Ticker

6/recent/ticker-posts

Ad Code

Responsive Advertisement

ಕಲ್ಯಾಣ ಕರ್ನಾಟಕ ಎಲ್ಲ ರೀತಿಯಲ್ಲೂ ನಿರ್ಲಕ್ಷಿತ ವಾಗಿರುವುದು ಕಣ್ಣಿಗೆ ಕಾಣಿಸುವ ನಗ್ನ ಸತ್ಯ.

ಬಳ್ಳಾರಿ ಸೆ 27. ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಅಭಿವೃದ್ಧಿಯಾಗಬೇಕಾದರೆ ನಾವೆಲ್ಲರೂ ಒಗ್ಗೂಡುವುದು ಅನಿವಾರ್ಯವಾಗಿತ್ತು. ಅಂತೆಯೇ ಅನೇಕ ತಿಂಗಳುಗಳ ಪರಿಶ್ರಮದಿಂದ ದಿನಾಂಕ 25 ಮತ್ತು 26 ರಂದು ಗದಗ ನಗರದಲ್ಲಿ ಗದಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಮುಂದಾಳತ್ವದಲ್ಲಿ ಪ್ರಪ್ರಥಮವಾಗಿ ಉತ್ತರ ಕರ್ನಾಟಕ ಜಿಲ್ಲಾ ವಾಣಿಜ್ಯೋದ್ಯಮ ಸಂಘಗಳ ಸಮ್ಮೇಳನವನ್ನು ಆಯೋಜಿಸಲಾಗಿತ್ತು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ಬೇಡಿಕೆಗಳು ಈಡೇರಬೇಕಾದರೆ ಪ್ರಜಾಪ್ರತಿನಿಧಿಗಳ ಉಪಸ್ಥಿತಿ ಅವಶ್ಯಕ ಅಂತೆಯೇ, ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ರಾಜ್ಯದ ಸಚಿವರುಗಳಾದ ಮುರುಗೇಶ್ ನಿರಾಣಿ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ಮತ್ತು ಇನ್ನು ಅನೇಕ ಗಣ್ಯ ಮಾನ್ಯರು ಈ ಸಭೆಯಲ್ಲಿ ಉಪಸ್ಥಿತರಿದ್ದರು. ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಮತ್ತು ಈ ಭಾಗದ ಸಮಸ್ಯೆಗಳನ್ನು ಮಾನ್ಯರ ಮುಂದೆ ಪ್ರಸ್ತುತಪಡಿಸಲು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳು ಸಿದ್ಧಪಡಿಸಿದ ಮನವಿ ಪತ್ರವನ್ನು ಸಲ್ಲಿಸಲಾಯಿತು. ಸಭೆಯಲ್ಲಿ ಉಪಸ್ಥಿತರಿದ್ದ ರಾಜ್ಯ ಹಾಗೂ ಕೇಂದ್ರದ ಸಚಿವರುಗಳು ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಸಮಸ್ಯೆಗಳನ್ನು ಆಲಿಸಿ ಅತ್ಯಂತ ಶೀಘ್ರವಾಗಿ ಈ ಭಾಗದ ಸಮಸ್ಯೆಗಳನ್ನು ಬಗೆಹರಿಸಿ ಅಭಿವೃದ್ಧಿಯ ಕಡೆಗೆ ಕೊಂಡೊಯ್ಯುವುದಾಗಿ ತಿಳಿಸಿದರು. ಸಮಾರೋಪ ಸಮಾರಂಭಕ್ಕೆ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ಆಗಮಿಸಿದ್ದರು. ನಮ್ಮೆಲ್ಲರ ಹೆಮ್ಮೆ ಎಂದರೆ ಶ್ರೀಯುತರು ಉತ್ತರ ಕರ್ನಾಟಕದ ಭಾಗದವರಾಗಿದ್ದು, ಸಮಸ್ಯೆಯ ಮನವರಿಕೆ ಅತ್ಯಂತ ಅನಾಯಸವಾಗಿ ಸಮಸ್ಯೆ ಹಾಗೂ ಬೇಡಿಕೆಗಳ ಪರಿಚಯ ಮಾಡಿಕೊಡಲಾಯಿತು. ಸಮ್ಮೇಳನದಲ್ಲಿ ಮುಖ್ಯವಾಗಿ ಪ್ರಸ್ತಾಪಿಸಿದ ವಿಷಯವೆಂದರೆ ಬೆಂಗಳೂರು, ಮೈಸೂರು ಮತ್ತು ಕರಾವಳಿ ಪ್ರಾಂತ್ಯಕ್ಕೆ ನೀಡಿದಂತಹ ಆದ್ಯತೆಯನ್ನು ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗಕ್ಕೆ ತಪ್ಪದೇ ನೀಡಬೇಕು. 

ಬೆಂಗಳೂರು-ಮೈಸೂರು ಭಾಗದಲ್ಲಿ ಅಸ್ತಿತ್ವಕ್ಕೆ ಬರುವಂತಹ ವೇಗದಲ್ಲಿ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಲ್ಲಿ ಕೈಗಾರಿಕೆಗಳು ಅಸ್ತಿತ್ವಕ್ಕೆ ಬರಬೇಕು, ಅದರ ಮೂಲಕ ನಿರುದ್ಯೋಗ ಸಮಸ್ಯೆ ಬಗೆಹರಿಯಬೇಕು. ಮೂಲಭೂತ ಸೌಕರ್ಯಗಳಾದ ಉತ್ತಮ ರಸ್ತೆ, ಶುದ್ಧ ಕುಡಿಯುವ ನೀರು, ಬೀದಿ ದೀಪಗಳು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಾಲ್ಲೂಕ ಮಟ್ಟದಲ್ಲಿ ಮತ್ತು ಜಿಲ್ಲಾ ಮಟ್ಟದಲ್ಲಿ ಉತ್ತಮ ಆರೋಗ್ಯ ಸೇವೆ ದೊರೆಯುವುದು. ಬಳ್ಳಾರಿ ನಗರದ ಬಹುದಿನಗಳ ಬೇಡಿಕೆಯಾದ ಕೃಷಿ ಕಾಲೇಜನ್ನು ಸ್ಥಾಪಿಸುವುದು ಮತ್ತು ಮಾಜಿ ಮುಖ್ಯಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪ ಅವರು ಘೋಷಿಸಿದ ಅತ್ಯಾಧುನಿಕ ಒಣಮೆಣಸಿನಕಾಯಿ ಮಾರುಕಟ್ಟೆಯನ್ನು ಸ್ಥಾಪಿಸುವುದು ಮತ್ತು ವ್ಯಾಪಾರ ವ್ಯವಹಾರ ಕ್ಷಿಪ್ರಗತಿಯಲ್ಲಿ ಅಭಿವೃದ್ಧಿಯಾಗಬೇಕಾದರೆ ಅದಕ್ಕೆ ಅವಶ್ಯಕವಾಗಿರುವ ವಿಮಾನಯಾನ ಸೇವೆಯನ್ನು ಬಳ್ಳಾರಿ ನಗರದಲ್ಲಿ ಆರಂಭಿಸಬೇಕು ಎಂಬ ಹತ್ತು ಹಲವು ಬೇಡಿಕೆಗಳನ್ನು ಮನವಿ ಪತ್ರದ ಮೂಲಕ ಸಲ್ಲಿಸಲಾಯಿತು. ಸಮ್ಮೇಳನದ ಮೊದಲ ದಿನದಂದು ಪ್ರತಿಷ್ಠಿತರಿಗೆ ಸನ್ಮಾನಗಳ ಕಾರ್ಯಕ್ರಮ ಏರ್ಪಡಿಸಲಾಗಿತು.್ತ ಈ ಕಾರ್ಯಕ್ರಮದಲ್ಲಿ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಸಿ.ಶ್ರೀನಿವಾಸ್ ರಾವ್ ಮತ್ತು ಗೌರವ ಕಾರ್ಯದರ್ಶಿಗಳಾದ ಯಶ್ವಂತ್‌ರಾಜ, ನಾಗಿರೆಡ್ಡಿ ಅವರಿಗೆ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಬಳ್ಳಾರಿ ಜಿಲ್ಲೆ ಕೊಟ್ಟೂರು ತಾಲೂಕಿನ ಟಿ. ಎಂ ಪೂವಯ್ಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಬ್ಲಾಸಮ್ ಶವರ್ಸ್ ಆಗ್ರೋ ಇವರನ್ನು ಅತ್ಯುತ್ತಮ ಕೈಗಾರಿಕೋದ್ಯಮಿ ಪ್ರಶಸ್ತಿಗೆ ಸನ್ಮಾನಿಸಲಾಯಿತು. 

ಕೊಟ್ಟೂರಿನಲ್ಲಿ ಉದ್ಯಮವನ್ನು ಆರಂಭಿಸಿ ನೇರವಾಗಿ ಸಾವಿರ ಕಾರ್ಮಿಕರನ್ನು ಹೂಂದಿದ್ದು ಪರ್ಯಾಯವಾಗಿ ಉದ್ಯಮವನ್ನು ಅವಲಂಬಿತವಾಗಿ, 5000 ಕರ್ಮಿಕರು ತಮ್ಮ ನಿತ್ಯ ಜೀವನವನ್ನು ನಡೆಸುತ್ತಿದ್ದಾರೆ, ಇಂತಹ ಮೇರು ವ್ಯಕ್ತಿಗೆ ಸಭೆಯಲ್ಲಿ ಸನ್ಮಾನಿಸಲಾಯಿತು. ನಂತರದಲ್ಲಿ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಖಜಾಂಚಿಗಳು ಮತ್ತು ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಪೀ. ಪಾಲಣ್ಣ ಇವರನ್ನು ಉತ್ಕೃಷ್ಟ ವರ್ತಕರು ಎಂದು ಸನ್ಮಾನಿಸಲಾಯಿತು. ಶ್ರೀಯುತರು ನಗರದ ಕೃಷಿಉತ್ಪನ್ನ ಮಾರುಕಟ್ಟೆಯ ಜನಪ್ರಿಯ ವರ್ತಕರಾಗಿದ್ದು ಬಹುತೇಕ ಎಪಿಎಂಸಿ ವ್ಯವಹಾರವು ಇವರ ಮುಖೇನ ನಡೆಯುತ್ತದೆ ಎಂದು ತಿಳಿಸಿದರು. ಈ ಸಮ್ಮೇಳನದಲ್ಲಿ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಿAದ ಸಿ. ಶ್ರೀನಿವಾಸ ರಾವ್, ಅಧ್ಯಕ್ಷರು; ಯಶವಂತರಾಜ, ನಾಗಿರೆಡ್ಡಿ, ಗೌರವಕಾರ್ಯದರ್ಶಿಗಳು; ಬಿ ಮಹರುದ್ರಗೌಡ, ಉಪಾಧ್ಯಕ್ಷರು; ಏ. ಮಂಜುನಾಥ, ಉಪಾಧ್ಯಕ್ಷರು; ಎಸ್. ದೊಡ್ಡನಗೌಡ, ಜಂಟಿ ಕಾರ್ಯದರ್ಶಿಗಳು, ಡಾಕ್ಟರ್ ಡಿ. ಎಲ್. ರಮೇಶ್ ಗೋಪಾಲ್, ಮಾಜಿ ಅಧ್ಯಕ್ಷರು, ವಿ ರಾಮಚಂದ್ರ , ಚೇರ್ಮನ್ ಎಪಿಎಂಸಿ ಕಮಿಟಿ,  ಟಿ ಶ್ರೀನಿವಾಸ  ಚೇರ್ಮನ್ ಸಿಎಸ್‌ಆರ್ ಕಮಿಟಿ, ಟಿ ಶ್ರೀನಿವಾಸರಾವ್, ಚೇರ್ಮನ್, ಪತ್ರಿಕೆ ಮತ್ತು ಮಾಧ್ಯಮ, ಕೆ. ಸಿ. ಸುರೇಶ್ ಬಾಬು ಕಾರ್ಯಕಾರಿ ಸಮಿತಿ ಸದಸ್ಯರು, ಮಲ್ಲಿಕಾರ್ಜುನ್ ಮಸ್ಕಿ, ಚೇರ್ಮನ್, ಮ್ಯಾಕ್ಸಿನ್ ಕಮಿಟಿ, ಕೆ ರಾಮಾಂಜನೇಯಲು, ವಿಶೇಷ ಆಹ್ವಾನಿತರು , ಪಾಲ್ಗೊಂಡಿದ್ದರು.



Post a Comment

0 Comments

Ad Code

Responsive Advertisement