Ticker

6/recent/ticker-posts

Ad Code

Responsive Advertisement

MALLESHWARAM - ಮೂರ್ತಿ - ಸೀನ - ಪದ್ಮನಾಭ ನನ್ನ ಸ್ನೇಹಿತರಲ್ಲವೇ ???

ಬದುಕು ಎಷ್ಟೊಂದು ವಿಚಿತ್ರ ನೋಡಿ.ಒಳ್ಳೆಯ ಶಾಲೆಯಲ್ಲಿ ಓದಿದರೂ ಅಷ್ಟೇ ಸರ್ಕಾರಿ ಶಾಲೆಯಲ್ಲಿ ಓದಿದರೂ ಅಷ್ಟೇ.ನಮ್ಮ ಹಣೆ ಬರಹ ಅನ್ನುವುದು ಮಾತ್ರ ನಮ್ಮ ಶಕ್ತಿ ಮೆಟ್ಟಿ ನಿಂತು ನಮ್ಮನ್ನು ತುಳಿದು ಬಿಡುತ್ತದೆ.ನಾವು ಸದಾ ಜಾಗೃತರಾಗಿ ಜೀವನದಲ್ಲಿ ಮುಂದುವರೆಯಬೇಕು.ಮೂರ್ತಿ,ಶ್ರೀನಿವಾಸ (ಸೀನ) ಮತ್ತು ಪದ್ಮನಾಭ ನನ್ನ ಬಾಲ್ಯದ ಸ್ನೇಹಿತರು.ನಾವೆಲ್ಲಾ ಓದಿದ್ದು ನಮ್ಮ ಪ್ರಾಥಮಿಕ ಶಾಲೆ ಮಾರುತಿ ಬಡಾವಣೆಯ ಸರಸ್ವತಿ ವಿದ್ಯಾನಿಕೇತನ್. ಮೂರ್ತಿಯ ತಂದೆ ಸ್ವಾಮಿನಾಥನ್ ಅವರು ಸರ್ವೋದಯ ಶಾಲೆಯಲ್ಲಿ ಜವಾನರಾಗಿದ್ದರು ತಾಯಿ ಊದಿನ ಕಡ್ಡಿ ಮಾಡುವ ಕೆಲಸ.ಆರ್ ಶ್ರೀನಿವಾಸನ (ಸೀನ) ತಂದೆ ರಂಗಪ್ಪ ಬಿ ಎಚ್ ಇ ಎಲ್ ಉದ್ಯೋಗಿ - ತಾಯಿ ಕಾಲವಾಗಿದ್ದರು.ಪದ್ಮನಾಭನ ತಂದೆ ವೆಂಕೋಬ ರಾವ್ - ತಳ್ಳುಗಾಡಿ ವ್ಯಾಪಾರಿ ತಾಯಿ ಗೃಹಿಣಿ. 

ಮುಂದಿನ ದಿನಗಳಲ್ಲಿ ಮೂರ್ತಿ ಕಾರ್ಪೆಂಟರ್ ಆದ. ಶ್ರೀನಿವಾಸ ಆಟೋ ಡ್ರೈವರ್ ಪದ್ಮನಾಭ ತರಕಾರಿ ಗಾಡಿ ನಂತರದಲ್ಲಿ ಆಟೋ ಡ್ರೈವರ್.ಮೂರ್ತಿ ಮತ್ತು  ನಾನು ಒಟ್ಟಿಗೆ ನಮ್ಮ ಊಟದ ಸಮಯದಲ್ಲಿ ಹಂಚಿಕೊಂಡು ತಿಂದವರು.ಸೀನ ನನಗೆ ಬಾಲ್ಯದಲ್ಲಿ ಗಾಂಧಿ ಕ್ಲಾಸ್ ಸಿನಿಮಾ ತೋರಿಸುತ್ತಿದ್ದ. ಕಾಮಾಕ್ಷಿಪಾಳ್ಯದ ರುದ್ರೇಶ್ವರ ಈಗಿನ ವೀರೇಶ,ನಮ್ಮ ಮಲ್ಲೇಶ್ವರದ ಸಂಪಿಗೆ,ಗೀತಾಂಜಲಿ ಇಲ್ಲೆಲ್ಲಾ ಕರೆದುಕೊಂಡು ಹೋಗುತ್ತಿದ್ದ.ಅವನದೇ ದುಡ್ಡು. ಪದ್ಮನಾಭ ಕೂಡ ಧಾರಾಳ ಮನೋಭಾವದವನು. ಒಳ್ಳೆಯ ಸ್ನೇಹಿತ.ಇವರೆಲ್ಲಾ ಮಾಡಿದ ಒಂದೇ ತಪ್ಪು ಬಹಳ ಚಿಕ್ಕ ವಯಸ್ಸಿಗೆ ಮಧ್ಯಪಾನ ಮತ್ತು ಧೂಮಪಾನ ಅಭ್ಯಾಸ.ಇವರ ವಿಚಾರದಲ್ಲಿ ನನಗೆ ಬಹಳ ಬೇಸರವಾಗುತ್ತದೆ.ಒಳ್ಳೆಯ ಉಜ್ವಲ ಭವಿಷ್ಯ ಪಡೆಯಬಹುದಾಗಿದ್ದ ಇವರು ಕುಡಿತದ ಚಟಕ್ಕೆ ದಾಸರಾಗಿ ಬದುಕನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ. ಇವರ ಅಭ್ಯಾಸ ಇವರುಗಳ ಜೀವನದ ಹಾದಿ ಬದಲಿಸಿತು ಎಂಬ ದುಃಖ ನನಗಿದೆ ಏಕೆಂದರೆ ಇವರೆಲ್ಲಾ ಎಂದಿಗೂ ನನ್ನ ಬಾಲ್ಯದ ಆಪ್ತ ಸ್ನೇಹಿತರು. 

ನಿಮಗೆ ನೆನಪಿದೆಯೇ ? ವಿದ್ಯೆ ಎಂಬುದು ಬಳೆಗಳ ಮಲಾರವೇ .... ಈ ಮಾತನ್ನು ಕೇಳಿದ ತಕ್ಷಣ ತಿಳಿದವರಿಗೆ ನೆನಪಿಗೆ ಬರುವುದು ಬಂಕಾಪುರದಲ್ಲಿ ರನ್ನಮಯ್ಯ.ಕನ್ನಡ ಶ್ರೇಷ್ಠ ರನ್ನ.ಇಂದಿನ ಪೋಷಕರು ಮುಗಿಬಿದ್ದು ಪ್ರತಿಷ್ಟಿತ ಶಾಲಾ ಕಾಲೇಜುಗಳಲ್ಲಿ ಮಕ್ಕಳನ್ನು ಓದಿಸುತ್ತಾರೆ.ದೊನೇಶನ್ ಕೊಡಲೂ ಹಿಂದೂ ಮುಂದೂ ನೋಡುವುದಿಲ್ಲ .ನನ್ನ ಆಪ್ತ ಸ್ನೇಹಿತರೊಬ್ಬರು ತಮ್ಮ ಮಗನಿಗೆ ವೈದ್ಯಕೀಯ ಓದಿಸಬೇಕೆಂಬ ಅಭಿಲಾಶೆಯಿಂದ ಹಾಗೂ ಮಗನ ಅಂಕಗಳು ನಿರೀಕ್ಷಿತ ಮಟ್ಟದಲ್ಲಿ ಬರುವುದು ಒಂದು ಅಂದಾಜಿರುವುದರಿಂದ ಒಂದು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನಲವತ್ತು ಲಕ್ಷ ರೂಪಾಯಿಯನ್ನು ಆರು ವರ್ಷಗಳ ಹಿಂದೆ ಮುಂಗಡವಾಗಿ ಪಾವತಿಸಿದ್ದರು.ಒಳ್ಳೆಯ ಕಾನ್ವೆಂಟ್ ಶಾಲೆ,ಪ್ರತಿಷ್ಟಿತ ಕಾಲೇಜು,ಸಾಕಷ್ಟು ದೊನೇಶನ್ ಇದೆಲ್ಲಾ ಕೊಟ್ಟರೂ ವಿದ್ಯೆ ಎಂಬುದು ಎಲ್ಲರಿಗೂ ಒಲಿಯುವುದೇ ?

ನನ್ನ ಪ್ರೈಮರಿ ಸರಸ್ವತಿ ವಿದ್ಯಾನಿಕೇತನ್ ಶಾಲೆಯಿಂದ ಕನ್ನಡ ಮಾಧ್ಯಮದಲ್ಲಿ ನನ್ನ ಸಹಪಾಠಿ ಒಬ್ಬಳಿದ್ದಳು ಅವಳಿಗೆ ಒಂದು ವರ್ಷ ಚಿಕ್ಕವಳು ಒಂದು ತರಗತಿಯಲ್ಲಿ ಕಿರಿಯಳಾದ ಅದೇ ಶಾಲೆಯಲ್ಲಿ ಓದಿದ ಅವಳ ತಂಗಿ ಇದ್ದಳು.ಇಬ್ಬರ ತಂದೆ ಮಾಡುತ್ತಿದ್ದ ಉದ್ಯೋಗ ತಳ್ಳುವ ಗಾಡಿಯ ಮೇಲೆ ತರಕಾರಿ ವ್ಯಾಪಾರ.ಆದರೆ ಅಪ್ಪಟ ಗುಣವುಳ್ಳ ಕುಟುಂಬ.ಇಂದು ಅಕ್ಕ ಇಂಜಿನೀಯರಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದರೆ ತಂಗಿ ಎಂ ಬಿ ಬಿ ಎಸ್ ಹಾಗೂ ಎಂ ಎಸ್ ಮಾಡಿ ಹೆಸರಾಂತ ಸರ್ಜನ್.ಅವರ ಹೆಸರುಗಳನ್ನು ಇಲ್ಲಿ ಪ್ರಸ್ತಾಪ ಮಾಡುವುದು ಉಚಿತವಲ್ಲ.ಬಟ್ ಐ ರಿಯಲಿ ಫೀಲ್ ಗ್ರೇಟ್ ಅಬೌಟ್ ದೋಸ್ ಸಿಸ್ಟರ್ಸ್! ಹೌದು ಈ ಫೋಟೋದಲ್ಲಿ ನಾನೇನಾದರು ಕಾಣಿಸಿದೆನಾ ? ಛಾನ್ಸೇ ಇಲ್ಲ ಅಲ್ವಾ ? ಅದೇ ನಮ್ಮ ಬದುಕು.ಗುಂಪಿನಲ್ಲಿ‌ ಗೋವಿಂದನ ತರಹ ಬೆಳೆದ ಹುಡುಗರು ನಾವು.

-C.N. RAMESH

Post a Comment

0 Comments

Ad Code

Responsive Advertisement