Ticker

6/recent/ticker-posts

Ad Code

Responsive Advertisement

BELLARY: ಆರ್.ವೈ.ಎಂ.ಇ.ಸಿ.ಯಲ್ಲಿ “ ಇನ್ಟಿಟ್ಯೂಷನ್ ಇನ್ನೋವೇಷನ್ ಕೌನ್ಸಿಲ್

ಬಳ್ಳಾರಿ .ಬಳ್ಳಾರಿ ನಗರದ ವೀ.ವಿ.ಸಂಘದ ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆ ಎನಿಸಿಕೊಂಡ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸ್ತಾಪಿಸಿರುವ , ಮಹಾವಿದ್ಯಾಲಯದ "ಇನ್ಟಿಟ್ಯೂಷನ್ ಇನ್ನೋವೇಷನ್  ಕೌನ್ಸಿಲ್ - ಸಂಶೋಧನೆ,ಆವಿಷ್ಕಾರ ಕೇಂದ್ರ" ಕೇಂದ್ರ ಸರಕಾರದ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಇಲಾಖೆ, ಇನ್ನೋವೇಷನ್ ಸೆಲ್ನಿಂದ ಮಾನ್ಯತೆ ಪಡೆದಿರುತ್ತದೆ ಎಂದು ತಿಳಿಸಲು ಸಂತೋಷವಾಗುತ್ತಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ  ಅಲ್ಲಂ ಚನ್ನಪ್ಪ "ದಿನೇ ದಿನೇ ಬದಲಾಗುತ್ತಿರುವ ತಂತ್ರಜ್ಞಾನಗಳ ಜೊತೆಜೊತೆಗೆ ವಿದ್ಯಾರ್ಥಿಗಳ ಜ್ಞಾನವೂ ವೃದ್ಧಿಯಾಗಬೇಕಿದೆ. 

ಕೇವಲ ಪುಸ್ತಕದಅಧ್ಯಯನಕ್ಕಷ್ಟೇ ಸೀಮಿತವಾಗದೆ, ಕೈಗಾರಿಕೆಗಳಲ್ಲಾಗುವ ಯಂತ್ರಗಳ ಆವಿಷ್ಕಾರಗಳ ಕುರಿತು ನಿರಂತರ ತಿಳುವಳಿಕೆ ಅಗತ್ಯವಾಗಿದೆ. ಈಗಿನ  ಸಂಸ್ಥೆಯೊAದಿಗಿನ ನಮ್ಮ ವಿದ್ಯಾರ್ಥಿಗಳು ಹಾಗು ಅವರಿಗೆ ಮಾರ್ಗದರ್ಶನ ಮಾಡುವ ಬೋಧಕ ಸಿಬ್ಬಂದಿ, ಮುಂದಿನ ದಿನಗಳಲ್ಲಿ ಸಮಾಜಕ್ಕೆ ಮಹತ್ವದ ಫಲವನ್ನು ನೀಡಲಿದೆ ಎಂದು ಆಶಯ ವ್ಯಕ್ತಪಡಿಸಿದರು.  ವಿ.ವಿ.ಸಂಘದ ಅಧ್ಯಕ್ಷರಾದ   ಗುರುಸಿದ್ದಸ್ವಾಮಿ, ಉಪಾಧ್ಯಕ್ಷರಾದ  ಅಲ್ಲಂ ಚನ್ನಪ್ಪ, ಕಾರ್ಯದರ್ಶಿ  ಬಿ.ವಿ. ಬಸವರಾಜ್, ಸಹಕಾರ್ಯದರ್ಶಿ ಜೆ. ಶಾಂತವೀರನ ಗೌಡರು, ಕೋಶಾಧಿಕಾರಿ ಗೋನಾಳ್ ರಾಜಶೇಖರ್ ಗೌಡರು. ಶುಭಹಾರೈಸಿದರು.

ಮಹಾವಿದ್ಯಾಲಯದ ಪ್ರಾಂಶುಪಾಲರಾದ   ಡಾ|| ಟಿ. ಹನುಮಂತರೆಡಿ. ,  ಉಪಪ್ರಾಂಶುಪಾಲರಾದ ಡಾ|| ಸವಿತಾ ಸೊನೋಳಿ, ಡೀನ್-ಅಕಾಡಮಿಕ್  ಡಾ|| ಹೆಚ್.ಗಿರೀಶ, ಡೀನ್-ಪರೀಕ್ಷಾ  ಡಾ|| ಬಿ.ಶ್ರೀಪತಿ ಹಾಗು ಇನ್ಟಿಟ್ಯೂಷನ್ ಇನ್ನೋವೇಷನ್  ಕೌನ್ಸಿಲ್ ನ ಅಧ್ಯಕ್ಷರಾದ ಡಾ|| ಕೋರಿ ನಾಗರಾಜ್, ತಂಡದ ಸದಸ್ಯರು- ಡಾ|| ನಾಗರಾಜ, ಡಾ|| ಶ್ರೀಶೈಲ, ಡಾ|| ಚಿದಾನಂದ, ಡಾ|| ಕೊಟ್ರೇಶ್, ಡಾ|| ವೀರಭದ್ರಪ್ಪ ಅಲಗೂರ್, ಶ್ರೀಮತಿ ಶ್ವೇತಾವೆಂಕಟರಮಣ, ಶ್ರೀಮತಿ ರಾಜೇಶ್ವರಿ, ವಿ.ಶಿವಕುಮಾರ್, ಶಿವಪ್ರಸಾದ್ ನೇತೃತ್ವದಲ್ಲಿ ರಚೆನೆಗೊಂಡ ರ‍್ಯ ನಿರ್ವಹಿಸುತ್ತಲಿದೆ.  ಎಲ್ಲಾ  ವಿಭಾಗದ ಮುಖ್ಯಸ್ಥರು, ಭೋಧಕ ಭೋಧಕೇತರ ಸಿಬ್ಬಂದಿ ವರ್ಗ ಶುಭಹಾರೈಸಿತು.



Post a Comment

0 Comments

Ad Code

Responsive Advertisement