ಬಳ್ಳಾರಿ ಸೆ 11: ಜೆಸಿಐ ಬಳ್ಳಾರಿ ಸ್ಟೀಲ್ ಸಿಟಿ ಘಟಕದ ವತಿಯಿಂದ ನಗರದಲ್ಲಿ ಬಂದನ್ ಜೆಸಿಐ ಸಪ್ತಾಹ ಆಚರಿಸಲಾಯಿತು. ಮೊದಲ ದಿನ ಎಸ್.ಪಿ ವೃತ್ತದ ಇಂಟಲ್ ಪಬ್ಲಿಕ್ ಶಾಲೆಯ ಆವರಣದಲ್ಲಿ ಜಿಲ್ಲಾ ಆಸ್ಪತ್ರೆಯ ಸಹಯೋಗದೊಂದಿಗೆ ಅಔಗಿIಆ-19 ವಾಕ್ಸಿನೇಷನನ್ನು ಹಾಕಿಸಲಾಯಿತು ಹಾಗೂ ಉಚಿತ ಮುಖಗವಸುಗಳನ್ನು ವಿತರಿಸುವುದರ ಜೊತೆಗೆ ಕೊರೋನಾ ಸಮಸ್ಯೆಯ ಜವಾಬ್ದಾರಿಯನ್ನು ಸಾರ್ವಜನಿಕರಿಗೆ ತಿಳಿಸಲಾಯಿತು.ಎರಡನೇ ದಿನದಲ್ಲಿ ಪ್ರತಿಷ್ಠಿತ ಘಟಕ ಜೆಸಿಐ ಬಳ್ಳಾರಿ ಸ್ಟೀಲ್ ಸಂಘಟನೆಗೆ ಯುವ ಸದಸ್ಯರಿಗೆ ಮತ್ತು ಹಿರಿಯ ಸದಸ್ಯರಿಗೆ ಸದಸ್ಯತ್ವ ನೀಡುವುದರ ಮೂಲಕ ಸ್ವಾಗತಿಸಲಾಯಿತು.
ಸದೃಢ ಸಮಾಜ ನಿರ್ಮಾಣಕ್ಕೆ ಯುವ ಜನತೆಯಲ್ಲಿ ಗುಣಾತ್ಮಕ ಬದಲಾವಣೆ ಸೃಷ್ಟಿಸಲು ಸದಸ್ಯರ ಪಾತ್ರವಿದೆ ಹಾಗೂ ಪ್ರತಿಯೊಬ್ಬರಿಗೂ ನಿರಂತರವಾಗಿ ಕಲಿಯಲು ಜೆಸಿಐ ಸಂಸ್ಥೆ ಅಕ್ಷಯಪಾತ್ರೆ ಇದ್ದಂತೆ ಎಂದು ಹಿರಿಯ ಸದಸ್ಯರು ಹಾಗೂ ಸುಧಾಕರ್ ಪೈಪ್ಸ್ ಮಾಲಿಕರಾದ ಜೆ.ಎಫ್.ಎಸ್.ಸುಧಾಕರವರು ಸದಸ್ಯರನ್ನು ಕುರಿತು ಮಾತನಾಡಿದರು. ಈ ಮಹತ್ವದ ಎರಡನೇ ದಿನದ ಸಭೆಯಲ್ಲಿ ಅಧ್ಯಕ್ಷರು ಜೆಸಿ.ಮಂಜುನಾಥ ಎಲ್ಲರನ್ನು ಸ್ವಾಗತಿಸಿದರು.
ನಿಕಟಪೂರ್ವ ಅಧ್ಯಕ್ಷರಾದ ಜೆಸಿ.ಮಲ್ಲಿಕಾರ್ಜುನ ರವರು ಹೊಸ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು. ಇದೇ ಸಂದರ್ಭದಲ್ಲಿ ಹಿರಿಯರಾದ ಜೆಸಿ.ರಾಘವೇಂದ್ರ ಅರಸ್, ಜೆ.ಎಫ್.ಎಂ.ವಟ್ಟಮ್ ಆದಿತ್ಯ,ಜೆಸಿ.ದಾಮೋದರ್, ಜೆಸಿ.ಪವನ್ ಕುಮಾರ್,ಜೆಸಿ.ವಿಶ್ವನಾಥ ಮತ್ತು 2021ರ ಉತ್ಕರ್ಷ ತಂಡ ಹಾಗೂ ಜೆಸಿಐ ಬಳ್ಳಾರಿ ಸ್ಟೀಲ್ ಸಿಟಿ ಸಂಘಟನೆಯ ಸರ್ವ ಸದಸ್ಯರು ಹಾಜರಿದ್ದರು. ಎರಡನೇ ದಿನದ ಕಾರ್ಯಕ್ರಮದ ನಿರ್ದೇಶಕರಾದ ಜೆಸಿ.ಸೋಮಶೇಖರ್ ಕಾರ್ಯಕ್ರಮ ಆಯೋಜಿಸಿದರು, ಜಂಟಿ ಕಾರ್ಯದರ್ಶಿ ಜೆಸಿ.ಸಂದೀಪ್ ವಂದನಾರ್ಪಣೆ ಮಾಡಿದರು.


0 Comments