ಕೊರೊನಾ ಹಾವಳಿಯಿಂದ ಉಂಟಾದ ದುಃಸ್ಥಿತಿ, ಕುಟುಂಬದ ಆರ್ಥಿಕ ಸಂಕಷ್ಟದಿಂದ ರಾಜ್ಯಾದ್ಯಂತ ಸುಮಾರು ಶೇ.20ರಷ್ಟು ವಿದ್ಯಾರ್ಥಿಗಳು 2019-2020ರಿಂದ ಈಚೆಗೆ ಪದವಿ ಶಿಕ್ಷಣವನ್ನು ಅರ್ಧಕ್ಕೆ ಮೊಟಕು ಗೊಳಿಸಿ ಉದ್ಯೋಗ ಮಾಡುತ್ತಿದ್ದಾರೆ. ಇಂಥ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಪುನಃ ಕಾಲೇಜಿಗೆ ಮರಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕೊರೊನಾದಿಂದ ತರಗತಿಗಳು ಸರಿಯಾಗಿ ನಡೆಯುತ್ತಿಲ್ಲ. ಓದು ಮುಂದುವರಿಸಿರುವ ಹಲವರು ಆನ್‌ಲೈನ್ ತರಗತಿಗಳಲ್ಲೂ ಪಾಲ್ಗೊಳ್ಳುತ್ತಿಲ್ಲ, ನೇರ ತರಗತಿಗೂ ಹೋಗುತ್ತಿಲ್ಲ. ಬದಲಾಗಿ ಈ ಅವಧಿಯಲ್ಲಿ ಸಣ್ಣಪುಟ್ಟ ಉದ್ಯೋಗ ಮಾಡುತ್ತಿದ್ದಾರೆ. ಹಲವರು ನರೇಗಾ ಉದ್ಯೋಗ ಚೀಟಿ ಮಾಡಿಸಿ ಕೊಂಡಿದ್ದಾರೆ. ನಗರಗಳಲ್ಲಿ ಆನ್‌ಲೈನ್ ಡೆಲಿವರಿ ಮತ್ತಿತರ ತಾತ್ಕಾಲಿಕ ಉದ್ಯೋಗ ಮಾಡುತ್ತಿದ್ದಾರೆ.
ಅನೇಕ ವಿದ್ಯಾರ್ಥಿಗಳು ಪರೀಕ್ಷೆ ಶುಲ್ಕ ಪಾವತಿಸುತ್ತಿದ್ದಾರೆ. ಆದರೆ ಕಾಲೇಜಿಗೆ ಬರುತ್ತಿಲ್ಲ. ಆನ್‌ಲೈನ್ ತರಗತಿಯಲ್ಲೂ ಇವರ ಹಾಜರಾತಿ ಇಲ್ಲ. ಇವರನ್ನು ಪತ್ತೆ ಮಾಡುವುದು ಕಷ್ಟಕರ ಎಂದು ಕಾಲೇಜು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ವಿವರ ನೀಡಿದ್ದಾರೆ.

0 Comments