Ticker

6/recent/ticker-posts

Ad Code

Responsive Advertisement

ಮಲ್ಲೇಶ್ವರದ ರಂಜನಿ ಸಂಗೀತ ಶಾಲೆಯ ರೂಪಾ ಶ್ರೀಧರ್

ಮಲ್ಲೇಶ್ವರದ ಸಂಗೀತ ಪರಂಪರೆಗೆ ಒಂದು ಹೆಸರಿದೆ.ಸಂಗೀತದಿಂದ ಕೆಲವರು ಬೆಳಕಿಗೆ ಬಂದರೆ ಸಂಗೀತದ ಮೂಲಕ ಹಲವರನ್ನು ಬೆಳಕಿಗೆ ತಂದ ವಿಶೇಷ ಗುರು ಪರಂಪರೆಯೂ ಮಲ್ಲೇಶ್ವರದಲ್ಲಿದೆ.ಬಹಳಷ್ಟು ಮಂದಿ ಸಂಗೀತ ಶಿಷ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದ ಒಂದು ಶಾಲೆ ರಂಜನಿ ಸಂಗೀತ ಶಾಲೆ.ರಂಜನಿ ಇನ್ಸ್ಟಿಟ್ಯೂಟ್ ಆಫ್ ಮ್ಯೂಸಿಕ್ ಎಂದು ಸುಮಾರು ಮಂದಿಗೆ ಪರಿಚಯವಿರುವ ಈ ಸಂಸ್ಥೆಯ ಮುಖ್ಯಸ್ಥರೇ ಶ್ರೀಮತಿ.ರೂಪಾ ಶ್ರೀಧರ್.  




ಅಕಸ್ಮಾತ್ ಎಂ ಎ ಶ್ರೀಧರ್ ಅವರ ಪರಿಚಯ ಮಲ್ಲೇಶ್ವರದ ದೇವಸ್ಥಾನದ ರಸ್ತೆಯ ಅವರ ಮನೆಯಲ್ಲಿ ಆದಾಗ ಅವರ ಮಡದಿ ಶ್ರೀಮತಿ.ರೂಪಾ ಶ್ರೀಧರ್ ಅವರನ್ನು ಮೊದಲ ಬಾರಿಗೆ ನೋಡಿದ್ದೆ.ಬಹಳ ಗಂಭೀರವಾಗಿ ರಾಜಕಳೆಯಿಂದ ಕಾಣುತ್ತಿದ್ದರು.ಸಂಗೀತ ದೈವದತ್ತವಾಗಿ ಬಂದ ವಿದುಷಿ ಅಂತ ಅನ್ನಿಸಿದರು.ಆದರೆ ಸಂಗೀತ ನನ್ನ ಕ್ಷೇತ್ರವಲ್ಲದ ಕಾರಣ ಮತ್ತೆ ಅವರ ಬಗ್ಗೆ ಹೆಚ್ಚು ತಿಳಿಯಲು ಹೋಗಲಿಲ್ಲ.ಅಪರೂಪಕ್ಕೆ ಅವರ ಕುಟುಂಬ ಮಲ್ಲೇಶ್ವರದಲ್ಲಿ ಸಿಗುತ್ತಿದ್ದಾಗ ಮಾತನಾಡಿಸುತ್ತಿದ್ದೆ. 

ಹೀಗೆಯೇ ಕಾಲ ಕಳೆದಂತೆ ಒಂದಷ್ಟು ಸಂಗೀತದ ಮಂದಿ ಪರಿಚಯವಾದಾಗ ನಿಮಗೆ ಶ್ರೀಮತಿ.ರೂಪಾ ಶ್ರೀಧರ್ ಗೊತ್ತಾ ಎಂದು ಕೇಳಿದರೆ ಬಹುತೇಕ ಮಂದಿ ಹೇಳಿದ್ದು ಅವರು ನನ್ನ ಗುರುಗಳು ! ಅವರ ಅನೇಕ ಶಿಷ್ಯರು ಸಂಗೀತದಲ್ಲಿ ಡಾಕ್ಟರೇಟ್ ಮಾಡಿದ್ದಾರೆ.ಶಿಕ್ಷಣ ಸಂಸ್ಥೆಗಳಲ್ಲೂ ಮತ್ತು ವೈಯಕ್ತಿಕವಾಗಿಯೂ ಶ್ರೀಮತಿ.ರೂಪಾ ಶ್ರೀಧರ್ ಅವರು ಸಂಗೀತ ಪಾಠ ಹೇಳಿಕೊಟ್ಟಿದ್ದಾರೆ.ಇನ್ನು ಅವರ ಮಗಳು ಮಧುವಂತಿ ಮತ್ತು ಅಳಿಯ ಸಂಪಗೋಡು ವಿಘ್ನರಾಜ ಅವರ ಉಲ್ಲೇಖವಿರುವ ಬರಹ ಪ್ರತ್ಯೇಕವಾಗಿ ಈಗಾಗಲೇ ಪ್ರಕಟಿಸಿರುವುದರಿಂದ ಅದರ ಪುನರಾವರ್ತನೆ ಈ ಲೇಖನದಲ್ಲಿ ಮಾಡಲು ಹೋಗಿಲ್ಲ. 

ಸಂಗೀತ ಲೋಕದ ದಿಗ್ಗಜರು ಮತ್ತು ಧೃವತಾರೆಗಳ ಜೊತೆ ಒಡನಾಟಗಳಿಂದ ಶ್ರೀಮತಿ.ರೂಪಾ ಶ್ರೀಧರ್ ಅವರು ಉನ್ನತ ಸ್ಥಾನದಲ್ಲಿ ಪೂಜನೀಯ ಗುರುಸ್ಥಾನದಲ್ಲಿ ಎದ್ದು ಕಾಣುತ್ತಾರೆ.ಸರಳವಾದ ಮಾತು ಪಾಂಡಿತ್ಯಪೂರ್ಣ ಸಂಗೀತದ ಬಗೆಗಿನ ಉಪನ್ಯಾಸಗಳನ್ನು ಮೇಡಂ ಅವರಿಂದ ಕೇಳುವುದೇ ಸೊಗಸು.ತನ್ಮಯತೆಯ ಲೋಕದಲ್ಲಿ ವಿಹರಿಸುವಂತಹ ಮನಸ್ಸಿಗೆ ಮುದ ನೀಡುವ ಅವರ ಹೃನ್ಮನ ಸೆಳೆಯುವ ಪರಿ ವಿಶಿಷ್ಟವಾದುದ್ದು. ಸ್ವಭಾವತಃ ಗಂಭೀರವಾಗಿ ಕಾಣಿಸಿಕೊಳ್ಳುವ ಅವರ ಸರಳತೆ ನಿಜಕ್ಕೂ ಬಹಳ ದೊಡ್ಡದು.ನನ್ನ ಬರವಣಿಗೆ ಮತ್ತು ನನ್ನ ಭಾಷಣಗಳನ್ನು ಮೆಚ್ಚಿ ಪ್ರೋತ್ಸಾಹದ ಮಾತುಗಳನ್ನು‌ ಆಡಿದವರ ಪೈಕಿ ಮೇಡಂ ಕೂಡಾ ಇದ್ದಾರೆ ಎನ್ನುವುದು ನನಗೆ ಸಂಭ್ರಮದ ವಿಚಾರ.ಮೇಡಂ ಬಗ್ಗೆ ಹೇಳಲೇ ಬೇಕಾದ ಮತ್ತೊಂದು ವಿಶೇಷವೆಂದರೆ ಬೆಂಗಳೂರು ಉತ್ತರಕ್ಕೂ ಬೆಂಗಳೂರು ದಕ್ಷಿಣಕ್ಕೂ ಕೊಂಡಿಯಂತೆ ಮೇಡಂ ಎರಡೂ ಭಾಗಕ್ಕೆ ಪರಿಚಿತರು.

-C.N.RAMESH

Post a Comment

0 Comments

Ad Code

Responsive Advertisement