ಬಳ್ಳಾರಿ ಸೆ 14. ಮೂಲತಃ ಕೃಷಿಕ, ಬಳಿಕ ಎಲ್ಐಸಿ ಉದ್ಯೋಗ, ನಂತರ ರಾಜಕಾರಣಕ್ಕೆ ಪ್ರವೇಶಿಸಿದ ಆಸ್ಕರ್ ಫರ್ನಾಂಡಿಸ್ ಕಾಂಗ್ರೆಸ್ನಲ್ಲಿ ಉನ್ನತ ಮಟ್ಟದ ನಾಯಕರಾಗಿದ್ದರು ಅಹಂ ಪ್ರದರ್ಶಿಸಿದವರಲ್ಲ. ಆರೋಪ ಪ್ರತ್ಯಾರೋಪ, ಟೀಕೆಗಳ ರಾಜಕಾರಣದಿಂದ ದೂರವೇ ಉಳಿದವರು ಎಲ್ಲರನ್ನು ಪ್ರೀತಿಯಿಂದ ಮಾತನಾಡಿಸುತ್ತ, ಸಜ್ಜನ ರಾಜಕಾರಣಿ ಎನಿಸಿಕೊಂಡವರು.
ಮಾಜಿ ಕೇಂದ್ರ ಸಚಿವರು, ರಾಜ್ಯಸಭಾ ಸದಸ್ಯರು ಹಾಗೂ ಕಾಂಗ್ರೆಸ್ ಹಿರಿಯ ನಾಯಕರಾದ ಮಾನ್ಯ ಆಸ್ಕರ್ ಫೆರ್ನಾಂಡಿಸ್ ರವರು, 13-09-2021 ರಂದು ವಿಧೀವಶರಾಗಿದ್ದು ಅವರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತನು ನೀಡಲಿ ಎಂದು ಪ್ರಾರ್ಥಿಸಿದರು. ಬಳ್ಳಾರಿ ಜಿಲ್ಲಾ ನಗರ ಕಾಂಗ್ರೆಸ್ ಅಧ್ಯಕ್ಷರು ಜಿ.ಎಸ್.ಮಹಮ್ಮದ್ ರಾಫೀಕ್ ರವರ ನೇತೃತ್ವದಲ್ಲಿ. ಆಸ್ಕರ್ ಫರ್ನಾಂಡಿಸ್ ರವರಿಗೆ ಮೌನಚಾರಣೆಯ ಮೂಲಕ ಭಾವಪೂರ್ಣ ಶ್ರದ್ಧಾಂಜಲಿಯನ್ನು ಬಳ್ಳಾರಿ ಜಿಲ್ಲಾ ನಗರ ಕಾಂಗ್ರೆಸ್ ಸಮಿತಿಯ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಸಂಧರ್ಭದಲ್ಲಿ ಮಾಜಿ ಜಿಲ್ಲಾ ಪಂಚಯತಿ ಸದಸ್ಯ ಮಾನಯ್ಯ ರವರು, ಬಳ್ಳಾರಿ ಜಿಲ್ಲಾ ನಗರ ಕಾಂಗ್ರೆಸ್ ಪ್ರಧನ ಕಾರ್ಯದರ್ಶಿ ಡಿ. ಅಯಾಜ್ ಅಹಮದ್ , ಕಾಂತಿ ನೋಹ ವಿಲ್ಸ್ನ್ , ಯುವ ಕಾಂಗ್ರೆಸ್ ನ ಸಮೀರ್ , ಸುರೇಶ್ ಅಲುವೇಲು , 30ನೇ ವಾರ್ಡ ವಿ. ಕುಬೇರ, ಉದಯ, ಶಿವು, ಶಂಕರ್, ಸುಬಾನ್, ವಿವೇಕ್, ಬಬು, ಜಯಣ್ಣ, ವಿ.ಗುರು, ಕಾರ್ತಿಕ್, ನಾಗರಾಜ, ವಿ.ಶ್ರೀನಿವಾಸ್, ಅಜಿತ್, ಕಾರ್ಯಕರ್ತರು ಭಾಗವಹಿಸಿದ್ದರು.


0 Comments