Ticker

6/recent/ticker-posts

Ad Code

Responsive Advertisement

ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ತುಕ್ಕು ಹಿಡಿದಿರುವ ಆಟಿಕೆಗಳು

ಮಧುಗಿರಿ :ತಾಲೂಕಿನ ಪುರವರ ಹೋಬಳಿ ವ್ಯಾಪ್ತಿಯ ಗೊಂದಿಹಳ್ಳಿ ಗ್ರಾಮ ಪಂಚಾಯಿತಿ, ಗೊಂದಿಹಳ್ಳಿ ಗ್ರಾಮದ ಸಾರ್ವಜನಿಕ ಆಸ್ಪತ್ರೆಯ ಆವರಣದ ಸ್ಥಿತಿ ಕಣ್ಣಿಗೆ ಕಟ್ಟಿದಂತಿದೆ. ಗೊಂದಿಹಳ್ಳಿಯ ಸರ್ಕಾರಿ ಶಾಲೆಗೆ ಬಂದಿದ್ದ0ತಹ ಆಟಿಕೆಯ ಸಲಕರಣೆಗಳು ಸಂಪೂರ್ಣವಾಗಿ ಶಾಲೆಯ ಆವರಣದಲ್ಲಿ ಮಕ್ಕಳಿಗೆ ಆಟವಾಡಲು ಹಾಕದೆ, ಕೆಲವೊಂದು ಆಟಿಕೆಯ ಉಪಕರಣಗಳನ್ನು ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಹಾಕಿರುವುದು ಕಂಡು ಬಂದಿದೆ. ಇಂತಹ ಸಮಯದಲ್ಲಿ ಜನರ ಮತ್ತು ವಿದ್ಯಾರ್ಥಿಗಳ ಆಕ್ರೋಶಕ್ಕೆ ಭಾರೀ ಟೀಕೆಗೆ ಕಾರಣವಾಗಿತ್ತು. 

ಅಂತೆಯೇ, ಆಕ್ರೋಶಕ್ಕೆ ಕಾರಣವಾಗಿದ್ದರೂ ಸಹ ನಿರ್ಲಕ್ಷ್ಯ ವಹಿಸಿದ್ದರು. ಶಾಲಾ ಆವರಣದಲ್ಲಿ ಮಕ್ಕಳಿಗೆ ಉತ್ತಮ ಆರೋಗ್ಯ ವೃದ್ಧಿಸಿ ಕೊಳ್ಳಲು ಹಾಕಬೇಕಾದಂತಹ ಉಪಕರಣಗಳು ಇಂದು ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಗಿಡಗಂಟಿಗಳ ನಡುವೆ ತುಕ್ಕು ಹಿಡಿದಿವೆ. 

ಅನಾಥ ಸ್ಥಿತಿಯಲ್ಲಿ ಬಿದ್ದಿರುವ ಆಟಿಕೆಯ ಸಾಮಗ್ರಿಗಳು ಮಳೆ ಬಿಸಿಲು ಗಾಳಿಗೆ ತಮ್ಮ ಬಣ್ಣಗಳನ್ನು ಕಳೆದುಕೊಳ್ಳುವುದರೊಂದಿಗೆ ತುಕ್ಕು ಹಿಡಿದಿರುವುದು ಕಂಡುಬAದಿದೆ. ಇದನ್ನು ನಿರ್ವಹಿಸುತ್ತಿರುವ ಸಂಬ0ಧಪಟ್ಟ ವ್ಯಕ್ತಿಗಳ ನಿರ್ಲಕ್ಷö್ಯವೇ ಈ ದುಃಸ್ಥಿತಿಗೆ ಕಾರಣ ಎನ್ನಲಾಗಿದೆ.

ಈ ವಾತಾವರಣದ ಸುತ್ತಲೂ ಪಾರ್ಥೇನಿಯಂ ಗಿಡಗಳು ಮತ್ತು ಬೇಲಿ ಗಿಡಗಂಟಿಗಳು ಬೆಳೆದಿದ್ದು ,ಶುಚಿ ಮಾಡದೆ ಇರುವುದು ಹಾವು ಮತ್ತು ಚೇಳುಗಳು ನೆಲೆಸಲು ಆವಾಸ ಸ್ಥಾನವಾಗಿದೆ ಎನ್ನುವುದರಲ್ಲಿ ತಪ್ಪೇನಿಲ್ಲ. ಇಲ್ಲಿನ ಅಕ್ಕಪಕ್ಕದ ಜನರು ಮತ್ತು ಆಸ್ಪತ್ರೆಗೆ ಆಗಮಿಸುವ ಜನರು ಈ ಬಯಲಿನಲ್ಲಿ ಓಡಾಡಲು ಹೆದರುತ್ತಿದ್ದಾರೆ. ಇದರಲ್ಲಿ ಹಾವು ಅಥವಾ ಚೇಳುಗಳು ಸೇರಿಕೊಂಡರು ಯಾರ ಕಣ್ಣಿಗೂ ಸಮೃದ್ಧವಾಗಿ ಕಾಣದಂತೆ ಬೆಳೆದಿದೆ.

ಹಸಿರಿಗೆ ಅತಿವೇಗದಲ್ಲಿ ಆವರಿಕೊಳ್ಳುವ ಸೊಳ್ಳೆಗಳು ಇಲ್ಲಿ ಹೆಚ್ಚಿನದಾಗಿ ಕಂಡುಬರುತ್ತದೆ. ಸೊಳ್ಳೆಗಳಿಂದ ಹಲವು ಬಗೆಯ ರೋಗರುಜಿನಗಳು ಹರಡುವುದಕ್ಕೆ ವಾತಾವರಣ ಆಹ್ವಾನ ಕೊಟ್ಟಂತೆ ಇದೆ. ಇಲ್ಲಿನ ಜನರು ಸಂಬ0ಧಪಟ್ಟವರಿಗೆ ಹೇಳಿಯೂ ಸಾಕಾಗಿದೆ. 

`ನಿವೃತ್ತ ಸಹಾಯಕ ಶಿಕ್ಷಕರಾದ ಜಿ.ಎಚ್. ಗೋವಿಂದಪ್ಪನವರು ಮಾತನಾಡಿ ಸಾರ್ವಜನಿಕರು ಇಲ್ಲಿ ಓಡಾಡಲು ಮತ್ತು ಮಕ್ಕಳುಗಳ ಹೆಚ್ಚಿನ ಓಡಾಟ ಇರುವುದರಿಂದ ತುಂಬಾ ತೊಂದರೆಯಾಗುವುದೆ0ದು ಗೊತ್ತಿದ್ದರೂ ಸಹ ಸ್ಪಂದಿಸದಿರುವುದು ನಿಜಕ್ಕೂ ಅಸಡ್ಡೆ. 

ಇಂತಹ ಕೊರೋನಾ ಸಂದರ್ಭದಲ್ಲಿ ಸಾರ್ವಜನಿಕರು ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಆದ್ದರಿಂದ ಆಸ್ಪತ್ರೆಯ ವಾತಾವರಣ ಶುಭ್ರವಾಗಿದ್ದು ಅಷ್ಟು ಧನಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಈಗಲಾದರೂ ಕಣ್ಣುಮುಚ್ಚಿಕೊಂಡು ಕುಳಿತಿರುವ ಸಂಬ0ಧಪಟ್ಟವರು ಆಸ್ಪತ್ರೆಯ ಆವರಣವನ್ನು ಶುಚಿಗೊಳಿಸಲು ಮುಂದಾದರೆ ಆರೋಗ್ಯಕ್ಕೆ ಅಷ್ಟೇ ಸಹಾಯವಾದೀತು’ ಎಂದರು.



Post a Comment

0 Comments

Ad Code

Responsive Advertisement