ಕೋವಿಡ್ - 19ರ 2ನೇ ಅಲೆಯ ಭೀಕರ ಖಾಯಿಲೆಗೆ ಸಹಸ್ರಾರು ನಾಗರೀಕರು ಸಾವನಪ್ಪಿರುವುದು ಅತ್ಯಂತ ದು:ಖಕರ ಸಂಗತಿ ಎಂದು ಮಾನ್ಯ ಸಭಾಪತಿಗಳು ಸದನದಲ್ಲಿ ಇಂದು ತಿಳಿಸಿದರು.
ಇಂದು ಆರಂಭವಾದ ವಿಧಾನಪರಿಷತ್ತಿನ ಅಧಿವೇಶನದಲ್ಲಿ ಅಗಲಿದ ಗಣ್ಯರಾದ ಮಾಜಿ ಸಚಿವರು, ಮಾಜಿ ಸಂಸದರು, ವಿಧಾನಸಭೆ ಹಾಗೂ ವಿಧನ ಪರಿಷತ್ತಿನ ಮಾಜಿ ಸದಸ್ಯರಾಗಿದ್ದ ಕಮಲಾರ ಭೀಮಶಾ ಶಾಣಪ್ಪ, ಮಾಜಿ ಸಚಿವರು ಹಾಗೂ ವಿಧಾನ ಪರಿಷತ್ತಿನ ಮಾಜಿ ಸದಸ್ಯರಾಗಿದ್ದ ಡಾ: ಮುಮ್ತಾಜ್ ಅಲಿ ಖಾನ್, ವಿಧಾನ ಪರಿಷತ್ತಿನ ಮಾಜಿ ಸದಸ್ಯರು ಹಾಗೂ ಕವಿಗಳಾಗಿದ್ದ, ಡಾ. ಸಿದ್ದಲಿಂಗಯ್ಯ, ವಿಧಾನ ಪರಿಷತ್ತಿನ ಮಾಜಿ ಸದಸ್ಯರಾಗಿದ್ದ, ಎಸ್. ಎಂ. ಆನಂದ್, ಮಾಜಿ ಸಚಿವರು ಹಾಗೂ ಹಾಲಿ ವಿಧಾನಸಭೆಯ ಸದಸ್ಯರಾಗಿದ್ದ ಉದಾಸಿ ಚನ್ನಬಸಪ್ಪ ಮಹಾಲಿಂಗಪ್ಪ, ವಿಧಾನ ಸಭೆಯ ಮಾಜಿ ಸಭಾಧ್ಯಕ್ಷರು, ಮಾಜಿ ಸಚಿವರು ಹಾಗೂ ಮಾಜಿ ಸಂಸದರಾಗಿದ್ದ ಕೃಷ್ಣ, ಮಾಜಿ ಸಂಸದರು, ಮಾಜಿ ಸಚಿವರು ಹಾಗೂ ವಿಧಾನ ಸಭೆಯ ಮಾಜಿ ಸದಸ್ಯರಾಗಿದ್ದ ಡಾ. ಜಿ. ಮಾದೇಗೌಡ, ಮಾಜಿ ಸಂಸದರಾಗಿದ್ದ ಷಣ್ಮುಖಪ್ಪ ಬಸಪ್ಪ ಸಿದ್ನಾಳ, ಮಾಜಿ ಸಂಸದರಾಗಿದ್ದ ಎಂ ರಾಜಗೋಪಾಲ, ಕೇಂದ್ರದ ಮಾಜಿ ಸಚಿವರು ಹಾಗೂ ವಿಧಾನ ಸಭೆಯ ಮಾಜಿ ಸದಸ್ಯರಾಗಿದ್ದ ಬಾಬಾಗೌಡ ರುದ್ರಗೌಡ ಪಾಟೀಲ್, ಮಾಜಿ ಸಚಿವರು ಹಾಗೂ ವಿಧಾನಸಭೆಯ ಮಾಜಿ ಸದಸ್ಯರಾಗಿದ್ದ ಎ.ಕೆ. ಅಬ್ದುಲ್ ಸಮದ್, ಕನ್ನಡ ನಿಘಂಟು ತಜ್ಞರಾದ ಪ್ರೊ.ಜಿ. ವೆಂಕಟಸುಬ್ಬಯ್ಯ, ಹಿರಿಯ ಕವಿ ಜರಗನಹಳ್ಳಿ ಶಿವಶಂಕರ್, ಶಿಲ್ಪಕಲಾವಿದ ಷಣ್ಮುಖಪ್ಪ ಕಾಶಪ್ಪ ಯರಕರ, ಚಲನಚಿತ್ರ ನಟರಾದ ಅರವಿಂದ, ಯುವ ಚಲನಚಿತ್ರ ನಟ ಸಂಚಾರಿ ವಿಜಯ್, ಹಿರಿಯ ಶಿಲ್ಪ ಕಲಾವಿದೆ ಕನಕಮೂರ್ತಿ ಹಿರಿಯ ವಿದ್ವಾಂಸ ಡಾ. ಲಕ್ಷ್ಮಿತಾತಾಚಾರ್, ನೃತ್ಯ ಕಲಾವಿದೆ ಬಿ. ಭಾನುಮತಿ, ಹಿರಿಯ ತಜ್ಞ ವೈದ್ಯ ಡಾ. ಅಶೋಕ ರಾಮಣ್ಣ ಸೊನ್ನದ, ಸ್ವಾತಂತ್ರ್ಯ ಹೋರಾಟಗಾರ ಹಾರೋಹಳ್ಳಿ ಶ್ರೀನಿವಾಸಯ್ಯ ದೊರೆಸ್ವಾಮಿ, ಹಿರಿಯ ಸಾಹಿತಿ ಪ್ರೊ. ವಸಂತ ಕುಷ್ಟಗಿ, ಹಿರಿಯ ಶಿಕ್ಷಣ ತಜÐ ಪ್ರೊ. ಎಂ.ಐ. ಸವದತ್ತಿ ಹಿರಿಯ ಚಲನಚಿತ್ರ ನಟಿ ಜಯಂತಿ, ಖ್ಯಾತ ವೈದ್ಯೆ ಹಾಗೂ ಲೇಖಕಿ ಡಾ. ಹೆಚ್. ಗಿರಿಜಮ್ಮ ಅವರುಗಳ ನಿಧನಕ್ಕ ಸಂತಾಪ ಸೂಚಿಸಿ ಎರಡು ನಿಮಿಷಗಳ ಮೌನಾಚರಣೆ ಮಾಡಿದರು
.
ರಾಜ್ಯದ ಹಾಗೂ ರಾಷ್ಟ್ರದ, ರಾಜಕೀಯ ಕ್ಷೇತ್ರ, ಸಾಹಿತ್ಯ ಕ್ಷೇತ್ರ, ವಿಜ್ಞಾನ ಕ್ಷೇತ್ರ ಮತ್ತು ಸಮಾಜ ಸೇವೆಯಲ್ಲಿ ತೊಡಗಿದ್ದ, ಹಲವಾರು ಖ್ಯಾತನಾಮರು ಮೃತಪಟ್ಟಿರುವುದು ಹಾಗೂ ಕೋವಿಡ್ ವಾರಿಯರ್ಸ್‍ಗಳು ಸೇರಿದಂತೆ ವಿಶೇಷವಾಗಿ ತಮ್ಮ ಜೀವನದ ಹಂಗನ್ನು ತೊರೆದು ಹಗಲಿರುಳು ರೋಗಿಗಳ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ವೈದ್ಯರು ಹಾಗೂ ನರ್ಸ್‍ಗಳ ನಿಸ್ವಾರ್ಥ ಸೇವೆಯನ್ನು ಬಹಳ ಗೌರವದಿಂದ ಸ್ಮರಿಸುತ್ತದೆ ಎಂದು ಸದನದಲ್ಲಿ ತಿಳಿಸಿದರು.
ನಂತರ ಸಭಾ ನಾಯಕರಾದ ಕೋಟಾ ಶ್ರೀನಿವಾಸ ಪ್ರಜಾರಿ ಹಾಗೂ ವಿರೋಧ ಪಕ್ಷದ ನಾಯಕರಾದ ಎಸ್.ಆರ್. ಪಾಟೀಲ್ ಅವರು ಮೃತರುಗಳ ಆತ್ಮಕ್ಕೆ ಸದ್ಗತಿಯನ್ನು ಕೋರುತ್ತಾ ಅವರು ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ ಪರಮಾತ್ಮನು ಕರುಣಿಸಲಿ ಎಂದು ಪ್ರಾರ್ಥಿಸಿದರು.
0 Comments