ಕೇಂದ್ರ ಸರ್ಕಾರ, ಮೂರು ಕೃಷಿ ಕಾಯ್ದೆಗಳನ್ನು ಘೋಷಣೆ ಮಾಡಿದ ಒಂದು ವರ್ಷ ಹಾಗೂ ದೆಹಲಿಯಲ್ಲಿನ ಐತಿಹಾಸಿಕ ರೈತ ಹೋರಾಟಕ್ಕೆ ಹತ್ತು ತಿಂಗಳು ಪೂರ್ಣಗೊಳ್ಳುತ್ತಿರುವ ಸಂದರ್ಭದಲ್ಲಿ “ರೈತಾಪಿ ಕೃಷಿ”ಯನ್ನು ನಾಶ ಮಾಡಿ “ಕೃಷಿ”ಯನ್ನು ಕಾರ್ಪೋರೇಟ್ ಕಂಪನಿಗಳಿಗೆ ಒಪ್ಪಿಸಲು ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳು ಹಾಗೂ ವಿದ್ಯುತ್ ಮಸೂದೆಯನ್ನು ರದ್ದು ಮಾಡಬೇಕು ಹಾಗು ಕೃಷಿ ಉತ್ಪನ್ನಗಳ ಉತ್ಪಾದನೆಯ ವೆಚ್ಚದ ಮೇಲೆ ಶೇ. 50 ರಷ್ಟು ಲಾಭವನ್ನು ಖಾತರಿ ಮಾಡುವ “ಕನಿಷ್ಠ ಬೆಂಬಲ ಬೆಲೆ ಕಾನೂನು” ಜಾರಿಗೆ ತರಬೇಕೆಂದು ಆಗ್ರಹಿಸಿ ಐದು ನೂರಕ್ಕೂ ಹೆಚ್ಚು ರೈತ ಸಂಘಟನೆಗಳನ್ನು ಒಳಗೊಂಡು ರಚನೆಯಾಗಿರುವ ಸಂಯುಕ್ತ ಕಿಸಾನ್ ಮೋರ್ಚಾ ( SKM) ಸೆಪ್ಟಂಬರ್ 27,2021ಕ್ಕೆ ಭಾರತ್ ಬಂದ್” ಗೆ ಕರೆ ನೀಡಿದೆ. ಈ ಭಾರತ್ ಬಂದ್ ಹೋರಾಟಕ್ಕೆ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.
ಅಂದು ನಡೆಯುವ ಕರ್ನಾಟಕ ಬಂದ್ ರಾಜ್ಯದಲ್ಲಿ ರೈತ ಕಾರ್ಮಿಕರು ಒಂದಾಗಿ ಯಶಸ್ವಿಗೊಳಿಸಬೇಕೆಂದು ಸಿಐಟಿಯು ಮನವಿ ಮಾಡಿದೆ.
ರಾಷ್ಟç ಮಟ್ಟದ ಮೂರು ಕೃಷಿ ಕಾಯ್ದೆಗಳು. ವಿದ್ಯುತ್ ಮಸೂದೆ. “ಕನಿಷ್ಟ ಬೆಂಬಲ ಬೆಲೆ ಕಾನೂನು” ಬೇಡಿಕೆಗಳ ಜೊತೆಗೆ ರಾಜ್ಯದ ಕೃಷಿ ಭೂಮಿಯನ್ನು ಶ್ರೀಮಂತರು. ಕಾರ್ಪೋರೇಟ್ ಕಂಪನಿಗಳಿಗೆ ವಹಿಸಲು ಜಾರಿಗೆ ತಂದಿರುವ “ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ”. ಕೃಷಿ ಉತ್ಪಾದನೆಯ ಜೊತೆಗೆ ಕೃಷಿ ಮಾರುಕಟ್ಟೆಯನ್ನು ಕಾರ್ಪೋರೇಟ್ ಕಂಪನಿಗಳಿಗೆ ದಾರೆ ಎರೆಯಲು ಜಾರಿಗೆ ತಂದಿರುವ “ಎಪಿಎಂಸಿ ಕಾಯ್ದೆ ತಿದ್ದುಪಡಿ” ಹೈನುಗಾರಿಕೆಯಲ್ಲಿ ತೊಡಗಿರುವ ಅಸಂಖ್ಯಾತ ರೈತರು, ಕೃಷಿಕೂಲಿಕಾರರು ಹಾಗೂ ದಲಿತರು, ಅಲ್ಪಸಂಖ್ಯಾತರ ಬದುಕು. ಆಹಾರದ ಹಕ್ಕಿನ ಮೇಲಿನ ದಾಳಿ ನಡೆಸುತ್ತಿರುವ “ಗೋಹತ್ಯೆ ನಿಷೇಧ ಕಾಯ್ದೆ” ಗೆ ತಂದಿರುವ ತಿದ್ದುಪಡಿಗಳನ್ನು ರಾಜ್ಯ ಸರ್ಕಾರ ಕೈ ಬಿಡಬೇಕು. ಅಲ್ಲದೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಪೋರೇಟ್ ಕಂಪನಿಗಳ ಪರವಾದ ನೀತಿಗಳಿಂದ ಕಾರ್ಮಿಕ ಕಾಯ್ದೆಗೆ ತಿದ್ದುಪಡಿಗಳನ್ನು ತಂದ ನಾಲ್ಕು ಕಾರ್ಮಿಕ ಸಂಹಿತೆಗಳಾಗಿ ಮಾರ್ಪಡಿಸಿರುವ ಕ್ರಮವನ್ನು ಕೈ ಬಿಡಬೇಕು. ಕಾರ್ಪೋರೇಟ್ ಕಂಪನಿಗಳಿಗೆ ಲಾಭ ಮಾಡಲು ಅಡುಗೆ ಅನಿಲ, ಪೆಟ್ರೋಲ್, ಡಿಸೇಲ್ ಇತ್ಯಾದಿ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಮೂಲಕ ಕೇಂದ್ರ ಸರ್ಕಾರ ನಡೆಸಿರುವ ಹಗಲು ದರೋಡೆಯನ್ನು ಕೈ ಬಿಡಬೇಕು. ಹಾಗೂ ನಾಲ್ಕು ಕಾರ್ಮಿಕ ಸಂಹಿತೆಗಳ ಜಾರಿ ಹಾಗೂ ಬ್ಯಾಂಕಿAಗ್, ವಿಮೆ, ಉಕ್ಕು, ವಿದ್ಯುತ್, ಕಲ್ಲಿದ್ದಲು, ಪೆಟ್ರೋಲಿಯಂ, ಭದ್ರತೆ, ರೈಲ್ವೇ, ಬಂದರು, ಏರ್ ಇಂಡಿಯಾ, ವಿಮಾನಯಾನ, ಟೆಲಿಕಾಂ, ಅಂಚೆ, ಬಾಹ್ಯಾಕಾಶ ವಿಜ್ಞಾನ ಮತ್ತು ಅಣು ವಿಜ್ಞಾನ ವಲಯಗಳ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣವನ್ನು ವಿರೋಧಿಸುತ್ತಾ, ಪಡಿತರ ವ್ಯವಸ್ಥೆಯ ಸಾರ್ವತ್ರೀಕರಣ ಮತ್ತು ನರೇಗಾ ಬಜೆಟ್‌ನ ಹೆಚ್ಚಳಕ್ಕಾಗಿ ಆಗ್ರಹಿಸುತ್ತಿರುವ ದೇಶದ ಕಾರ್ಮಿಕರು ಮತ್ತು ದುಡಿಯುವ ಜನರು, ಈ ಭಾರತ್ ಬಂದ್‌ಗೆ ಬೆಂಬಲ ಸೂಚಿಸಿ ಯಶಸ್ವಿಗೊಳಿಸಬೇಕೆಂದು ಸಿಐಟಿಯು ಮನವಿ ಮಾಡುತ್ತದೆ. ದೇಶದ ಬೆನ್ನೆಲುಬಾದ ರೈತರು ಮತ್ತು ಕಾರ್ಮಿಕರು ಒಗ್ಗಟ್ಟಾಗಿ ನಿಂತರೆ ಕೇಂದ್ರ ಸರ್ಕಾರಕ್ಕೆ ತನ್ನ ದುರಾಡಳಿತದ ಪರಿಣಾಮದ ಬಿಸಿ ಮುಟ್ಟುತ್ತದೆ. ದೇಶದ ಜನರ ಒಗ್ಗಟ್ಟನ್ನು ಮುರಿದು, ತನ್ನ ಕಾರ್ಪೋರೇಟ್ ಪರ ನೀತಿಗಳನ್ನು ಇನ್ನಷ್ಟು ವೇಗವಾಗಿ ಜಾರಿಗೆ ತಂದು, ಕಾರ್ಪೋರೇಟ್ ಮನೆತನಗಳ ಓಲೈಸಲು ಕೇಂದ್ರ ಸರ್ಕಾರವು ಜನರನ್ನು ಧರ್ಮದ ಹೆಸರಿನಲ್ಲಿ ಒಡೆಯಲು ಅವಕಾಶ ಕೊಡುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದಂತಾಗುತ್ತದೆ.
ಮೂರು ಕರಾಳ ಕೃಷಿ ಕಾನೂನುಗಳು ಹಾಗೂ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯುವ ತನಕ ಹಾಗೂ ಖಾಸಗೀಕರಣ ಮತ್ತು ರಾಷ್ಟಿçಯ ನಗದೀಕರಣ ಯೋಜನೆಯ ಮೂಲಕ ದೇಶವನ್ನು ಮಾರುವ ಹುನ್ನಾರವನ್ನು ಕೊನೆಗಾಣಿಸುವ ತನಕ ಈ ಜಂಟಿ ಹೋರಾಟ ಮುಂದುವರೆಯುತ್ತದೆ.

0 Comments