Ticker

6/recent/ticker-posts

Ad Code

Responsive Advertisement

75ನೇ ಸ್ವಾತಂತ್ರ್ಯೋತ್ಸವ ಸರಳ ಆಚರಣೆಗೆ ಕ್ರಮ: ಗೌರವ್ ಗುಪ್ತಾ

ಬೆಂಗಳೂರು ನಗರ ಜಿಲ್ಲೆ, .13 ( ಕರ್ನಾಟಕ ವಾರ್ತೆ) : 75ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಮೈದಾನದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಕೋವಿಡ್ ಮಾರ್ಗಸೂಚಿ ಅನ್ವಯ ಸರಳವಾಗಿ ಆಚರಿಸಲಾಗುವುದು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರಾದ ಗೌರವ್ ಗುಪ್ತಾ ಅವರು ಹೇಳಿದರು.

ಇಂದು ಮಾಣಿಕ್ ಷಾ ಮೈದಾನದಲ್ಲಿ 75ನೇ ಸ್ವಾತಂತ್ರ್ಯೋತ್ಸವ ದಿನಾಚಾರಣೆ ಪೂರ್ವಭಾವಿ ಸಿದ್ಧತೆ ಕುರಿತು ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರುಅಂದು ಬೆಳಿಗ್ಗೆ 9 ಗಂಟೆಗೆ  ಮಾನ್ಯ ಮುಖ್ಯಮಂತ್ರಿಗಳು ಧ್ವಜಾರೋಹಣ ನೆರವೇರಿಸಲಿದ್ದಾರೆನಂತರ ಪರೇಡ್ ವೀಕ್ಷಣೆರಾಷ್ಟ್ರಗೀತೆ ಮತ್ತು ನಾಡಗೀತೆಯೊಂದಿಗೆ ಗೌರವಂದನೆ ಸ್ವೀಕರಿಸಿದ ನಂತರ ನಾಡಿನ ಜನರಿಗೆ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಲಿದ್ದಾರೆಪರೇಡ್ ನಲ್ಲಿ 20 ತುಕಡಿಯಿದ್ದು ಸುಮಾರು 450 ಸೇನಾ ಸಿಬ್ಬಂದಿ ಭಾಗವಹಿಸಲಿದ್ದಾರೆಮೈದಾದಲ್ಲಿ ಒಂದು ಸಾವಿರ ಆಸನ ವ್ಯವಸ್ಥೆ ಕಲ್ಪಿಸಲಾಗಿದ್ದುಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ.  ನೂರು ಜನ ಕೋವಿಡ್ ವಾರಿಯರ್ಸ್  ಹಾಗೂ ಕೋವಿಡ್ -19 ರಿಂದ ಗುಣಮುಖರಾದ 25 ಜನರಿಗೆ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆಕಡ್ಡಾಯವಾಗಿ ಮಾಸ್ಕ್ ಧರಿಸಿಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ತಿಳಿಸಿದರು.


ಕೋವಿಡ್ ಶೀಲ್ಡ್ ಲಸಿಕೆಗೆ ಹೆಚ್ಚು ಬೇಡಿಕೆ ಇರುವುದರಿಂದ ಹೊಸದಾಗಿ 50 ಸಾವಿರ ಡೋಸ್ ಅನ್ನು ತರಿಸಲಾಗಿದ್ದು, ಪ್ರತಿಯೊಂದು ವಾರ್ಡ್ ಗೆ 250 ಡೋಸ್ ಹಂಚಿಕೆ ಮಾಡಲಾಗಿದೆ. ಪ್ರತಿದಿನ 60 ಸಾವಿರ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದ್ದು, 400 ಪ್ರಕರಣಗಳು ದಾಖಲಾಗುತ್ತಿವೆ. ಪ್ರಸ್ತುತ  ಕೋವಿಡ್ ಪ್ರಕರಣಗಳ ದರ 0.61 ರಷ್ಟಿದೆ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಕಮಲ್ ಪಂತ್ ಅವರು, ಬೆಂಗಳೂರು ನಗರದ ದಕ್ಷಿಣ ವಿಭಾದ ಉಪ ಆಯುಕ್ತರ ನೇತೃತ್ವದಲ್ಲಿ 10 ಜನ ಡಿ.ಸಿ.ಪಿಗಳನ್ನು, ಕೆ.ಎಸ್.ಆರ್.ಪಿ., ಸಿ..ಆರ್., ಸಿ.ಆರ್.ಟಿ., ಕೆ.ಎಸ್.ಎಫ್., ಕೆ..ಎಸ್.ಎಫ್., ಹಾಗೂ ಮಹಿಳಾ ಪೊಲೀಸ್ ಸಿಬ್ಬಂದಿಗಳನ್ನು  ಬಂದೋಬಸ್ತು  ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಮೈದಾನದ ಸುತ್ತಮುತ್ತ ಪ್ರದೇಶದಲ್ಲಿ ಸೂಕ್ಷ್ಮವಾಗಿ ನಿಗಾವಹಿಸಲು ಆಯಾಕಟ್ಟಿನ ಸ್ಥಳಗಳಲ್ಲಿ  ಸಿಸಿ ಟಿವಿ ಕ್ಯಾಮೆರಾಗಳನ್ನು ಹಾಗೂ ಬ್ಯಾರಿಕೇಡ್ ಸ್ಕ್ಯಾನರ್ ಗಳನ್ನು ಅಳವಡಿಸಲಾಗಿದೆ. ಯಾವುದೇ ವಿಪತ್ತು ಸಂಭವಿಸಿದಲ್ಲಿ  ತುರ್ತು ಸೇವೆಗಾಗಿ ಅಗ್ನಿ ಶಾಮಕ ಹಾಗೂ ಆಂಬುಲೆನ್ಸ್ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಪಾಸ್ ಹೊಂದಿದವರಿಗೆ ಮಾತ್ರ ಪ್ರವೇಶ ನೀಡಲಾಗುವುದು ಎಂದು ಹೇಳಿದರು,

ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಜೆ. ಮಂಜುನಾಥ್ ಸೇರಿದಂತೆ ಇನ್ನಿತರೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.


advt. :


Post a Comment

0 Comments

Ad Code

Responsive Advertisement