ಬಳ್ಳಾರಿ ಸೆ.01: ಸ್ಥಳೀಯ ಸಂಸ್ಥೆಗಳಿAದ ವಿಧಾನ ಪರಿಷತ್‌ಗೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಕುರುಬ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ಬೆಣಕಲ್ ಬಸವರಾಜಗೌಡ ಹೇಳಿದರು.ಬಳ್ಳಾರಿ ನಗರದ ಖಾಸಗಿ ಹೊಟೇಲ್‌ನಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡ ನಾಯಕರು ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ಎರಡು ಸಲ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ಜಿಲ್ಲೆಯಲ್ಲಿ ಈ ಹಿಂದೆ ಅವಕಾಶ ನೀಡಲಾಗಿತ್ತು ಎಂದು ಹೇಳಿದ ಬಸವರಾಜಗೌಡ, ಆದರೆ ನಂತರದ ಚುನಾವಣೆಗಳಲ್ಲಿ ಅವಕಾಶ ಸಿಗಲಿಲ್ಲ ಎಂದರು. ಕೆಎಸ್ಎಲ್ ಸ್ವಾಮಿ ಅವರಿಗೆ ಒಮ್ಮೆ ಅವಕಾಶ ಸಿಕ್ಕಿತು, ಆದರೆ ಕ್ಷೇತ್ರ ಪುನರ್ ವಿಂಗಡಣೆ ನಂತರ ಸಮುದಾಯಕ್ಕೆ ಅವಕಾಶ ಸಿಕ್ಕಿಲ್ಲ, ಹೀಗಾಗಿ ಈಗ ವಿಧಾನ ಪರಿಷತ್ ಚುನಾವಣೆಯಲ್ಲಿ ಕುರುಬ ಸಮುದಾಯದ ಅಭ್ಯರ್ಥಿಗೆ ಅವಕಾಶ ನೀಡಬೇಕು ಎಂದು ಬೆಣಕಲ್ ಬಸವರಾಜಗೌಡ ಹೇಳಿದರು.ಕಾಂಗ್ರೆಸ್ ಪಕ್ಷದೊಂದಿಗೆ ಕುರುಬ ಸಮುದಾಯದ ಶೇ.80 ರಷ್ಟು ಜನ ಗುರುತಿಸಿಕೊಂಡಿದ್ದಾರೆ ಎಂದು ಹೇಳಿದ ಬಸವರಾಜಗೌಡ, ಪಕ್ಷಕ್ಕಾಗಿ ಸಮಾಜದ ಜನ ದುಡಿದಿದ್ದಾರೆ ಹೀಗಾಗಿ ಕಾಂಗ್ರೆಸ್ ನಮ್ಮ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದರು.
ಯಾರು ಅಭ್ಯರ್ಥಿ ಆಗಬೇಕು ಎಂಬ ಬಗ್ಗೆ ಸಮಾಜದ ಮುಖಂಡರಾದ ನಾವು ಕೂತು ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದು ಸಮುದಾಯದ ಮತ್ತೋರ್ವ ಕೆರಕೋಡೆಪ್ಪ ಹೇಳಿದರು.ಸಮುದಾಯದಿಂದ ಯಾರು ಅಭ್ಯರ್ಥಿ ಆಗಬೇಕು ಎಂದು ಸಭೆ ಸೇರಿ ತೀರ್ಮಾನ ಮಾಡುತ್ತೇವೆ ಎಂದು ಹೇಳಿದ ಕೆರಕೋಡೆಪ್ಪ, ಬಳ್ಳಾರಿ ಜಿಲ್ಲೆಯ 5 ತಾಲೂಕುಗಳ ಕುರುಬ ಸಮುದಾಯದ ಮುಖಂಡರು ಇಂದು ಸಭೆ ಸೇರಿ ತೀರ್ಮಾನ ಮಾಡಿ ಈ ಒತ್ತಾಯ ಮಾಡುತ್ತಿದ್ದೇವೆ ಎಂದರು.
ಸಮುದಾಯದ ವತಿಯಿಂದ ಒಮ್ಮತದ ಓರ್ವ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತೇವೆ ಎಂದು ತಿಳಿಸಿದ ಕೆರಕೋಡೆಪ್ಪ, ಮುಖಂಡರು ಅಂತಿಮಗೊಳಿಸಿದ ಅಭ್ಯರ್ಥಿಗೇ ಟಿಕೆಟ್ ನೀಡುವಂತೆ ಒತ್ತಾಸುತ್ತೇವೆ ಎಂದರು.ಕಾAಗ್ರೆಸ್ ಹೊರತುಪಡಿಸಿ ಬಿಜೆಪಿ ಮತ್ತಿತರ ಬೇರೆ ಪಕ್ಷದಿಂದ ಕುರುಬ ಸಮುದಾಯದ ಅಭ್ಯರ್ಥಿ ಸ್ಪರ್ಧೆ ಮಾಡಿದಲ್ಲಿ ಆಗ ಮತ್ತೆ ಸಭೆ ಸೇರಿ ತೀರ್ಮಾನ ಮಾಡುತ್ತೇವೆ ಎಂದು ಕೆರಕೋಡೆಪ್ಪ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಕೇವಲ ವಿಧಾನ ಪರಿಷತ್ ಚುನಾವಣೆ ಮಾತ್ರವಲ್ಲ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕೂಡ ಕುರುಬ ಸಮುದಾಯದ ಅಭ್ಯರ್ಥಿಗಳಿಗೆ ಅವಕಾಶ ನೀಡಬೇಕು ಎಂದು ಹೇಳಿದ ಕೆರಕೋಡೆಪ್ಪ, ಓಬಿಸಿ ಕೋಟಾ ಜೊತೆಗೆ ಹೆಚ್ಚುವರಿಯಾಗಿ 4 ಜಿಪಂ ಸ್ಥಾನಗಳಲ್ಲಿ ಕುರುಬ ಸಮುದಾಯದ ಅಭ್ಯರ್ಥಿಗಳಿಗೆ ಅವಕಾಶ ನೀಡಬೇಕು ಎಂದರು.ಈ ಹಿಂದೆ ಕೆ ಎಸ್ ಎಲ್ ಸ್ವಾಮಿ ಅವರು ತಮ್ಮ ಇತಿಮಿತಿಯಲ್ಲಿ, ಕಡಿಮೆ ಅನುದಾನದಲ್ಲಿ ಕೆಲಸ ಮಾಡಿದ್ದಾರೆ,
ಅವರ ಕೆಲಸಗಳ ಬಗ್ಗೆ ಸಮುದಾಯದ ಮುಖಂಡರಿಗೆ ಸಮಾಧಾನ ಇದೆ, ಅವರ ಅವಧಿಯಲ್ಲಿ ಈಗಿನಷ್ಟು ಅನುದಾನ ಇರಲಿಲ್ಲ, ಅಲ್ಪಸ್ವಲ್ಪ ಕೆಲಸ ಮಾಡಿದ್ದಾರೆ ಎಂದು ಕೆರಕೋಡೆಪ್ಪ ಹೇಳಿದರು.ಕೆಎಸ್ಎಲ್ ಸ್ವಾಮಿ ಅವರಿಗೆ ಈ ಹಿಂದೆ ಅವಕಾಶ ಸಿಕ್ಕಿತ್ತು, ಈಗ ಮತ್ತೆ ಅವರಿಗೆ ಅವಕಾಶ ಸಿಗಬೇಕೆ? ಎಂಬ ಬಗ್ಗೆ ಚರ್ಚೆ ಮಾಡಿ ತೀರ್ಮಾನಿಸುತ್ತೇವೆ ಎಂದ ಕೆರಕೋಡೆಪ್ಪ, ಗೆಲ್ಲುವ ಶಕ್ತಿ ಮತ್ತು ಇತರ ಎಲ್ಲ ಸಾಮರ್ಥ್ಯಗಳು ಇದ್ದಂತಹ ವ್ಯಕ್ತಿಯನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿ, ಹೆಸರು ಸೂಚಿಸುವ ಪ್ರಯತ್ನ ಮಾಡುತ್ತೇವೆ ಎಂದರು.ಸಮುದಾಯದಲ್ಲಿ ಮಹಿಳಾ ಅಭ್ಯರ್ಥಿಗಳು ಸ್ಪರ್ಧೆಗೆ ಮುಂದಾದರೆ ಅವರಿಗೂ ಅವಕಾಶ ಮಾಡಿ ಕೊಡುತ್ತೀರಾ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಕೆರಕೋಡೆಪ್ಪ, ಅಂತಹ ಅರ್ಹ ಅಭ್ಯರ್ಥಿಗಳು ಮುಂದೆ ಬಂದರೆ ಅವರಿಗೆ ಅವಕಾಶ ಕೊಡಿಸುವ ಪ್ರಯತ್ನ ಮಾಡುತ್ತೇವೆ ಎಂದರು.
ಕಾ0ಗ್ರೆಸ್ ಪಕ್ಷದಿಂದ ನಮ್ಮ ಸಮುದಾಯದ ಅಭ್ಯರ್ಥಿಗಳಿಗೆ ಅವಕಾಶ ಬೇಕೆಂಬುದು ನಮ್ಮ ಬೇಡಿಕೆ ಒಂದು ವೇಳೆ ಅವಕಾಶ ಸಿಗದಿದ್ದರೆ ಪಕ್ಷದ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಒಕ್ಕೊರಲಿನಿಂದ ತೀರ್ಮಾನ ಮಾಡಿರುವುದಾಗಿ ಬೆಣಕಲ್ ಬಸವರಾಜ್ ತಿಳಿಸಿದರು.ಸುದ್ದಿಗೋಷ್ಟಿಯಲ್ಲಿ ಎನ್ ಸಿದ್ಧನಗೌಡ, ಕುರುಬ ಸಂಘದ ಜಿಲ್ಲಾಧ್ಯಕ್ಷ ಕೆ ಎರೇಗೌಡ, ಕೆ. ಮೋಹನ್, ಸಂಡೂರು ಪುರಸಭೆ ಸದಸ್ಯ ಸುರೇಶ್, ಸತ್ಯಪ್ಪ, ಬಂಗೀ ಮಲ್ಲಿಕಾರ್ಜುನ, ಎಂ ಸದಾಶಿವ, ಮಹಾಂತೇಶ್, ದೇವೇಂದ್ರಪ್ಪ, ವೆಂಕಟೇಶ್, ಮಾರೆಪ್ಪ, ನಿಟ್ಟೂರು ಹನುಮಂತಪ್ಪ, ಬಿ ಕೆ ಮುರಳೀಧರ್, ಕೆ ನಾಗರಾಜ್, ಉಮಾಪತಿ ಮಂಜುಳ, ಕವಿತಾ ಹೊನ್ನಪ್ಪ, ದೇವೇಂದ್ರಪ್ಪ, ಬಿ ಎಂ ಪಾಟೀಲ್, ಹೊಟೇಲ್ ಮಲ್ಲೇಶಪ್ಪ, ಕೊಳಗಲ್ ಅಂಜಿನಿ ಹಾಜರಿದ್ದರು.

0 Comments