಧ ಜನರು ಹೊರಾಟ ಮಾಡುವ, ಸೂಚನೆ ಗಳು ಕಂಡುಬರುತ್ತವೆ, ಸಂಘ ಸಂಸ್ಥೆಗಳು ಕೂಡ ಸಹಕಾರ ನೀಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.


Post a Comment

0 Comments

Ad Code

Responsive Advertisement