ಕೋಲಾರ. ಶ್ರೀನಿವಾಸಪುರ ತಾಲೂಕಿನ ಅರಿಕೆರೆ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ವೈದ್ಧೆ ಹಾಗೂ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಕೃಷ್ಣಮ್ಮ (92) ಮಗ ವೆಂಕಟರವಣ (55) ಹಲ್ಲೆಗೊಳಗಾದವರಾಗಿದ್ದು ಗ್ರಾಮದ ಶ್ರೀನಿವಾಸ್, ಅನಿಲ್ ಎಂಬುವರು ಕ್ಷುಲ್ಲಕ ಕಾರಣಕ್ಕೆ ಕುಡಿದ ಅಮಲಿನಲ್ಲಿ ವೃದ್ದೆ ಹಾಗೂ ಮಗನ ಮೇಲೆ ಹಲ್ಲೆ ನಡೆಸಿದ್ದು ಈ ಬಗ್ಗೆ ದೂರು ನೀಡಲು ಹೋದ ವೃದ್ದೆ ದಂಪತಿಗಳನ್ನು ಶ್ರೀನಿವಾಸಪುರ ಠಾಣೆ ಪೋಲೀಸರು ದೂರು ಪಡೆಯದೆ ವಾಪಸ್ ಕಳುಹಿಸಿದ್ದಾರೆನ್ನಲಾಗಿದೆ. ನಂತರ ನ್ಯಾಯಕ್ಕಾಗಿ ಡಿಸಿ ಕಚೇರಿಗೆ ಬಂದ ವೃದ್ದೆ ಹಾಗೂ ಮಗನನ್ನ ಅಪರ ಜಿಲ್ಲಾಧಿಕಾರಿಗಳು ಆಂಬುಲೆನ್ಸ್ ಗೆ ಕರೆ ಮಾಡಿ ಇಬ್ಬರಿಗೂ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸುವಂತೆಯೂ ದುಷ್ಕರ್ಮಿಗಳನ್ನು ಬಂದಿಸುವಂತೆ ಪೋಲೀಸರಿಗೆ ಸೂಚನೆ ನೀಡಿದ್ದಾರೆ.


0 Comments