ಬಳ್ಳಾರಿ ಸೆ 02. ದಿನಾಂಕ: 01.09.2021ರಂದು ಶೋಟಖಾನ್ ಕರಾಟೆ ಡು ಅಸೋಸಿಯೇಷನ್ ಶಿವಮೊಗ್ಗ ಇವರು ನಡೆಸಿದ ಮಲ್ನಾಡ್ ಓಪನ್ ನ್ಯಾಷನಲ್ ಲೆವೆಲ್ ಕರಾಟೆ ಚಾಂಪಿಯನ್ ಶಿಪ್-2021 ಇದನ್ನು ಶಿವಮೊಗ್ಗ ನಗರದ ಸ್ಕೌಟ್ಸ್ ಭವನದಲ್ಲಿ ನಡೆಸಿದರು.ಈ ಸ್ಪರ್ಧೆಯಲ್ಲಿ ನಮ್ಮ ಟ್ರಸ್ಟಿನ ಕರಾಟೆ ವಿದ್ಯಾರ್ಥಿಯಾದ ಅಮನ್‌ರಾಜ್ ರವರು ಭಾಗವಹಿಸಿ 18 ವರ್ಷ ಮೇಲ್ಪಟ್ಟ ಕಠ ವಿಭಾಗದಲ್ಲಿ ಬಂಗಾರದ ಪದಕ ಮತ್ತು 45 ರಿಂದ 55 ಕೆಜಿ ಕುಮತಿ ವಿಭಾಗದಲ್ಲಿ ಕಂಚಿನ ಪದಕವನ್ನು ಪಡೆದಿದ್ದಾನೆ ಎಂದು ಶ್ರೀ ಪಂಚಾಕ್ಷರಿ ಮಾರ್ಷಿಯಲ್ ಆರ್ಟ್ಸ್ ಟ್ರಸ್ಟ್ನ ಬಂಡ್ರಾಳ್ ಮೃತ್ಯುಂಜಯಸ್ವಾಮಿ ತಿಳಿಸಿದ್ದಾರೆ.
ಈ ಸ್ಪರ್ಧೆಯಲ್ಲಿ ರಾಜ್ಯದ ಹಲವಾರು ಜಿಲ್ಲೆಗಳಿಂದ ಮತ್ತು ಹೊರ ರಾಜ್ಯದಿಂದ ಸುಮಾರು 200 ಕ್ಕೂ ಹೆಚ್ಚು ನುರಿತ ಕರಾಟೆ ಪಟುಗಳು ಭಾಗವಹಿಸಿದ್ದರು.ವಿದ್ಯಾರ್ಥಿ ಅಮನ್‌ರಾಜ್ ರವರ ಈ ಸಾಧನೆಗೆ ಸಂಸ್ಥೆಯ ಗೌರವಾಧ್ಯಕ್ಷರಾದ ವಿಕ್ರಮ್ ಮಣಿಪಾಲ್‌ರವರು ಮತ್ತು ಅಧ್ಯಕ್ಷರಾದ ಬಂಡ್ರಾಳ್ ಮೃತ್ಯುಂಜಯ ಸ್ವಾಮಿ ಮತ್ತು ಉಪಾಧ್ಯಕ್ಷರಾದ ಶಬರಿ ರವಿಚಂದ್ರನ್ ಅಭಿನಂದಿಸಿದ್ದಾರೆ.
-VARTHAJALA, BELLARY

0 Comments