ಪುರವರ ಗ್ರಾಮದಿಂದ ದೊಡ್ಡ ಹೊಸಹಳ್ಳಿ ಯವರೆಗೂ ರಸ್ತೆ ಕಾಮಗಾರಿಗೆಂದು ,ರಸ್ತೆ ಅಗೆದು ಜಲ್ಲಿ ಮತ್ತು ಗ್ರೌಟ್ ಪುಡಿ ಹಾಕಿದ್ದಾರೆ. ಮೂರು ತಿಂಗಳಿನಿಂದಲೂ ಕಾಮಗಾರಿ ಸ್ಥಗಿತ ಗೊಂಡಿದೆ. ಸಮಸ್ಯೆ ಅದಲ್ಲ ! ಈ ರಸ್ತೆಯ ಧೂಳಿನದು !!!
ರಸ್ತೆಯಲ್ಲಿ ಹರಡಿದ ಜಲ್ಲಿ ಹಾಗೇ ಇದ್ದು .ಸಣ್ಣಜಲ್ಲಿಗೆ ಚಕ್ರಗಳು ಸಿಲುಕಿ ದಿನಾಲು ಕೂಡ ಅದೆಷ್ಟೋ ದ್ವಿಚಕ್ರ ವಾಹನದವರು ಪೆಟ್ಟು ಮಾಡಿಕೊಂಡಿದ್ದಾರೋ ಲೆಕ್ಕವಿಲ್ಲ ! ವಾಹನಗಳು ಓಡಾಡುವಾಗ ಏಳುವ ಧೂಳು, ರಸ್ತೆ ಪಕ್ಕದ ಮನೆಗಳಿಗೆ ಹರಡಿಕೊಳ್ಳುತ್ತದೆ.
ಪರವರ, ಗಂಕಾರನಹಳ್ಳಿ ಕ್ರಾಸ್ ,ಮತ್ತು ದೊಡ್ಡ ಹೊಸಹಳ್ಳಿ ಗ್ರಾಮಗಳಲ್ಲಿ ,ರಸ್ತೆ ಪಕ್ಕದಲ್ಲಿರುವ ಮನೆಗಳವರ ಗೋಳಂತೂ ಹೇಳತೀರದು. ಮನೆಗಳಲ್ಲಿರುವ ಎಳೆ ಕೂಸುಗಳು ,ಬಾಣಂತಿಯರು ಧೂಳಿನ ಅಲರ್ಜಿ ಇರುವ ವೃದ್ದರು ಪದೇ ಪದೇ ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ.
ಇನ್ನು,ಪುರವರ ಮತ್ತು ಬ್ಯಾಲ್ಯ ಸರ್ಕಾರಿ ಪ್ರೌಢ ಶಾಲೆಗಳಿಗೆ ಹೋಗುವ ವಿಧ್ಯಾರ್ಥಿಗಳಿಗೆ ನಿತ್ಯವೂ ಧೂಳಿನ ಸ್ನಾನ ತಪ್ಪಿದ್ದಲ್ಲ.
ಎಲ್ಲ ಸಮಸ್ಯೆಗಳನ್ನು , ಸಂಬಂದಿಸಿದ ಗುತ್ತಿಗೆ ದಾರರ ಗೆ ಹೇಳಿ,ದಿನವೂ ಮೂರು ನಾಲಕ್ಕು ಬಾರಿ ನೀರನ್ನಾದರೂ ಹಾಕಿಸಲು ಕೇಳಿಕೊಂಡರೂ ಸಮಸ್ಯೆ ಬಗೆ ಹರಿದಿಲ್ಲ. ದಯವಿಟ್ಟು ಸಂಬಂದ ಪಟ್ಟವರು ಇತ್ತ ಗಮನ ಹರಿಸಿ,ಪುರವರ,ಗಂಕಾರನಹಳ್ಳಿ, ದೊಡ್ಡ ಹೊಸಹಳ್ಳಿ ಗ್ರಾಮಗಳ ರಸ್ತೆ ಪಕ್ಕದ ಜನರ ಸಮಸ್ಯೆಗಳನ್ನು ಬಗೆ ಹರಿಸಿಕೊಡಬೇಕೆಂದು ಇಲ್ಲಿನ ಜನರು ಕೇಳುತ್ತಿದ್ದಾರೆ.
Varthajala, Madhugiri, Tumkur Dist.,


0 Comments