ಬಳ್ಳಾರಿ ಸೆ 16:ಬಳ್ಳಾರಿ ನಗರದ ಕೈಗಾರಿಕಾ ಪ್ರದೇಶದಲ್ಲಿರುವ ಹ್ಯಾಲೀಸ್ ಬ್ಲೂ ಸ್ಟೀಲ್ ಸಂಸ್ಥೆಗೆ 2021 ನೇ ಸಾಲಿನ ರಪ್ತು ಶ್ರೇಷ್ಟತಾ ಪ್ರಶಸ್ತಿ ಲಭಿಸಿದೆ. ಬೆಂಗಳೂರಿನಲ್ಲಿ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಈ ಪ್ರಶಸ್ತಿಯನ್ನು ಸಂಸ್ಥೆಯ ಮಾಲೀಕರಾದ ಕೆ.ಎಂ.ಶಿವಮೂರ್ತಿ ಅವರಿಗೆ ಪ್ರಧಾನ ಮಾಡಿದ್ದಾರೆ.
ಕರ್ನಾಟಕ ರಾಜ್ಯ ಕೈಗಾರಿಕೆ ಮತ್ತು ವಾಣಿಜೋಧ್ಯಮ ಸಂಸ್ಥೆ ಈ ಪ್ರಶಸ್ತಿಯನ್ನು ನೀಡಿದೆ.ರಾಜ್ಯದ ಎಲ್ಲಾ ಜಿಲ್ಲೆಗಳ ರಪ್ತು ವಹಿವಾಟುದಾರರನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಲಾಗುತ್ತದೆ.ಈ ವರ್ಷ ಬಳ್ಳಾರಿಯ ಶ್ರೀರಾಘವೇಂದ್ರ ಎಂಟರ್ ಪ್ರೈಸಸ್ ಮತ್ತು ಹ್ಯಾಲೀಸ್ ಬ್ಲೂ ಸ್ಟೀಲ್ ಸಂಸ್ಥೆಗೆ ದೊರೆತಿದೆ.ಹ್ಯಾಲೀಸ್ ಸಂಸ್ಥೆ ತನ್ನ ಉತ್ಪನ್ನಗಳನ್ನು ದಕ್ಷಿಣ ಆಪ್ರಿಕಾದ ವಿವಿಧ ದೇಶಗಳಿಗೆ ರಫ್ತು ಮಾಡುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


0 Comments