ಬೆಂಗಳೂರು-ಸೆಪ್ಟೆಂಬರ್ -28 : ಕರ್ನಾಟಕ ಮಾಧ್ಯಮ ಅಕಾಡೆಮಿ 40 ವರ್ಷಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ 40ರ ಸಂಭ್ರಮಾಚರಣೆಯ ಲಾಂಛನವನ್ನು ಸೆಪ್ಟೆಂಬರ್ 29 ಬುಧವಾರ ಸಂಜೆ 4:00 ಗಂಟೆಗೆ ಮಾನ್ಯ ಮುಖ್ಯಮಂತ್ರಿಗಳು ಬಿಡುಗಡೆ ಮಾಡಲಿದ್ದಾರೆ.
ತದನಂತರ ಮಾಧ್ಯಮ ಅಕಾಡೆಮಿ ಕ್ಲಬ್ ಹೌಸ್ ಗೆ ಚಾಲನೆ ನೀಡಿ ನನ್ನ ಕಲ್ಪನೆಯ ಕರ್ನಾಟಕ ವಿಷಯವಾಗಿ ಆಶಯ ನುಡಿಗಳನ್ನಾಡಲಿದ್ದಾರೆ.
‘ಕ್ಲಬ್ ಹೌಸ್’ ಸಾಮಾಜಿಕ ಮಾಧ್ಯಮದ ನೂತನ ಆವಿಷ್ಕಾರ. ವಿಶ್ವದ ಮೂಲೆ ಮೂಲೆಯ ಜನರನ್ನು ಏಕ ಕಾಲಕ್ಕೆ ಒಂದೇ ವೇದಿಕೆಯಡಿ ಒಂದೆಡೆ ಬೆಸೆಯುವಂತಹ ಸಾಮಾಜಿಕ ಆ್ಯಪ್. ಇದೇ ಮೊದಲನೆ ಬಾರಿಗೆ ರಾಜ್ಯದ ಮುಖ್ಯಮಂತ್ರಿಯೊಬ್ಬರು ಈ ಆ್ಯಪ್ ಮೂಲಕ ಪತ್ರಕರ್ತರ ಬಳಗವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ತಮ್ಮ “ಕಲ್ಪನೆಯ ಕರ್ನಾಟಕದ” ರೂಪುರೇಶೆಗಳನ್ನು ಸಾದರ ಪಡಿಸಿ ಭವಿಷ್ಯ ಕರ್ನಾಟಕದ ಕುರಿತಾಗಿನ ತಮ್ಮ ಕನಸುಗಳನ್ನು ‘ಕ್ಲಬ್ ಹೌಸ್’ ಮೂಲಕ ಹಂಚಿಕೊಳ್ಳಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ರಾಜ್ಯದ ಸಚಿವರುಗಳು, ರಾಜ್ಯದ ಪ್ರಮುಖ ಪತ್ರಿಕೆಗಳ ಸಂಪಾದಕರು, ಹಿರಿಯ ಪತ್ರಕರ್ತರು, ಚಲನಚಿತ್ರ ತಾರೆಯರು, ಹೊರನಾಡ ಕನ್ನಡಿಗರು ಸೇರಿದಂತೆ ವಿಶ್ವದ ಬೇರೆ ಬೇರೆಡೆಗಳಿಂದ ಪಾಲ್ಗೊಳ್ಳಲಿರುವ ಶ್ರೋತೃಗಳನ್ನು ಮಾನ್ಯ ಮುಖ್ಯಮಂತ್ರಿಗಳು ‘ಕ್ಲಬ್ ಹೌಸ್’ ಆ್ಯಪ್ ಮೂಲಕ ತಲುಪಲಿದ್ದಾರೆ.


0 Comments