ಬಳ್ಳಾರಿ,ಸೆ.01: ಪ್ರತಿಯೊಂದು ಜೀವಿಯಂತೆ ಮಾನವನಿಗೂ ಸಹ ಕಣ್ಣು ಅತ್ಯಂತ ಪ್ರಮುಖವಾದ ಅಂಗವಾಗಿದೆ. ಕಣ್ಣಿನ ವಿವಿಧ ಖಾಯಿಲೆಗಳಿಂದ ಹಲವಾರು ಜನ ಅಂಧತ್ವಕ್ಕೆ ಒಳಗಾಗುತ್ತಿದಾರೆ. ಅಂತವರಿಗೆ ನೇತ್ರದಾನದ ಮೂಲಕ ಹೊಸ ಜೀವನದ ಪುನರ್‌ಜನ್ಮ ದೊರೆತಂತೆ ಮತ್ತು ಪ್ರತಿಯೊಬ್ಬರು ತಮ್ಮ ಮರಣದ ನಂತರ ನೇತ್ರದಾನಕ್ಕಾಗಿ ಕೈಜೊಡಿಸಿ, ನೇತ್ರಗಳು ಸದಾ ಜೀವಂತವಾಗಿರಲಿ, ನೇತ್ರದಾನ ತಮ್ಮ ಕುಟುಂಬದ ಸಂಪ್ರದಾಯವಾಗಲಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಹೆಚ್.ಎಲ್ ಜನಾರ್ಧನ್ ಹೇಳಿದರು.
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆಯ ಸಹಯೋಗದಲ್ಲಿ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ 36ನೇಯ ರಾಷ್ಟಿçÃಯ ನೇತ್ರದಾನ ಪಾಕ್ಷಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನೇತ್ರದಾನದ ಮಹತ್ವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಮತ್ತು ಅಂಧತ್ವದಿAದ ಮುಕ್ತಿ ಹೊಂದಲು ಸಹಾಯಕವಾಗುವಂತೆ ವ್ಯಾಪಕ ಪ್ರಚಾರ ಕೈಗೊಳ್ಳಲು ಸೂಚಿಸಿದ ಅವರು ಅಂಧತ್ವದಿAದ ಮುಕ್ತಿ ಹೊಂದಲು ಪ್ರತಿಯೊಬ್ಬರು ಕೈಜೋಡಿಸಿ ಎಂದು ತಿಳಿಸಿದರು.
ಜಿಲ್ಲಾ ಆಂಧತ್ವ ನಿಯಂತ್ರಣಾಧಿಕಾರಿ ಡಾ.ರಾಜಶೇಖರ ರೆಡ್ಡಿ ಅವರು ಮಾತನಾಡಿ ಒಬ್ಬ ವ್ಯಕ್ತಿ ದಾನ ಮಾಡಿದ ನೇತ್ರಗಳು ಇಬ್ಬರು ಕಾರ್ನಿಯಾ ಅಂಧರಿಗೆ ದೃಷ್ಟಿ ನೀಡುತ್ತವೆ. ಪ್ರತಿ ವರ್ಷ ಸರಾಸರಿ 5,600 ನೇತ್ರದಾನಗಳಾಗುತ್ತಿವೆ. ಅಂದಾಜು 1.25 ಲಕ್ಷ ಜನರು ಕಾರ್ನಿಯಾ ಸಂಬAಧಿ ಅಂಧತ್ವದಿAದ ಬಳಲುತ್ತಿದ್ದು ದಾನಕ್ಕಾಗಿ ಕಾಯುತ್ತಿರುತ್ತಾರೆ. ಕರ್ನಾಟಕದಲ್ಲಿ 32 ನೇತ್ರ ಬ್ಯಾಂಕುಗಳು ಸೇವೆ ಸಲ್ಲಿಸುತ್ತಿದ್ದು, 7 ಸರ್ಕಾರಿ ಸ್ವಾಮ್ಯದಲ್ಲಿವೆ. ಬಳ್ಳಾರಿಯ ವಿಜಯನಗರ ವೆದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನೇತ್ರ ಬಂಡಾರ(ಬ್ಯಾAಕ್) ಇದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆಯಿರಿ. ವಯಸ್ಸು, ಲಿಂಗ, ಜಾತಿ, ರಕ್ತದ ಗುಂಪು, ಯಾವುದೇ ಬೇಧ-ಭಾವವಿಲ್ಲದೇ ಎಲ್ಲರೂ ನೇತ್ರದಾನ ಮಾಡಬಹುದು ಎಂದರು.
ವ್ಯಕ್ತಿಯ ಮರಣದ 6 ಗಂಟೆಯೊಳಗೆ ನೇತ್ರಗಳನ್ನು ಸಂಗ್ರಹಿಸಲಾಗುವುದು. ನೇತ್ರ ಸಂಗ್ರಹಣೆಗೆ ಬೇಕಾಗುವ ಸಮಯ ಕೇವಲ 20 ನಿಮಿಷಗಳು, ಅಲ್ಲದೆ ಕಣ್ಣಿನ ಕಪ್ಪುಭಾಗ ಕಾರ್ನಿಯಾ ಮಾತ್ರ ಸಂಗ್ರಹಣೆ ಮಾಡುವುದರಿಂದ ಮೃತರ ಮುಖ ವಿಕಾರವಾಗುವುದಿಲ್ಲ. ನೊಂದಣಿಯ ಪ್ರಕ್ರಿಯೆ ಅತ್ಯಂತ ಸುಲಭವಿದ್ದು ಹತ್ತಿರದ ಯಾವುದೇ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಅಥವಾ 104 ಉಚಿತ ಆರೋಗ್ಯ ಸಹಾಯವಾಣಿಗೆ ಕರೆ ಮಾಡಿ ಸಹಾಯ ಪಡೆಯಿರಿ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಆರ್.ಅನಿಲ್‌ಕುಮಾರ, ತಾಲೂಕು ಆರೋಗ್ಯಾಧಿಕಾರಿಗಳು ಹಾಗೂ ನೇತ್ರತಜ್ಞರಾದ ಡಾ.ಮೋಹನಕುಮಾರಿ, ಜಿಲ್ಲಾ ಆರೋಗ್ಯ ಶೀಕ್ಷಣಾಧಿಕಾರಿ ಈಶ್ವರ ಹೆಚ್.ದಾಸಪ್ಪನವರ, ಅಂಧತ್ವ ನಿಯಂತ್ರಣ ವ್ಯವಸ್ಥಾಪಕ ಗಂಗಾಧರ, ಶಾಂತಪ್ಪ, ಮಹೇಶ ಸೇರಿದಂತೆ ಜಿಲ್ಲೆಯ ನೇತ್ರಾಧಿಕಾರಿಗಳು ಉಪಸ್ಥಿತರಿದ್ದರು.
ಇದೆ ಸಂಧರ್ಭದಲ್ಲಿ ಅಂಧತ್ವ ನಿಯಂತ್ರಣ ಕುರಿತು ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು.

0 Comments