Ticker

6/recent/ticker-posts

Ad Code

Responsive Advertisement

BELLARY : ಆಹಾರ ನಿಗಮದ ಸಾರಿಗೆ ಒಪ್ಪಂದ ಅಕ್ರಮಗಳ ಬಗ್ಗೆ ದೂರು

ಬಳ್ಳಾರಿ ಸೆ 02. ಬಳ್ಳಾರಿ ಜಿಲ್ಲಾ ಲಾರಿ ಓರ‍್ಸ್ ಟ್ರಾನ್ಸಪೋರ್ಟ್ ಕಮಿಷನ್ ಏಜೆಂಟ್ ಅಂಡ್ ಟ್ರೇಡರ್ಸ್ ಅಸೋಸಿಯೇಷನ್, ಬಳ್ಳಾರಿ ಸಂಘದವತಿಯಿAದ  ಭಾರತ ಆಹಾರ ನಿಗಮ ಸಾರಿಗೆ (ಟೆಂಡರ್) ಒಪ್ಪಂದ ಅಕ್ರಮವಾಗಿ ನಡೆಯುತ್ತಿದೆ ಎಂದು ಬಳ್ಳಾರಿಯ ಅಪರ ಜಿಲ್ಲಾಧಿಕಾರಿಗಳಿಗೆ ದೂರು, ಮನವಿ ನೀಡಿದ್ದಾರೆ. 

ಸರ್ಕಾರ ಕೊಡುತ್ತಿರುವ ಕೂಲಿ ಹಣವನ್ನು ಹಮಾಲಿಗಳಿಗೆ ಕೊಡದಿರುವುದು,ಒಪ್ಪಂದ ಹೊಂದಿರುವ ಲಾರಿಗಳನ್ನು ಹೊರತುಪಡಿಸಿ ಬೇರೆ ಲಾರಿಗಳಲ್ಲಿ ಸರಕುಗಳನ್ನು ಸಾಗಾಣೆ ಮಾಡುವುದು. ಒಳ್ಳೆ ಸರಕುಗಳನ್ನು ಬದಲಿಸಿ ಕಡಿಮೆ ಗುಣಮಟ್ಟ ಸರಕುಗಳನ್ನು ಸಾಗಿಸುತ್ತಿರುವುದು.ಕಾಂಟ್ರಕ್ಟ್ ಟೆಂಡರ್ ಸಮಯ ಮುಗಿದ ನಂತರವೂ ಹಾಗೆ ಸರಕುಗಳನ್ನು ಸಾಗಿಸುತ್ತಿರುವುದು.ಸರಕುಗಳನ್ನು ರೂಟ್ ಬದಲಿಸಿ ಅಂದರೆ ಕಳ್ಳ ರೂಟ್‌ಗಳಲ್ಲಿ ಸಾಗಿಸುತ್ತಿರುವುದು.ಪಬ್ಲಿಕ್ ಟೆಂಡರ್ ಇಲ್ಲದ ಹಾಗೆ ಟೆಂಡರ್‌ನ್ನು ಗೊತ್ತಾಗದ ಹಾಗೆ ಕೇವಲ ಈ ಮೂರು ವ್ಯಕ್ತಿಗಳಿಗೆ ಟೆಂಡರ್ ಕೊಡುತ್ತಿರುವುದು.ಆಹಾರ ಪದಾರ್ಥಗಳನ್ನು ಸಾಗಿಸಲು ಕಾಂಟ್ರಾಕ್ಟ್ ಪಡೆದುಕೊಂಡು ಲಾರಿಗಳಲ್ಲಿ ಕೆಮಿಕಲ್ ಸಂಬAಧಿ ಲೋಡ್‌ಗಳನ್ನು ಮಾಡಿಸುತ್ತಿರುವುದು. 1992 ರಿಂದ ಈವರೆಗೆ ಹಮಾಲಿಗೆ ಯಾವುದೇ ರೀತಿಯ ಕೂಲಿ ಹಣವನ್ನು ಕೊಟ್ಟಿರುವುದಿಲ್ಲಾ.ಹಮಾಲಿಗಳಿಗೆ ಕೂಲಿ ಮಾಡು ಸಮಯದಲ್ಲಿ ದುರಂತ ಹೊಂದಿ ದೈಹಿಕ ತೊಂದರೆಗಳಾದರೆ ಕಾಂಟ್ರಾಕ್ಟ್ ಯಾವುದೇ ಜವಬ್ಧಾರಿಯನ್ನು ವಹಿಸುತ್ತಿಲ್ಲ.ಹಲವು ವರ್ಷಗಳಿಂದ ಕೇವಲ ಮೂರು ಜನ ಕಾಂಟ್ರಾಕ್ಟ್ ಪಡೆದುಕೊಳ್ಳುತ್ತಿರುವುದು ಅನುಮಾನಕ್ಕೆ ಎಡೆ ಮಾಡಿದೆ. ಈ ಎಲ್ಲಾ ಅಕ್ರಮ ವ್ಯವಹಾರಗಳನ್ನು ನೋಡಿದಲ್ಲಿ ಇದು ಫುಡ್ ಕಾಪ್ರೋರೇಷನ್ ಆಪ್ ಇಂಡಿಯಾ ಬದಲಾಗಿ ಫುಡ್ ಕರಪ್ಸನ್ ಇನ್‌ಕಮ್ ನಂತೆ ವರ್ತಿಸುತ್ತಿದೆ ಎಂದು ದೂರಿದ್ದಾರೆ. 

ಆದ ಕಾರಣ ಎಲ್ಲಾ ವಿಷಯಗಳ ಬಗ್ಗೆ ನಮ್ಮ ಸಂಘದವತಿಯಿ0ದ ತಮಗೆ ತಿಳಿಯಪಡಿಸುವುದೇನೆಂದರೆ ಸರ್ಕಾರ ಇದೆಯೋ ಇಲ್ಲವೋ ನಮಗೆ ಗೊತ್ತಾಗುತ್ತಿಲ್ಲ. ದಯಮಾಡಿ ಆದಷ್ಟು ಬೇಗ ಆಳವಾದ ವಿಚಾರಣೆ ನಡೆಸಿ ಇವರ ಮೇಲೆ ಕ್ರಮ ಕೈಗೊಳ್ಳಬೇಕಾಗಿ ಸಂಘದ ಗೌರವಾಧ್ಯಕ್ಷರಾದ ವೈ ಪ್ರತಾಪ್ ರೆಡ್ಡಿ, ಜಿಲ್ಲಾ ಉಪಾಧ್ಯಕ್ಷರಾದ ಬಿ ಅಬ್ದುಲ್ ರವೂಫ್, ಜಿಲ್ಲಾ ಪ್ರಧಾನಕಾರ್ಯದರ್ಶಿಗಳಾದ ಪಬ್ಬಾತಿ ಪಾರ್ಥ ನರಸಿಂಹರಾವ್, (ಬಾಬಾಯ್) ಸಾರಥಿ ಟ್ರಾನ್ಸ್ ಫೋರ್ಟ್ನ ಸರೇಶ್ ಮತ್ತು ಪದಾಧಿಕಾರಿಗಳು ಮನವಿ ಮಾಡಿಕೊಳ್ಳುತ್ತಿದ್ದಾರೆ. 

VARTHAJALA, BELLARY

Post a Comment

0 Comments

Ad Code

Responsive Advertisement