ಬಳ್ಳಾರಿ ಸೆ 13. ಬಳ್ಳಾರಿ ನಗರದ ಎಪಿಎಂಸಿ ಪೋಲೀಸ್ ಠಾಣೆಯ ಪೋಲಿಸರು ಶ್ಲಾಘನೀಯದ ಕೆಲಸವನ್ನು ಮಾಡಿದ್ದಾರೆ. ಒಬ್ಬ ಆರೋಪಿಯನ್ನು ಬಂಧಿಸಿ 11 ದ್ವಿಚಕ್ರ ವಾಹನಗಳನ್ನು ಸ್ವಾಧೀನ ಮಾಡಿಕೊಂಡಿದ್ದಾರೆ. ಅಂದಾಜು ಬೆಲೆಯ ಮೊತ್ತ 5.50 ಲಕ್ಷ ರೂ ಎಂದು ನಗರದ ಡಿ.ವೈ.ಎಸ್.ಪಿ. ಹೆಚ್.ಬಿ ರಮೇಶ್ ಕೂಮಾರ್,ಬ್ರೂಸ್‌ಪೇಟೆ ಪೋಲಿಸ್ ಇನ್ಸ್ಪೆಕ್ಟರ್ ಆರ್.ನಾಗರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎ.ಪಿ.ಎಂ.ಸಿ ಠಾಣೆಯು ಪಿ.ಎಸ್.ಐ.ಪರಶುರಾಮ್ ಅವರು ಆಂದ್ರಾಳು, ಬೊಮ್ಮನಹಾಳು ರಸ್ತೆ ನಲ್ಲಿ ಹೊಗುವ ಸಮಯದಲ್ಲಿ ಒಬ್ಬ ವ್ಯಕ್ತಿ ವಾಹನದಲ್ಲಿ ನಿಂತಿದ್ದು ಪೋಲಿಸರನ್ನು ನೋಡಿ ಪರಾರಿ ಯಾಗಲು ಪ್ರಯತ್ನ ಮಾಡಿದ್ದರಿಂದ ಅನುಮಾನ ಬಂದು ಪೋಲಿಸರು ಅವನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡಿದ್ದಾರೆ.ಅನಂತಪುರ ಜಿಲ್ಲೆಯ ಕಲ್ಯಾಣದುರ್ಗ ತಾಲೂಕಿನ ಕುಂದುರ್ಪಿ ಮಂಡಲ,ಬೋದಪಲ್ಲಿ ಗ್ರಾಮದ ಪಾತಣ್ಣ(34)ತಂದೆ ಲೇಟ್ ರಾಜಪ್ಪ ಎಂದು ತಿಳಿದು ಬಂದಿದೆ.
ಇವನು ಅಂತರಾಜ್ಯ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುವ ಕಳ್ಳ ಎಂದು ತಿಳಿದು ಬಂದಿದೆ.ಇವನು ನಗರದ ಬ್ರೂಸ್ ಪೇಟೆ, ಗಾಂಧಿನಗರ ಠಾಣೆಯ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನಗಳನ್ನು ಕಳವು ಮಾಡಿದ್ದಾನೆ ಎಂದು ತಿಳಿದು ಬಂದಿದೆ. ನಗರದಲ್ಲಿ ವಾಹನಗಳ ಕಳವು ಜಾಸ್ತಿ ಆಗುತ್ತಿರುವ ಹಿನ್ನೆಲೆಯಲ್ಲಿ ನಗರದ ಡಿ.ವೈ.ಎಸ್.ಪಿ.ಹೆಚ್.ಬಿ ರಮೇಶ್ ಕೂಮಾರ್,ಬ್ರೂಸ್ ಪೇಟೆ ಪೋಲಿಸ್ ಇನ್ಸ್ಪೆಕ್ಟರ್ ಆರ್.ನಾಗರಾಜ್ ವಿಶೇಷ ತಂಡವನ್ನು ರಚನೆ ಮಾಡಿದ್ದರು.
ಇದನ್ನು ಚಾಲೆಂಜ್ ಅಗಿ ಸ್ವೀಕಾರ ಮಾಡಿದ ಪಿ.ಎಸ್.ಐ.ಪರಶುರಾಮ ಹಗಲು ರಾತ್ರಿ ಕರ್ತವ್ಯ ನಿರ್ವಹಿಸಿ ಅಂತರಾಜ್ಯದ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.ಇವರ ಕಾರ್ಯವೈಖರಿಯನ್ನು ಗುರುತಿಸಿ ಮತ್ತು ಠಾಣೆಯು ಸಿಬ್ಬಂದಿಗೆ ಪೋಲಿಸ್ ವರಿಷ್ಠ ಅಧಿಕಾರಿಗಳು ಸೈದುಲ್ ಅಡಾವತ್ ಅವರು ಶ್ಲಾಘಿಸಿದ್ದಾರೆ. ವಶ ಪಡಿಸಿಕೊಂಡ ದ್ವಿಚಕ್ರವಾಹನಗಳನ್ನು ನ್ಯಾಯಾಲಯದ ಮುಖಾಂತರ ಮಾಲಿಕರಿಗೆ ಹಸ್ತಾಂತರಿಸಿಲಿದ್ದೇವೆ ಎಂದು ಎಸ್.ಐ. ಪರುಶುರಾಮ್ ಅವರು ತಿಳಿಸಿದರು.

0 Comments