ಬಳ್ಳಾರಿ,ಸೆ.01:ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದ ಹೊರಗಡೆ ನಡೆಯುವ ವ್ಯಾಪಾರ ವಹಿವಾಟಿಗೆ ಮಾರುಕಟ್ಟೆ ಶುಲ್ಕ ಸಂಗ್ರಹಿಸಲು ಅವಕಾಶ ಇಲ್ಲದಿರುವುದರಿಂದ ಸಮಿತಿಯ ಆದಾಯವು ಗಣನೀಯವಾಗಿ ಕುಂಠಿತಗೊAಡಿದ್ದು, ಇದರಿಂದ ಮಾರುಕಟ್ಟೆಯ ಅಭಿವೃದ್ಧಿ ಹಾಗೂ ಪ್ರಾಂಗಣದ ನಿರ್ವಹಣೆಯು ಕಷ್ಟಕರವಾಗಿರುವುದರಿಂದ ವಾಹನ ನಿಲುಗಡೆ ಶುಲ್ಕವನ್ನು ಮರು ನಿಗದಿ ಪಡಿಸಲಾಗಿದೆ ಎಂದು ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಉಮೇಶ ಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲಾರಿಗಳಿಗೆ ರೂ.100, ಮಿನಿ ಲಗೇಜ್ ವಾಹನಗಳಿಗೆ ರೂ.50, ತರಕಾರಿ ಸಾಗಿಸುವ ಆಟೋಗಳೀಗೆ ರೂ.20 ರಂತೆ ಶುಲ್ಕ ನಿಗದಿ ಪಡಿಸಲಾಗಿದೆ.
ಇದೇ ರೀತಿಯಾಗಿ ಪ್ರಾಂಗಣದ ಒಳಗಡೆ ಹಣ್ಣು ಮತ್ತು ತರಕಾರಿ ಮಾರುಕಟ್ಟೆಯಲ್ಲಿ ಬೀದಿ ಬದಿ ವ್ಯಾಪಾರ ಮಾಡುತ್ತಿರುವ ಮತ್ತು ರಸ್ತೆ ಬದಿಯಲ್ಲಿರುವ ಗೂಡಂಗಡಿಗಳಿAದ ಬಳಕೆದಾರರಿಗೆ ಸೇವಾ ಶುಲ್ಕವನ್ನು ಮರು ನಿಗದಿ ಪಡಿಸಲಾಗಿದೆ. ಹಣ್ಣು ಮತ್ತು ತರಕಾರಿ ಚಿಲ್ಲರೆ ವ್ಯಾಪಾರಸ್ಥರು ರೂ.50, ಇತರೆ ಬಗೆಯ ವ್ಯಾಪಾರಸ್ಥರು ರೂ.50, ತಾತ್ಕಾಲಿಕ ಗೂಡಂಗಡಿಗಳಿಗೆ ರೂ.100 ಸೇವಾ ಶುಲ್ಕ ನಿಗದಿ ಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ(ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ 1966 ರ ಕಲಂ 65ಕ್ಕೆ ತಿದ್ದುಪಡಿಯಾಗಿ ಮಾರುಕಟ್ಟೆ ಶುಲ್ಕ ರೂ.1.50ರಿಂದ ರೂ.0.60ಕ್ಕೆ ಇಳಿಕೆಯಾಗಿದ್ದು, ಪ್ರಾಂಗಣದ ಹೊರಗಡೆ ನಡೆಯುವ ವ್ಯಾಪಾರ ವಹಿವಾಟಿಗೆ ಮಾರುಕಟ್ಟೆ ಶುಲ್ಕ ಸಂಗ್ರಹಿಸಲು ಅವಕಾಶ ಇಲ್ಲದಿರುವುದರಿಂದ ಸಮಿತಿಯ ಆದಾಯವು ಗಣನೀಯವಾಗಿ ಕುಂಠಿತಗೊAಡಿದೆ. ಇದರಿಂದ ಮಾರುಕಟ್ಟೆಯ ಅಭಿವೃದ್ಧಿ ಹಾಗೂ ಪ್ರಾಂಗಣದ ನಿರ್ವಹಣೆಯು ಕಷ್ಟಕರವಾಗಿದೆ. ಆ.7ರಂದು ನಡೆದ ಸಮಿತಿ ಸಭೆಯ ತೀರ್ಮಾನದಂತೆ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ಕಾಯ್ದೆ 1968 ರ ಕಲಂ 151 ರತೆ ಸಮಿತಿಯ ಸ್ಥಾಯಿ ಆದೇಶದ ಮೂಲಕ ಮಾರುಕಟ್ಟೆ ಪ್ರಾಂಗಣದ ಒಳಬರುವ ವಾಹನಗಳಿಗೆ ಶುಲ್ಕ ಮರು ನಿಗದಿ ಪಡಿಸಲಾಗಿದೆ. ಪೇಟೆಕಾರ್ಯಕರ್ತರ ಹಾಗೂ ಬಳಕೆದಾರರ ಮನವಿಯಂತೆ ಸೆ.1ರಿಂದ ಹೊಸ ಶುಲ್ಕ ಜಾರಿಗೆ ಬರುವಂತೆ ಆದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

0 Comments