ರಾಮನಗರ, ಬಿಡದಿ; ವಿಧಾನಸಭೆ ಚುನಾವಣೆಗೆ ತಯಾರಿ ನಡೆಸುತ್ತಿರುವ ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ನಾಳೆಯಿಂದ ನಾಲ್ಕು ದಿನಗಳ ಕಾಲ ಜೆಡಿಎಸ್ ಮಿಷನ್-123 ಎಂಬ ಕಾರ್ಯಾಗಾರವನ್ನು ಆಯೋಜಿಸಿದ್ದಾರೆ.
ರಾಮನಗರ ಜಿಲ್ಲೆಯ ಬಿಡದಿ ಬಳಿ ಇರುವ ತಮ್ಮ ಹೆಚ್. ಡಿ.ಕೆ. ತೋಟದ ಮನೆಯಲ್ಲಿ ಕಾರ್ಯಾಗಾರ ನಡೆಯಲಿದ್ದು, ಕಾರ್ಯಾಗಾರದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧ್ಯಕ್ಷರು, ಪ್ರಮುಖ ಮುಖಂಡರು ಹಾಗೂ ಬೆಂಗಳೂರು ನಗರದ ನಾಯಕರು ಭಾಗಿಯಾಗಲಿದ್ದಾರೆ ಎಂದು ಮಾದ್ಯಮಕ್ಕೆ ತಿಳಿಸಿದರು.
ಕಾರ್ಯಾಗಾರದಲ್ಲಿ 123 ಜನ ಜೆಡಿಎಸ್ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿ ಅವರಿಗೆ ಗ್ರೀನ್ ಕಾರ್ಡ್ ವಿತರಣೆ ಮಾಡಲಾಗುವುದು. ಆ ಬಳಿಕ ಅಭ್ಯರ್ಥಿ ಆಗ ಬಯಸುವ, ಯಾರು ಗ್ರೀನ್ ಕಾರ್ಡ್ ಪಡೆದಿರುವರೋ ಅಂತವರಿಗೆ ರಾಜಕೀಯ ತರಬೇತಿ ನೀಡಲಾಗುವುದು. ಗ್ರೀನ್ ಕಾರ್ಡ್ ಪಡೆದ ಪ್ರತಿಯೊಬ್ಬರನ್ನೂ ತಮ್ಮ ತಮ್ಮ ಕ್ಷೇತ್ರದಲ್ಲಿ ಪಕ್ಷದ ಪರವಾಗಿ ಕೆಲಸ ಮಾಡಲು ಬಿಟ್ಟು, ಆ ಬಳಿಕ ಮುಂದಿನ ಜನವರಿ ವರೆಗೆ ಆ ಅಭ್ಯರ್ಥಿಗಳ ಕಾರ್ಯವನ್ನು ವೀಕ್ಷಿಸಿ ನಂತರ ಅವರ ಕಾರ್ಯ ಮತ್ತು ಸಂಘಟನೆಯನ್ನು ನೋಡಿ ಯೆಲ್ಲೋ ಅಥವಾ ರೆಡ್ ಕಾರ್ಡ್ ವಿತರಣೆ ಮಾಡಲಾಗುವುದು ತಿಳಿಸಿದರು.
ಜೆಡಿಎಸ್ ಪಕ್ಷವು ನಾಯಕರನ್ನು ತಯ್ಯಾರಿ ಮಾಡುವ ಕಾರ್ಖಾನೆ ಇದ್ದಂತೆ ಎಂದು ಹೇಳಿದರು. ಈಗಾಗಲೇ ಹಲವಾರು ನಾಯಕರು ಜೆಡಿಎಸ್ನಿಂದ ಹೋದವರು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದಲ್ಲಿ ಇದ್ದಾರೆ ಎಂದು ಹೇಳಿದರು. ಜೆಡಿಎಸ್ ಪಕ್ಷವನ್ನು ಯಾರ್ಯಾರು ಆಡಿಕೊಳ್ಳುತಿರುವರೋ ಅವರಿಗೆಲ್ಲ ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷದ ಶಕ್ತಿ ಏನು ಅಂತ ತೋರಿಸಲಾಗುವುದು ಎಂದು ಹೇಳಿದರು.
ಕಾರ್ಯಾಗಾರಕ್ಕಾಗಿ ತೋಟದ ಮನೆಯಲ್ಲಿ ತಯಾರಿ ಭರದಿಂದ ಸಾಗುತ್ತಿದೆ. ಮಾಜಿ ಪ್ರಧಾನ ಮಂತ್ರಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್. ಡಿ. ದೇವೇಗೌಡ ಅವರ ನೇತೃತ್ವದಲ್ಲಿ ಕಾರ್ಯಾಗಾರ ನಡೆಯಲಿದ್ದು, ನಿಖಿಲ್ ಕುಮಾರಸ್ವಾಮಿ ಹಾಗೂ ಪ್ರಜ್ವಲ್ ರೇವಣ್ಣ ಸಹ ಕಾರ್ಯಾಗಾರದಲ್ಲಿ ಭಾಗಿಯಾಗಲಿದ್ದಾರೆ.
Shiva Prasad G 7204714959

0 Comments