Ticker

6/recent/ticker-posts

Ad Code

Responsive Advertisement

SIRAGUPPA : ಮೆಣಸಿನ ಸಸಿಗೆ ನೀರು ಹರಿಸಲು ಹೋದ ಬಾಲಕನೇ ನೀರುಪಾಲು

ಬಳ್ಳಾರಿ/ಸಿರುಗುಪ್ಪ: ತಾಲ್ಲೂಕಿನ ಬೈರಾಪುರ ಗ್ರಾಮದ ಬಳಿಯ ಗಣೇಶ ನಗರದ ಏಳನೇ ತರಗತಿಯ ವಿದ್ಯಾರ್ಥಿ 13ವರ್ಷದ ಬಾಲಾಜಿ ಕೃಷಿಹೊಂಡದಲ್ಲಿ ಆಕಸ್ಮಿಕ ಕಾಲುಜಾರಿ ಮೃತಪಟ್ಟಿರುವ ದುರ್ಘಟನೆ ನಡೆದಿದೆ 

ಕಳೆದ ಒಂದೂವರೆ ವರ್ಷ ಕೊರೋನದ ಕರಿನೆರಳಲ್ಲಿ ಶಾಲೆಯ ಮುಖವನ್ನೇ ನೋಡದ ಮಕ್ಕಳು ಇದೀಗ ಶಾಲೆ ಪುನಃ ತೆಗೆಯುತ್ತಿದ್ದಂತೆ ಮತ್ತೆ ಶಾಲೆಗೆ ತೆರಳಿ ವಿದ್ಯಾರ್ಜನೆ ಮಾಡುತ್ತಿದ್ದರೂ ಪಾಲಕ ಪೋಷಕರಿಗೆ ಸಹಕರಿಸುವ ಕೆಲಸವನ್ನೂ ಅಷ್ಟೇ ಚೆನ್ನಾಗಿ ರೂಢಿಸಿ ಕೊಂಡಿದ್ದರು 

ತೆಕ್ಕಲಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬೈರಾಪುರ ಬಳಿಯ ಗಣೇಶ ನಗರದ ಗೊಲ್ಲ ಜನಾಂಗದ ಭೀಮೇಶ ಕಳೆದ ತಿಂಗಳ ಹಿಂದೆಯಷ್ಟೇ ಖರೀದಿಸಿದ್ದ  ಸುಮಾರು ಎರಡೂವರೆ ಎಕರೆ ಜಮೀನಿನಲ್ಲಿನ ಕೃಷಿ ಹೊಂಡದಿಂದ ತನ್ನ ಹೆಂಡತಿಯ ಜೊತೆಗೆ ನೀರು ತುಂಬಿಕೊಂಡು ಮೆಣಸಿನ ಸಸಿಗಳಿಗೆ ನೀರುಣಿಸುವ ಕಾಯಕ ಬೆಳಿಗ್ಗಿನಿಂದ  ಮಾಡುತ್ತಿರುತ್ತಾರೆ 

2ಗಂಡು ಮತ್ತು 1ಹೆಣ್ಣು ಮಗುವನ್ನು ಹೊಂದಿದ್ದು ಶಾಲೆಗೆ ಹೋಗಿ ಬಂದ ನಂತರ ಇಬ್ಬರು ಗಂಡು ಹುಡುಗರು ಹೊಲಕ್ಕೆ ತೆರಳಿ ತಂದೆ ತಾಯಿಗೆ ಸಹಕರಿಸಲು 13ವರ್ಷದ ಹಿರಿಯ ಮಗ ಬಾಲಾಜಿ ಕೃಷಿ ಹೊಂಡಕ್ಕೆ ಇಳಿದು ನೀರು ತುಂಬಿಸುವಾಗ ಆಕಸ್ಮಿಕವಾಗಿ ಕಾಲು ಜಾರಿ ಹೊಂಡದ ನೀರಿನಲ್ಲಿ  ಮುಳುಗಿದ್ದಾನೆ ಹೊಂಡದ ದಡದ ಮೇಲೆ ಇದ್ದ ಕಿರಿಯ 8ವರ್ಷದ ಹರಿಕೃಷ್ಣ ಕೂಗಿ ಕೊಂಡಿದ್ದಾನೆ ಹೊಲದಲ್ಲಿದ್ದ ತಂದೆ ತಾಯಿ ಮತ್ತು ತಂದೆಯ ತಮ್ಮ ಲಕ್ಷ್ಮೀಪತಿ ಇವರುಗಳು ನೀರಿಗಿಳಿದು ಹುಡುಕಾಡಿದರೂ ಬಾಲಾಜಿ ದೊರೆಯಲಿಲ್ಲ ಅಗ್ನಿಶಾಮಕ ದಳದವರಿಗೆ  ಕರೆಯಿಸಿಕೊಂಡು ಅವರುಗಳು ಹುಡುಕಿ ಮೃತದೇಹವನ್ನು ಹೊರಕ್ಕೆ ತಂದಿದ್ದಾರೆ ನಂತರ ಆಂಬ್ಯುಲೆನ್ಸ್ ಮೂಲಕ ತೆಕ್ಕಲಕೋಟೆ ಸರ್ಕಾರಿ ಆಸ್ಪತ್ರೆಗೆ ಕರೆತಂದು ಮೃತಪಟ್ಟಿರುವ ಬಗ್ಗೆ ವೈದ್ಯರಿಂದ ದೃಢಪಡಿಸಿ ಕೊಂಡಿದ್ದಾರೆ.

ಈ ಹಿನ್ನಲೆಯಲ್ಲಿ ತೆಕ್ಕಲಕೋಟೆ ವೃತ್ತ ನಿರೀಕ್ಷಕ ಕಾಳಿಕೃಷ್ಣ ಕಾನೂನು ಸುವ್ಯವಸ್ಥೆ ವಿಭಾಗದ ಪಿಎಸ್ ಐ ಶಿವಕುಮಾರ ನಾಯ್ಕ ಮತ್ತು ಠಾಣೆಯ ಇನ್ನಿತರೆ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಕಾನೂನು ಕ್ರಮಗಳನ್ನು ಜರುಗಿಸಿ ದೂರು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.


Post a Comment

0 Comments

Ad Code

Responsive Advertisement