ಸೆಪ್ಟೆ0ಬರ್ 14 ರಂದು ಭಾರತ ಒಕ್ಕೂಟ ಸರ್ಕಾರ ನಡೆಸುವ ಹಿಂದಿ ದಿವಸ್ ಆಚರಣೆಗೆ ಕರ್ನಾಟಕ ಜನಸೈನ್ಯ ತೀವ್ರವಾಗಿ ವಿರೋಧಿಸಿ ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಏಕಕಾಲಕ್ಕೆ ರೈಲ್ವೆ ನಿಲ್ದಾಣಗಳ ಮುಂಭಾಗದಲ್ಲಿ ಕರ್ನಾಟಕ ಜನಸೈನ್ಯದ ರಾಜ್ಯಾಧ್ಯಕ್ಷರಾದ ಕೆ.ರ‍್ರಿಸ್ವಾಮಿ ಅವರ ನೇತೃತ್ವದಲ್ಲಿ ಪ್ರತಿಭಟನೆಗಳನ್ನು ನಡೆಸಿ, ರೈಲ್ವೇ ನಿಲ್ದಾಣದ ಮುಖ್ಯಸ್ಥರ ಮೂಲಕ ರಾಷ್ಟçಪತಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಕೇಂದ್ರ ಸರ್ಕಾರದ ಹಿಂದಿ ದಿವಸ್ ಆಚರಣೆಯನ್ನು ಕರ್ನಾಟಕ ಜನಸೈನ್ಯ ತೀವ್ರವಾಗಿ ಖಂಡಿಸುತ್ತದೆ. ದಕ್ಷಿಣ ಭಾರತ ಅದರಲ್ಲೂ ಕರ್ನಾಟಕದ ಕನ್ನಡಿಗರ ಮೇಲೆ ಮೇಲೆ ನಡೆಯುತ್ತಿರುವ ಈ ದಬ್ಬಾಳಿಕೆಯನ್ನು ತೀವ್ರವಾಗಿ ವಿರೋಧವನ್ನು ವ್ಯಕ್ತಪಡಿಸಿ, ಕನ್ನಡಿಗರ ಮತ್ತು ದೇಶದ ವಿವಿಧ ರಾಜ್ಯಗಳಿಂದ ಸಂಗ್ರಹವಾಗಿರುವ ತೆರಿಗೆ ಹಣದಲ್ಲಿ ನಡೆಸಲಾಗುವ ಹಿಂದಿ ದಿವಸ್ ಆಚರಣೆ ಕನ್ನಡಿಗರಿಗೆ ಬೇಕಾಗಿಲ್ಲ. ಭಾಷಾ ವೈವಿಧ್ಯದ ಭಾರತದಲ್ಲಿ ಒಂದು ಭಾಷೆಯನ್ನು ಹೊತ್ತು ಮೆರೆಸುವುದರ ಅಗತ್ಯವಿಲ್ಲ. ಭಾರತೀಯ ಭಾಷೆಗಳಲ್ಲಿ ಹಿಂದಿಯೂ ಒಂದು. ಅದಕ್ಕೆ ವಿಶೇಷ ಮಹತ್ವ, ಪ್ರೋತ್ಸಾಹ ನೀಡುವುದು ಅನ್ಯಾಯ. ಭಾರತದ ಸಂವಿಧಾನದ ಹದಿನಾಲ್ಕನೇ ಪರಿಚ್ಛೇದವು ಪ್ರತಿಯೊಬ್ಬ ಭಾರತೀಯನಿಗೂ ಸಮಾನತೆಯ ಹಕ್ಕನ್ನು ನೀಡುತ್ತದೆ. ಹಿಂದಿ ದಿವಸ್ ಆಚರಣೆಯ ಮೂಲಕ ಇತರ ಭಾರತೀಯ ಭಾಷೆಗಳನ್ನು ಕಡೆಗಣಿಸಿ ಇತರ ಭಾಷಿಕರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿಸುವುದು ಅಕ್ಷಮ್ಯ ಅಪರಾಧ. ಇದು ಇನ್ನು ಮೇಲಾದರೂ ನಿಲ್ಲಬೇಕಾಗಿದೆ. ಸಂವಿಧಾನದ 343ನೇ ವಿಧಿಯು ದೇಶದ ಅಧಿಕೃತ ಭಾಷೆಯ ಕುರಿತು ವಿವರಿಸುತ್ತದೆ. (ಅಧಿಕೃತ ಭಾಷೆ ಎಂದರೆ ಸರ್ಕಾರದ ಹಾಗೂ ದಿನನಿತ್ಯದ ವ್ಯವಹಾರಗಳಲ್ಲಿ ಉಪಯೋಗಿಸುವ ಮತ್ತು ಕಾನೂನಾತ್ಮಕ ವಿಷಯಗಳಲ್ಲಿ ಬಳಸುವ ಭಾಷೆ). ಈ ವಿಧಿಯ ಪ್ರಕಾರ, ದೇವನಾಗರಿ ಲಿಪಿಯಲ್ಲಿರುವ ಹಿಂದಿ ಭಾಷೆಯು ಅಧಿಕೃತ ಭಾಷೆ. ಆದರೆ, ಈ ಭಾಷೆಯ ಜೊತೆಗೆ ಸರ್ಕಾರಿ ಉದ್ದೇಶಗಳಿಗಾಗಿ ಹಿಂದಿಯ ಜೊತೆ ಇಂಗ್ಲಿಷ್ ಭಾಷೆಯನ್ನು ಕೇಂದ್ರಾಡಳಿತ ಹಾಗೂ ಸಂಸತ್ತಿನಲ್ಲಿ ಅಧಿಕೃತ ಭಾಷೆಯನ್ನಾಗಿ ಸಂವಿಧಾನ ಆರಂಭದ (26ನೇ ಜನವರಿ 1965) 15 ವರ್ಷಗಳವರೆಗೆ ಮಾತ್ರ ಮುಂದುವರೆಸಿಕೋAಡು ಹೋಗಬಹುದು (ಸಂವಿಧಾನ ನೀಡಿರುವ ಈ ಅವಧಿ 1980ಕ್ಕೆ ಮುಕ್ತಾಯಗೊಂಡಿದೆ). 15 ವರ್ಷ ಪೂರ್ಣಗೊಂಡ ಮೇಲೆ ಭಾಷೆಗೆ ಸಂಬAಧಿಸಿದAತೆ ಒಂದು ಆಯೋಗವನ್ನು ರಾಷ್ಟ್ರಪತಿಯವರು ರಚಿಸಬೇಕು. ಅದರಲ್ಲಿ ಹಿಂದಿ ಸೇರಿದಂತೆ ಆಯಾ ರಾಜ್ಯಗಳಲ್ಲಿ ಬಳಸಬಹುದಾದ ಭಾಷೆಗಳ ಕುರಿತು ನಿರ್ಧಾರ ತೆಗೆದುಕೊಳ್ಳಬೇಕು. ಇಂಗ್ಲಿಷ್ ಬಿಟ್ಟು ಇತರ ಭಾಷೆಗಳಿಗೆ ಹೆಚ್ಚಿನ ಪ್ರೋತ್ಸಾಹ ಕೊಡುವುದು ಹಾಗೂ ಅಧಿಕೃತ ಬಳಕೆಗಾಗಿ ಇಂಗ್ಲಿಷ್ ಭಾಷೆಗೆ ಆದಷ್ಟು ಕಡಿವಾಣ ಹಾಕುವುದು ಈ ಆಯೋಗದ ಮುಖ್ಯ ಉದ್ದೇಶ ಆಗಿರಬೇಕು ಎಂದು 344ನೇ ವಿಧಿಯಲ್ಲಿ ಉಲ್ಲೇಖಿಸಲಾಗಿದೆ. ಇದರಲ್ಲಿ ಹಿಂದಿಯ ಜೊತೆಗೆ ಬೇರೆ ಬೇರೆ ರಾಜ್ಯಗಳ 22 ಭಾಷೆಗಳನ್ನು ಅಧಿಕೃತ ಭಾಷೆಗಳು ಎಂದು ವಿವರಿಸಲಾಗಿದೆ. ರಾಜ್ಯಗಳು ಪರಸ್ಪರ ವ್ಯವಹರಿಸುವಾಗ ಅಥವಾ ಕೇಂದ್ರದ ಜೊತೆ ವ್ಯವಹಾರ ಮಾಡುವ ಸಂದರ್ಭಗಳಲ್ಲಿ ಈ 22 ಭಾಷೆಗಳನ್ನು ಬಳಸಬಹುದು ಎಂದು 344(1)ರಲ್ಲಿ ಸ್ಪಷ್ಟಪಡಿಸಲಾಗಿದೆ. ಅದರಲ್ಲಿ ಕನ್ನಡ, ತೆಲುಗು, ತಮಿಳು, ಮರಾಠಿ, ಮಲಯಾಳಂ, ಗುಜರಾತಿ ಇತ್ಯಾದಿ ಭಾಷೆಗಳಿವೆ. ಹೀಗೆ ವ್ಯವಹಾರಕ್ಕೆ ಸಂಬAಧಿಸಿದAತೆ ಒಂದು ರಾಜ್ಯಕ್ಕೆ ಅಧಿಕೃತ ಭಾಷೆ ಎಂದು ಘೋಷಿಸುವಾಗ ಹಿಂದಿ ಬಾರದ ವ್ಯಕ್ತಿಗಳನ್ನೂ ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದು ಇದೇ ವಿಧಿಯ ‘ಇ‘ ಉಪವಿಧಿಯಲ್ಲಿ ಉಲ್ಲೇಖಿಸಲಾಗಿದೆ. ಆದ್ದರಿಂದ ಹಿಂದಿಯು ಅಧಿಕೃತ ಭಾಷೆ ಎಂದಿದೆಯೇ ಹೊರತು ರಾಷ್ಟ್ರೀಯ ಭಾಷೆ ಎಂದು ಸಂವಿಧಾನದಲ್ಲಿ ಉಲ್ಲೇಖವಾಗಿಲ್ಲ.
ಹಿಂದಿ ನುಡಿಯೊಂದನ್ನು ಇಡೀ ದೇಶದಲ್ಲಿ ಬೆಳೆಸುವ ಪ್ರಮುಖ ಉದ್ದೇಶದಿಂದಲೇ ಹಿಂದಿ ಭಾಷಿಕರಿಗೆ ಎಲ್ಲ ರಾಜ್ಯಗಳಲ್ಲೂ ಅಗತ್ಯ ಸೇವೆಗಳನ್ನು ಕಲ್ಪಿಸುವುದೇ ಆಗಿದೆ. ಇದರ ಮೂಲಕ ಇತರ ಭಾಷಿಕರಿಗೆ ಇಲ್ಲದ ಸೌಲಭ್ಯ ಹಿಂದಿ ಭಾಷಿಕರಿಗೆ ಒದಗಿಸಲಾಗುತ್ತಿದೆ. ಇದು ಸಂವಿಧಾನದ ಸಮಾನತೆಯ ಆಶಯಗಳಿಗೆ ವಿರುದ್ಧವಾಗಿದೆ. ಕೇಂದ್ರದ ಒಕ್ಕೂಟ ಸರ್ಕಾರದ ನೇತೃತ್ವವನ್ನು ಯಾವುದೇ ರಾಜಕೀಯ ಪಕ್ಷ ಹಿಡಿದರೂ ಹಿಂದಿ ಹೇರಿಕೆಯನ್ನು ಎಗ್ಗಿಲ್ಲದೆ ನಡೆಸಲಾಗುತ್ತಿದೆ. ಕಳೆದ ದಶಕಗಳಿಂದಲೂ ಕರ್ನಾಟಕ ಜನಸೈನ್ಯ ಮತ್ತು ರಾಜ್ಯದ ವಿವಿಧ ಕನ್ನಡ ಪರ ಸಂಘಟನೆಗಳು ಪ್ರತಿವರ್ಷ ಹಿಂದಿ ದಿವಸ್ ಆಚರಣೆಯನ್ನು ವಿರೋಧಿಸುತ್ತಾ ಬಂದಿದ್ದರೂ, ಕೇಂದ್ರ ಸರ್ಕಾರ ಹಿಂದಿ ದಿವಸ್ ಆಚರಣೆ ಮಾಡುವುದನ್ನು ನಿಲ್ಲಸಲಾಗಿಲ್ಲ. ಭಾರತದ ಎಲ್ಲ ಭಾಷೆಗಳಿಗೂ ಸಮಾನ ಸ್ಥಾನಮಾನ ದೊರೆಯುವವರೆಗೆ ಈ ಪ್ರತಿರೋಧ ಮುಂದುವರೆಯಲಿದೆ. ಭಾರತ ಸಂವಿಧಾನದ 343 ರಿಂದ 351 ವರೆಗಿನ ಪರಿಚ್ಛೇದಗಳಿಗೆ ತಿದ್ದುಪಡಿ ತಂದು, ಹಿಂದಿ ಭಾಷೆಗೆ ನೀಡಲಾಗಿರುವ ವಿಶೇಷ ಅವಕಾಶಗಳನ್ನು ಈ ಕೂಡಲೇ ಕಿತ್ತುಹಾಕಬೇಕು. ಈ ಪರಿಚ್ಛೇದಗಳನ್ನು ತೆಗೆದುಹಾಕಿದಾಗ ಮಾತ್ರ ಭಾರತೀಯರೆಲ್ಲರೂ ಸಮಾನರಾಗಲು ಸಾಧ್ಯವೇ ಇಲ್ಲ. ಭಾಷೆಯ ಹೆಸರಿನ ತಾರತಮ್ಯ ಕೊನೆಗೊಳ್ಳಲೇಬೇಕಾಗಿದೆ. ಹಿಂದಿ ಹೇರಿಕೆಯ ಪರಿಣಾಮವಾಗಿ ಕೇಂದ್ರ ಸರ್ಕಾರದ ಉದ್ಯೋಗಗಳಾದ ಐಎಎಸ್, ಐಪಿಎಸ್, ಬ್ಯಾಂಕಿAಗ್, ನೌಕಾಪಡೆ, ರೈಲ್ವೇ, ವಿಮಾನಯಾನ, ಭಾರತೀಯ ವಿಮಾ ನಿಗಮ ಮತ್ತು ರಕ್ಷಣಾ ವಲಯಗಳ ಉದ್ಯೋಗಗಳು ಹಿಂದಿ ಭಾಷಿಕರ ಪಾಲಾಗುತ್ತಿವೆ. ಕನ್ನಡದ ಮಕ್ಕಳು ನಿರುದ್ಯೋಗದ ಸಮಸ್ಯೆ ಎದುರಿಸುವಂತಾಗಿದೆ. ದಕ್ಷಿಣ ಭಾರತ ನಿರುದ್ಯೋಗ ಯುವಕರು ಹಿಂದಿಯಲ್ಲಿ ಪರೀಕ್ಷೆಯನ್ನು ಎದುರಿಸಲು ಕಷ್ಟಸಾಧ್ಯವಾಗುತ್ತಿದೆ. ಕರ್ನಾಟಕಕ್ಕೆ ಉತ್ತರದ ರಾಜ್ಯಗಳಿಂದ ವಲಸೆ ವಿಪರೀತವಾಗಿದ್ದು, ಕನ್ನಡಿಗರ ಅಸ್ಮಿತೆ, ಸಂಸ್ಕೃತಿ, ಪರಂಪರೆ ಮತ್ತು ಬದುಕು ಅಪಾಯಕ್ಕೆ ಸಿಲುಕಿದೆ.
ತಂತ್ರಜ್ಞಾನ ಮುಂದುವರೆದಿರುವುದರಿAದ ಭಾರತದಲ್ಲಿ ಬಹುಭಾಷೆಗಳನ್ನು ಆಡಳಿತ ಭಾಷೆಗಳನ್ನಾಗಿ ಹೊಂದುವುದಕ್ಕೆ ಅವಕಾಶವಿದೆ. ಹಿಂದಿ, ಇಂಗ್ಲಿಷ್ ಮಾತ್ರವಲ್ಲದೇ ದೇಶದ ಎಲ್ಲ ಭಾಷೆಗಳನ್ನೂ ಆಡಳಿತ ಭಾಷೆಗಳನ್ನಾಗಿ ಮಾಡಬೇಕು. ಹಿಂದಿಯನ್ನರು ಶ್ರೇಷ್ಠ, ಉಳಿದವರು ಕನಿಷ್ಠ ಎಂಬ ಧೋರಣೆ ತೊಲಗಬೇಕು.
ಹಕ್ಕೊತ್ತಾಯಗಳು:-ರಾಜ್ಯದ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸತಕ್ಕದ್ದು. ಜಾಗೃತಿ ಮೂಡಿಸುವ ಸಂದೇಶ ಘೋಷಣೆಗಳಲ್ಲಿ ಕನ್ನಡ ಭಾಷೆಗೆ ಪ್ರಥಮ ಆದ್ಯತೆ ನೀಡಬೇಕು,ಮುಂಗಡ ಟಿಕೆಟ್‌ಗಳ ಅರ್ಜಿಗಳಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡಬೇಕು.ರೈಲ್ವೆ ನಿಲ್ದಾಣದ ಸ್ವಾಗತ ಫಲಕಗಳಲ್ಲಿ ತ್ರಿಭಾಷಾನೀತಿಯನ್ನು ತೊಲಗಿಸಿ, ದ್ವಿಭಾಷೆಯನ್ನು ಕನ್ನಡ ಮತ್ತು ಆಂಗ್ಲ ಮಾತ್ರ ಇರಬೇಕು,ರೈಲ್ವೆ ಉದ್ಯೋಗಗಳಲ್ಲಿ ಪ್ರಮುಖ ಅಧಿಕಾರಿಗಳು ಕನ್ನಡದವರನ್ನು ನೇಮಕ ಮಾಡಬೇಕು, ರೈಲ್ವೆ ಇಲಾಖೆಯಲ್ಲಿ ರಾಜ್ಯದ ಪಾಲುದಾರರಾಗಿ ಗುತ್ತಿಗೆದಾರರಿಗೆ ಕನ್ನಡಿಗರಿಗೆ ಮೊದಲ ಆದ್ಯತೆ ನೀಡಬೇಕು, ರೈಲ್ವೆ ಟಿಕೆಟ್‌ನಲ್ಲಿ ಕರ್ನಾಟಕ ರಾಜ್ಯದಲ್ಲಿ ಟಿಕೆಟ್ ಪಡೆದಾಗ ದ್ವಿಭಾಷಾ ನೀತಿಯಲ್ಲಿ ಇರಬೇಕು.ಕೇಂದ್ರ ಸರ್ಕಾರದ ಉದ್ಯೋಗಗಳಾದ ಐಎಎಸ್, ಐಪಿಎಸ್, ಬ್ಯಾಂಕಿAಗ್, ನೌಕಾಪಡೆ, ರೈಲ್ವೇ, ವಿಮಾನಯಾನ, ಭಾರತೀಯ ವಿಮಾ ನಿಗಮ ಮತ್ತು ರಕ್ಷಣಾ ವಲಯಗಳ ಪರೀಕ್ಷೆಗಳಲ್ಲಿ ಕನ್ನಡ ಭಾಷೆ / ದ್ವಿಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಬಿ.ಹೊನ್ನೂರಪ್ಪ, ಎಂ.ಚೆAಚಯ್ಯ, ಫಾರೂಕ್ ಷಫಿ, ಫಯಾಜ್ ಭಾಷ, ಶೇಖರ್ (ಚಿಟ್ಟಿ), ನಾಸೀರ್, ಆಯೇಷಾ ಸಿದ್ಧಿಕಾ, ಶ್ರೀನಿವಾಸರೆಡ್ಡಿ, ಜಾಧವ್, ರಮೇಶ್ ಹಲಕುಂದಿ, ಹೊನ್ನಳ್ಳಿ ಹಸೇನ್, ಶಿವಕುಮಾರ್ ನಾಯಕ್, ಕ್ಯಾಸೆಟ್ ಕುಮಾರ್, ಇಬ್ರಾಹಿಂ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.


0 Comments