Ticker

6/recent/ticker-posts

Ad Code

Responsive Advertisement

ಬಳ್ಳಾರಿ ಜಿಲ್ಲಾ ಸಮಿತಿಯಿಂದ ಭಾರತ್ ಬಂದ್ ಬೆಂಬಲಿಸಿ ರಾಯಲ್ ಸರ್ಕಲ್‌ನಲ್ಲಿ ಪ್ರತಿಭಟನೆ

ಬಳ್ಳಾರಿ, ಸೆ 27. ಆಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಂIಒSS ಬಳ್ಳಾರಿ ಜಿಲ್ಲಾ ಸಮಿತಿಯಿಂದ ಭಾರತ್ ಬಂದ್ ಬೆಂಬಲಿಸಿ ರಾಯಲ್ ಸರ್ಕಲ್‌ನಲ್ಲಿ ಪ್ರತಿಭಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಎಂ.ಎನ್ ಮಂಜುಳಾರವರು ಮಾತನಾಡಿದರು. 


ಈ ಹೋರಾಟ ಒಂದು ಐತಿಹಾಸಿಕ ಹೋರಾಟವಾಗಿದೆ, ರೈತರು ತಮ್ಮ ಪ್ರಾಣ ಹೋದರು ಕೊಡ ಜಗ್ಗದೆ ಇನ್ನು ಕೊಡ ಹೋರಾಟದಲ್ಲಿ ಇದ್ದಾರೆೆ ಕೇಂದ್ರ ಸರ್ಕಾರ ಅತ್ಯಂತ ಜನವಿರೋಧಿ ರೈತ ವಿರೋಧಿ ಮಹಿಳಾ ವಿರೋಧಿ ಕಾಯ್ದೆಗಳನ್ನು ತರುತ್ತಾ ಇದೆ ಇದನ್ನು ನಾವೆಲ್ಲರೂ ಖಂಡಿಸಬೇಕಾಗಿದೆ, ಹಾಗಾಗಿ ಇವತ್ತು ಈ ಬಂದ್‌ಗೆ ನಾವು, ಮಹಿಳೆಯರು ಕೊಡ ಬೆಂಬಲ ಕೊಡುತಾ ಇದೀವಿ ಎಂದರು. ಹೋರಾಟ ನಿರತ ರೈತರೇ ನಿಮ್ಮೊಂದಿಗೆ ನಾವಿದ್ದೇವೆ ನಿಮ್ಮ ಹೋರಾಟ ಯಶ್ವಸಿಯಾಗಲಿ ಎನ್ನುವಂತ ಸಂದೇಶವನ್ನು ನೀಡೋಣ ಎಂದು ಕರೆ ನೀಡಿದರು. ಈ ಪ್ರತಿಭಟನೆಯ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷರಾದ ಎ. ಶಾಂತಾ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಈಶ್ವರಿ, ಪದಾಧಿಕಾರಿಗಳಾದ ರೇಖಾ, ವಿದ್ಯಾ, ಅಹಲ್ಯ, ಪದ್ಮ, ಮಲ್ಲಮ್ಮ, ನಾಗಮ್ಮ, ಹುಲಿಗೆಮ್ಮ, ವಿಜಯಲಕ್ಷ್ಮಿ, ಸುಜಾತ, ಕಲ್ಯಾಣಮ್ಮ ಉಪಸ್ಥಿತರಿದ್ದರು.


Post a Comment

0 Comments

Ad Code

Responsive Advertisement